ಹೊಸ ಬದುಕು ನೀಡುತ್ತೇನೆಂದು ಮಾತುಕೊಟ್ಟು ಎರಡನೇ ಮದುವೆಯಾದ, ನಂಬಿದ್ದಕ್ಕೆ 38 ದಿನಗಳ ಹಸುಗೂಸನ್ನೇ ಮಾರಿಬಿಟ್ಟ !!

ಹೊಸ ಜೀವನ ನೀಡುವುದಾಗಿ ಮಾತುಕೊಟ್ಟು ಎರಡನೇ ಮದುವೆಯಾದ ಪತಿ, ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಆಘಾತಕಾರಿ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಸಮಾಜ ಸೇವಕಿ ತರುಣಮ್ ಬಾನುವನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಮುಬಾರಕ್ ಗಾಗಿ ಹುಡುಕಾಟ ನಡೆಯುತ್ತಿದೆ. ಅಲ್ಲದೆ ಅಕ್ರಮವಾಗಿ ಮಗು ಪಡೆದಿದ್ದ ದಂಪತಿಯನ್ನು ಸಹ ಬಂಧಿಸಲಾಗಿದೆ. ಹದಿನೈದು ವರ್ಷದಿಂದ ಮಕ್ಕಳಿಲ್ಲದಿದ್ದಕ್ಕೆ ಮಗುವನ್ನು ಪಡೆದಿದ್ದಾಗಿ ಮಾಹಿತಿ ಆ ದಂಪತಿಗಳು ಹೇಳಿಕೆ ನೀಡಿದ್ದಾರೆ.

ತರುಣಮ್ ಬಾನು

ಆರೋಪಿ ತರುಣಮ್ ಬಾನು ಒಂದೇ ಮಗುವನ್ನು ಇಬ್ಬರಿಗೆ ಮಾರಾಟ ಮಾಡಲು ಮಾತುಕತೆ ಕೂಡ ನಡೆಸಿದ್ದಳು. ಮಗುವಿನ ತಂದೆ ಮುಬಾರಕ್ ಸಹ 38 ದಿನದ ಹಸುಗೂಸನ್ನ ಮಾರಾಟಕ್ಕೆ ಮುಂದಾಗಿದ್ದ. ಪೊಲೀಸರು ಪ್ರಕರಣ ಬೇಧಿಸಿದ್ದು, ಒಂದು ವಾರದ ಬಳಿಕ ಕಂದಮ್ಮ ತಾಯಿ ಮಡಿಲು ಸೇರಿದೆ.

Ad Widget
Ad Widget

Ad Widget

Ad Widget

ಘಟನೆಯ ವಿವರ :
ತರುಣಮ್ ಬಾನು ಅವರ ಮನೆಯಲ್ಲಿ ಶಿರೀನ್ ಎಂಬಾಕೆ ಕೆಲಸ ಮಾಡುತ್ತಿದ್ದಳು. ಮೊದಲನೇ ಪತಿಯಿಂದ ಗರ್ಭವತಿಯಾಗಿದ್ದ ಶಿರೀನ್ ಳ ಕಷ್ಟದ ಪರಿಸ್ಥಿತಿ ತಿಳಿದಿದ್ದ ತರುಣಮ್, ಆಕೆಯ ಮನೆಗೆ ಬರುತ್ತಿದ್ದ ಮುಬಾರಕ್ ಜೊತೆ ಎರಡನೇ ಮದುವೆ ಮಾಡಿಸಿದ್ದಳು.

ನಂತರ ಶಿರೀನ್ ಎರಡನೇ ಪತಿ ಮುಬಾರಕ್ ಗೆ ಮಗು ಮಾರಾಟದ ಪ್ಲಾನ್ ಬಗ್ಗೆ ಹೇಳಿದ್ದಳು. ಡೆಲಿವರಿ ಬಳಿಕ ಇತ್ತೀಚೆಗೆ ಒಂದು ತಿಂಗಳ ಹಸುಗೂಸಿಗೆ ಜ್ವರ ಕಾಣಿಸಿಕೊಂಡಿತ್ತು. ಆಗ ಪ್ಲಾನ್ ಮಾಡಿ ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಮುಬಾರಕ್ ಮಗುವನ್ನು ತೆಗೆದುಕೊಂಡು ಹೋಗಿ ತರುಣಮ್ ಕೈಗೆ ಕೊಟ್ಟಿದ್ದ. ಜ್ವರ ಬಂದಿದ್ದ ಮಗುವನ್ನು ಸಂಬಂಧಿಕರಿಗೆ 1.30 ಲಕ್ಷ ರೂ.ಗೆ ತರುಣಮ್ ಬಾನು ಮಾರಾಟ ಮಾಡಿದ್ದಳು. ಇದಕ್ಕಾಗಿ ಐವತ್ತು ಸಾವಿರ ಮುಂಗಡ ಹಣ ಪಡೆದಿದ್ದಳು.

ಈ ನಡುವೆ ಮಗುವನ್ನು ಕೇಳುತ್ತಿದ್ದ ತಾಯಿಗೆ ಆಸ್ಪತ್ರೆಯಲ್ಲಿದೆ ಎಂದು ಎರಡನೇ ಗಂಡ ಕಥೆ ಕಟ್ಟಿದ್ದ. ಆದರೆ ತರುಣಮ್ ಮಗು ಮಾರಾಟ ಮಾಡಿ ಹಣ ಪಡೆದು ಮುಬಾರಕ್ ಗೆ ಕೊಡದೆ ಸತಾಯಿಸುತ್ತಿದ್ದಳು. ಅಲ್ಲದೆ ಮತ್ತೊಬ್ಬರಿಗೆ ಅದೇ ಮಗುವಿನ ಪೋಟೋ ತೋರಿಸಿ 4.5 ಲಕ್ಷಕ್ಕೆ ಮಾರಾಟದ ಮಾತುಕತೆ ನಡೆಸಿದ್ದಳು. ಬೇರೆಯವರು ಹೆಚ್ಚಿನ ಹಣ ಕೊಡುತ್ತಾರೆ ಎಂದು ಮೊದಲು ಮಾರಾಟ ಮಾಡಿದ್ದವರ ಜೊತೆ ಗಲಾಟೆ ಮಾಡಿದ್ದಳು.

ಮಗು ಇಲ್ಲದೆ ಗಂಡನ ನಿರ್ಲಕ್ಷ್ಯ ಕಂಡು ಶಿರೀನ್ ಕಂಗಾಲಾಗಿದ್ದಳು. ಏನೋ ಗಲಾಟೆಯಾಗುತ್ತಿದೆ ಎಂದು ಸ್ಥಳಕ್ಕೆ ಬಂದ ವಿಲ್ಸನ್ ಗಾರ್ಡನ್ ಪೊಲೀಸರು, ತರುಣಮ್ ವಿಚಾರಣೆ ಮಾಡಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಮುಬಾರಕ್ ಎಸ್ಕೇಪ್ ಆಗಿದ್ದ. ಬಳಿಕ ಹಣಕ್ಕಾಗಿ ಮಗು ಮಾರಾಟ ಮಾಡಿದ ಬಗ್ಗೆ ಆರೋಪಿ ತರುಣಮ್ ಬಾಯ್ಬಿಟ್ಟಿದ್ದಳು. ಮಗು ಪತ್ತೆ ಮಾಡಿದ ವಿಲ್ಸನ್ ಗಾರ್ಡನ್ ಪೊಲೀಸರು, ಕಂದಮ್ಮನನ್ನು ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ.

ಮಗುವನ್ನ ರಕ್ಷಣೆ ಮಾಡಿ ಅಕ್ರಮವಾಗಿ ಮಗು ಪಡೆದಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಜೊತೆಗೆ ತರುಣಮ್ ಬಾನು ಕೂಡ ಅರೆಸ್ಟ್ ಆಗಿದ್ದಾಳೆ. ತಲೆ ಮರೆಸಿಕೊಂಡಿರುವ ಮುಬಾರಕ್ ಗಾಗಿ ಹುಡುಕಾಟ ನಡೆಯುತ್ತಿದೆ.

Leave a Reply

error: Content is protected !!
Scroll to Top
%d bloggers like this: