ಜ್ಞಾನ ತಪ್ಪಿ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್ ಅಧಿಕಾರಿ | ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ !

ಸುರಂಗ ಮಾರ್ಗದಲ್ಲಿರುವ ರೈಲ್ವೆ ಹಳಿ ಮೇಲೆ ಜ್ಞಾನ ಕಳೆದುಕೊಂಡು ಬಿದ್ದಿದ್ದ ವ್ಯಕ್ತಿಯನ್ನು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅಧಿಕಾರಿ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ತಾನು, ತನ್ನದು ಎನ್ನುವ ಅಹಂಗಳಲ್ಲಿ ಬದುಕುತ್ತಿರುವ ಜನರ ನಡುವೆ, ಈ ಅಧಿಕಾರಿಯೊಬ್ಬರು ತನ್ನ ಪ್ರಾಣವನ್ನೇ ಪಣಕಿಟ್ಟು ವ್ಯಕಿಯನ್ನು ರಕ್ಷಿಸಿರುವುದು ಆಶ್ಚರ್ಯವೇ ಸರಿ!

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿರೋದನ್ನು ಕಾಣಬಹುದು. ಈ ಸಮಯದಲ್ಲಿ ಅಲ್ಲೇ ಇದ್ದ ಅಧಿಕಾರಿಯೊಬ್ಬರು ಇದನ್ನು ಗಮನಿಸಿ, ತಕ್ಷಣ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ರೈಲ್ವೆ ಹಳಿಗೆ ಇಳಿದು ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ.

ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಕಾರಣ ಅವರನ್ನು ಎಷ್ಟೇ ಮೇಲಕ್ಕೆ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಆಗ ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಕೂಡ ಅಧಿಕಾರಿಯೊಂದಿಗೆ ಪ್ರಜ್ಞೆ ಕಳೆದುಕೊಂಡಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ನಂತರ ರೈಲು ಬರುತ್ತಿದ್ದಂತೆಯೇ ಇಬ್ಬರು ಫ್ಲಾಟ್ ಫಾರ್ಮ್ ನಿಂದ ಬೇಗ ಮೇಲೆ ಹತ್ತಿದ್ದಾರೆ. ಸದ್ಯ ಸಂತ್ರಸ್ತನನ್ನು ಜೆಸ್ಸಿ ಬ್ರಾಂಚ್ ಎಂದು ಗುರುತಿಸಲಾಗಿದೆ.

ಈ ಘಟನೆಗೆ ಕುರಿತಂತೆ ಅಧಿಕಾರಿ ಲುಡಿನ್ ಲೋಪೆಜ್, ನನ್ನ ಸಹಾಯದ ಅವಶ್ಯಕತೆ ಇರುವವರು ಯಾರೇ ಆದರೂ ನಾನು ಅವರಿಗೆ ಪ್ರತಿಕ್ರಿಯಿಸುತ್ತೇನೆ. ಯಾವುದನ್ನು ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.

ಅವರ ಈ ಸಜ್ಜನಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 2,35,000ಕ್ಕಿಂತಲೂ ಹೆಚ್ಚು ವ್ಯೂವ್ ಆಗಿದೆ.

ಅಧಿಕಾರಿಯ ಈ ಕರ್ತವ್ಯ ಪ್ರಜ್ಞೆ ಮತ್ತು ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.