ಇನ್ನು ಮುಂದೆ ವಾಟ್ಸಪ್ ಮೂಲಕವೇ ಕೊರೋನ ಲಸಿಕೆ ಪಡೆಯಲು ಸಮಯ ನಿಗದಿಪಡಿಸಬಹುದು | ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ

ದೇಶದಾದ್ಯಂತ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಲು, ಹಲವು ಆಪ್ ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಹಾಗೆಯೇ ಹಲವು ಅಪ್ಲಿಕೇಶನ್‌ಗಳು ದೊಡ್ಡ ಪ್ರಮಾಣದಲ್ಲಿ ಈ ಅಭಿಯಾನದಲ್ಲಿ ಭಾಗವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸಾಪ್ ಕೂಡ ಈ ಓಟದಲ್ಲಿ ಹಿಂದುಳಿದಿಲ್ಲ. ಕಂಪನಿಯು ಮೈಗೋವ್ ಇಂಡಿಯಾ ( Mygov India) ಮತ್ತು ಹೆಲ್ತ್ ಮಿನಿಸ್ಟ್ರಿ (He ಎಸಿಕ್alth Ministry) ಯೊಂದಿಗೆ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಹೌದು, ಇನ್ಮುಂದೆ ಯಾವುದೇ ಬಳಕೆದಾರರು ಲಸಿಕೆ ಪಡೆಯಲು ತಮ್ಮ ಸ್ಲಾಟ್ ಅನ್ನು ವಾಟ್ಸಪ್ ನಲ್ಲಿಯೇ ಬುಕ್ ಮಾಡಬಹುದು. ಇದೇ ವೇಳೆ, ಲಸಿಕೆ ಪಡೆದ ಬಳಕೆದಾರರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ವಾಟ್ಸಪ್ ನಲ್ಲಿಯೇ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

ಕಂಪನಿಯ ಈ ಉಪಕ್ರಮವು ದೇಶದ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ. ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್(Will Cathcart) ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

Ad Widget / / Ad Widget

ಈ ಕುರಿತು ಟ್ವೀಟ್ ಮಾಡಿರುವ ವಿಲ್ ಕ್ಯಾತ್ಕಾರ್ಟ್, ಇದೀಗ ಎಲ್ಲಾ ಬಳಕೆದಾರರು ತಮ್ಮ ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ವಾಟ್ಸಪ್ ನಲ್ಲಿಯೇ ಬುಕ್ ಮಾಡಬಹುದು. ಈ ಬಗ್ಗೆ ಮೈಗೋವ್ ಇಂಡಿಯಾ(Mygov India) ಮತ್ತು ಹೆಲ್ತ್ ಮಿನಿಸ್ಟ್ರಿ(Health Ministry) ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ಇನ್ಮುಂದೆ ನೀವು ಸುಲಭವಾಗಿ ಲಸಿಕೆಗಾಗಿ ಅಪಾಯಿಂಟ್ಮೆಂಟ್ ಪಡೆಯಬಹುದು. ಆರಾಮಾಗಿ ಯಾವುದೇ ರೀತಿಯ ಗೊಂದಲಗಳಿಲ್ಲದೆ ನಿಮ್ಮ ಸ್ಲಾಟ್ ನ್ನು ಬುಕ್ ಮಾಡಬಹುದು.

ವಾಟ್ಸಪ್ ನಲ್ಲಿ ಸ್ಲಾಟ್ ಬುಕ್ ಮಾಡುವುದು ಹೇಗೆ?

• ಎಲ್ಲಕ್ಕಿಂತ ಮೊದಲು ವಾಟ್ಸಪ್ ನ ಅಧಿಕೃತ ಲಿಂಕ್ ಆಗಿರುವ https://wa.me/919013151515 ತೆರೆಯಿರಿ
• ಈ ಲಿಂಕ್ ನಿಮ್ಮನ್ನು @MyGovIndia ಕೋವಿಡ್ ಹೆಲ್ಪ್ ಡೆಸ್ಕ್ ಗೆ ಕೊಂಡೊಯ್ಯುತ್ತದೆ
• ಅಲ್ಲಿರುವ ‘Book Slot’ ಆಯ್ಕೆಯ ಮೇಲೆ ಕ್ಲಿಕ್ಕ್ ಮಾಡಿ
• ಸ್ಲಾಟ್ ಬುಕ್ ಮಾಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ.

ವ್ಯಾಕ್ಸಿನೇಷನ್ ಪ್ರಮಾಣಪತ್ರ ಹೇಗೆ ಡೌನ್ಲೋಡ್ ಮಾಡಬೇಕು?

ಈ ಕುರಿತು ಹೇಳಿಕೆ ನೀಡಿರುವ ವಿಲ್ ಕ್ಯಾತ್ಕಾರ್ಟ್, ಒಂದು ವೇಳೆ ಈಗಾಗಲೇ ನೀವು ಲಸಿಕೆಯನ್ನು ಹಾಕಿಸಿಕೊಂಡಿದ್ದರೆ, ನೀವು ನಿಮ್ಮ ವ್ಯಾಕ್ಕ್ಸಿನೆಶನ್ ಸರ್ಟಿಫಿಕೆಟ್ ಕೂಡ ಡೌನ್ಲೋಡ್ ಮಾಡಬಹುದು. ಹೆಲ್ಪ್ ಲೈನ್ ಸಂಖ್ಯೆಯನ್ನು ಬಳಸಿ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ತಿಂಗಳು ಇದುವರೆಗೆ ಸುಮಾರು 3 ಮಿಲಿಯನ್ ಗೂ ಅಧಿಕ ಜನರು ಈ ಹೆಲ್ಪ್ ಲೈನ್ ಸಂಖ್ಯೆಯನ್ನು ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: