ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಪಾಸಿಟಿವ್ ದರ |ಎರಡೂ ಡೋಸ್ ಲಸಿಕೆ ಪಡೆದ 500 ಮಂದಿಗೆ ಕೋವಿಡ್ ಪಾಸಿಟಿವ್ !!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಂಖ್ಯೆ ಏರಿಕೆ ಆಗುತ್ತಿದ್ದು,ಇದೀಗ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡೂ ಡೋಸ್ ಲಸಿಕೆ ಪಡೆದ 500 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.

ಈಗಾಗಲೇ ದಕ್ಷಿಣ ಕನ್ನಡದಲ್ಲಿ ಹಲವು ನಿಯಮಗಳು ಜಾರಿಯಲ್ಲಿದ್ದರೂ ಪಾಸಿಟಿವ್ ಸಂಖ್ಯೆ ಇಳಿಮುಖ ಕಾಣುತ್ತಿಲ್ಲ. ಇದಕ್ಕೆ ಜನರ ಬೇಜವಾಬ್ದಾರಿಯೇ ಕಾರಣ ಎನ್ನುತಿದ್ದಾರೆ ಅಧಿಕಾರಿಗಳು.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳುವ ಪ್ರಕಾರ ಲಸಿಕೆ ಪಡೆದವರಿಗೆ ಸೋಂಕಿನ ಲಕ್ಷಣ ಕಂಡು ಬಂದರೂ ಅಷ್ಟೇನು ಸಮಸ್ಯೆ ಇಲ್ಲ. ಆದರೆ ಅಂತಹವರು ತಪಾಸಣೆ ಮಾಡದೆ ನಗರದಲ್ಲಿ ತಿರುಗುವುದರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

ಕಳೆದೊಂದು ವಾರದಲ್ಲಿ ಕೇರಳದಿಂದ ಬಂದಿರುವ ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬರುತ್ತಿದ್ದು, ತಪಾಸಣೆಗೆ ಒಳಗಾದ 400 ಮಂದಿಯಲ್ಲಿ 250 ಮಂದಿ ಪಾಸಿಟಿವ್ ಆಗಿದ್ದಾರೆ. ಇವರೆಲ್ಲ ನೆಗೆಟಿವ್ ಸರ್ಟಿಫಿಕೇಟ್ ಇಟ್ಟುಕೊಂಡು ಮಂಗಳೂರಿಗೆ ಬಂದು ಆಯಾ ಕಾಲೇಜಿನ ಕೇಂದ್ರಗಳಲ್ಲಿ ಕ್ವಾರಂಟೈನ್ ಆಗಿದ್ದು, ವಿದ್ಯಾರ್ಥಿಗಳನ್ನು ಏಳು ದಿನಗಳ ಬಳಿಕ ತಪಾಸಣೆ ನಡೆಸಿದರೆ ಪಾಸಿಟಿವ್ ಕಂಡುಬರುತ್ತಿದ್ದಾರೆ.

ವಿದ್ಯಾರ್ಥಿಗಳನ್ನು ಸೂಕ್ತವಾಗಿ ಕ್ವಾರಂಟೈನ್ ಮಾಡಲು ಆಗದೇ ಇರುವ ಕಾಲೇಜು ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಕೇರಳದಿಂದ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕ್ವಾರಂಟೈನ್ ನಡೆಸುವುದು ಆಯಾಯ ಕಾಲೇಜು ಆಡಳಿತದ ಜವಾಬ್ದಾರಿಯಾಗಿದ್ದು, ಕಾಲೇಜು, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ ಆಯಾ ಹಾಸ್ಟೆಲಿನ ವಾರ್ಡನ್ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆರೋಗ್ಯ ಇಲಾಖೆಯ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಹೆಚ್ಚಿದ್ದು ಅಲ್ಲಿನ ಮಂದಿ ಪಾಸಿಟಿವ್ ಆದರೂ, ಅದರ ಬಗ್ಗೆ ಹೆಚ್ಚು ಕೇರ್ ಇಟ್ಟುಕೊಳ್ಳದೆ ಹೊರಗಡೆ ತಿರುಗಾಡುತ್ತಿದ್ದಾರೆ. ಇದರಿಂದಾಗಿ ಆ ಭಾಗದಲ್ಲಿ ಸೋಂಕು ಹೆಚ್ಚು ಹರಡುತ್ತಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ದಿನಕ್ಕೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಇದರಿಂದಾಗಿ ಇನ್ನೊಂದೆರಡು ತಿಂಗಳಲ್ಲಿ ಇತರ ಕಡೆಗಳಲ್ಲಿ ಜಾಸ್ತಿಯಾದರೂ, ದಕ್ಷಿಣ ಕನ್ನಡದಲ್ಲಿ ಅಂಥ ಪರಿಸ್ಥಿತಿ ಬರಲಿಕ್ಕಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದು. ಆದರೆ ಈಗ ಹತ್ತು ಸಾವಿರ ಜನರಲ್ಲಿ 300 ಆಸುಪಾಸಿನಲ್ಲಿ ಪಾಸಿಟಿವ್ ಬರುತ್ತಿದ್ದು, ಅವರನ್ನು ನಿಯಂತ್ರಣ ಮಾಡುವುದರಿಂದ ಸೋಂಕನ್ನು ತಡೆಗಟ್ಟಿದಂತೆ ಎನ್ನುತ್ತಿದ್ದಾರೆ.

Leave A Reply

Your email address will not be published.