ಉತ್ತರ ಪ್ರದೇಶ ಮಾಜಿ ಸಿ.ಎಂ.ಕಲ್ಯಾಣ್ ಸಿಂಗ್ ಇನ್ನಿಲ್ಲ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕಲ್ಯಾಣ ಸಿಂಗ್ (89) ಇಂದು ಕೊನೆಯುಸಿರೆಳೆದಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ಆ.21) ರಾತ್ರಿ ನಿಧನರಾಗಿದ್ದಾರೆ. ಕಲ್ಯಾಣ ಸಿಂಗ್ ನಿಧನಕ್ಕೆ ಪ್ರಧಾನಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಕಲ್ಯಾಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

1992 ರಲ್ಲಿ ಬಾಬ್ರಿ ಮಸೀದಿ ಎನ್ನಲಾಗಿದ್ದ ಕಟ್ಟಡ ಧ್ವಂಸಗೊಂಡಿದ್ದಾಗ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕಟ್ಟಡ ನೆಲಕ್ಕೆ ಉರುಳಿದ ದಿನವೇ ಕಲ್ಯಾಣ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1997 ರಲ್ಲಿ ಮತ್ತೊಮ್ಮೆ ಸಿಎಂ ಆದರಾದರೂ 1999 ರಲ್ಲಿ ಅವರನ್ನು ಪಕ್ಷ ಪದಚ್ಯುತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದ ಕಲ್ಯಾಣ್ ಸಿಂಗ್ ತಮ್ಮದೇ ಸ್ವಂತ ಪಕ್ಷ ರಚಿಸಿದ್ದರು. ನಂತರ ಬಿಜೆಪಿಗೆ ವಾಪಸ್ಸಾಗಿದ್ದರು.

ಹಿಂದುಳಿದ ವರ್ಗಕ್ಕೆ ಸೇರಿದ ಕಲ್ಯಾಣ್ ಸಿಂಗ್ ಅವರು ತಮ್ಮ ನಾಯಕತ್ವ ಗುಣ ಮತ್ತು ಪ್ರಬಲ ಹಿಂದುತ್ವವಾದಿ ಚಳವಳಿಗಳ ಮೂಲಕ ಮುಖ್ಯಮಂತ್ರಿಯಾದರು.

ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾನಿ, ಮುರಳಿ ಮನೋಹರ ಜೋಷಿ ಅವರೊಂದಿಗೆ ಕಲ್ಯಾಣ್ ಸಿಂಗ್ ಸಹ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಎದುರಿಸಿ ನಿರ್ದೋಷಿಯಾಗಿ ಹೊರಬಂದಿದ್ದರು.

ಪುರಾಣ ಪ್ರಸಿದ್ದ ಮತ್ತು ಸಕಲ ಹಿಂದೂಗಳ ಪೂಜಿತ ಶ್ರಿ ರಾಮನ ಜನ್ಮಸ್ಥಾನದಲ್ಲಿದ್ದ ದೇವಾಲಯ ಕೆಡವಿ ಮತಾಂಧ ಬಾಬರ್ ಕಟ್ಟಿದ್ದ ಮಸೀದಿ ನೆಲಸಮ ಆದದ್ದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣಸಿಂಗ್ರ ಆಡಳಿತದ ಕಾಲದಲ್ಲಿ. ಅಂದು ಆಡ್ವಾಣಿ ಅವರು ಶುರುಮಾಡಿದ್ದ ರಥ ಯಾತ್ರೆ ಕೊನೆಗೆ ಮುಗಿದು ನಿಂತದ್ದು ಬಾಬರ್ ಮಸೀದಿ ದ್ವಂಸದಲ್ಲಿ. ಅಲ್ಲಿಗೆ ರಾಮಭಕ್ತರುಗಳ ಶತ ಶತಮಾನಗಳ ನೋವು ಕರಗಿತ್ತು. ಭಾರತೀಯ ಜನತಾ ಪಕ್ಷ ಆನಂತರದ ವರ್ಷಗಳಲ್ಲಿ ಬಲ ಪಡೆದುಕೊಂಡು ರಾಷ್ಟ್ರವ್ಯಾಪಿಯಾಗಿ ಹಬ್ಬಲು ಕಲ್ಯಾಣ್ ಸಿಂಗ್ ಕೂಡ ಪ್ರಮುಖ ಕಾರಣ. ಕಲ್ಯಾಣ್ ಸಿಂಗ್ ರನ್ನು ಆ ಕಾರಣಕ್ಕಾಗಿ ಹಿಂದೂ ಸಮಾಜ ದೀರ್ಘಕಾಲ ನೆನಪಲ್ಲಿ ಇಟ್ಟುಕೊಳ್ಳುತ್ತದೆ.

Leave A Reply

Your email address will not be published.