ಗೃಹಿಣಿಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ |ಹಬ್ಬದ ಸಮಯದಲ್ಲೇ ಖಾದ್ಯ ತೈಲದ ಬೆಲೆ ಇಳಿಕೆ!!

ಅಡುಗೆ ಎಣ್ಣೆಗೆ ಕಳೆದ ಹಲವು ತಿಂಗಳುಗಳಿಂದ ಬೆಲೆಗಳು ವಿಪಾರೀತ ಏರಿಕೆ ಕಂಡು ಬಂದಿದ್ದು ,ಇದೀಗ ಕೇಂದ್ರ ಸರ್ಕಾರವು ಎಣ್ಣೆ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯತೈಲದ ಬೆಲೆ ಇಳಿಕೆ ಮಾಡುವ ಉದ್ದೇಶದಿಂದ ತೆರಿಗೆ ಕಡಿಮೆ ಮಾಡಲಾಗಿದ್ದು,
ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸೀಮಾ ಸುಂಕ ಶೇಕಡ 15 ರಷ್ಟು ಇದ್ದು, ಅದನ್ನು ಶೇಕಡ 7.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.

ಸೀಮಾಸುಂಕ ಕಡಿತಗೊಳಿಸುವ ಜೊತೆಯಲ್ಲೇ ಪರೋಕ್ಷ ತೆರಿಗೆಗಳ ಕೇಂದ್ರ ಮಂಡಳಿ ವತಿಯಿಂದ ರಿಫೈನ್ಡ್ ಸೋಯಾ ಎಣ್ಣೆ ಮತ್ತು ರಿಫೈನ್ಡ್ ಸೂರ್ಯ ಕಾಂತಿ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ಶೇಕಡ 45 ರಿಂದ ಶೇಕಡ 37.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.

ಇದರಿಂದ ವಿದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುತ್ತದೆ. ಪ್ರಸ್ತುತ, ಒಂದು ವರ್ಷದಲ್ಲಿ 60,000 ರಿಂದ 70,000 ಕೋಟಿಗಳನ್ನು ಖರ್ಚು ಮಾಡುವ ಮೂಲಕ 15 ದಶಲಕ್ಷ ಟನ್ ಖಾದ್ಯ ತೈಲವನ್ನ ವಿದೇಶದಿಂದ ಖರೀದಿಸಬೇಕಾಗಿದೆ. ಯಾಕಂದ್ರೆ, ದೇಶೀಯ ಉತ್ಪಾದನೆಯು ಸುಮಾರು 70-80 ಲಕ್ಷ ಟನ್‌ಗಳು. ದೇಶವು ತನ್ನ ಜನಸಂಖ್ಯೆಗೆ ವಾರ್ಷಿಕವಾಗಿ ಸುಮಾರು 25 ಮಿಲಿಯನ್ ಟನ್ ಖಾದ್ಯ ತೈಲವನ್ನು ಬಯಸುತ್ತದೆ.

ಭಾರತವು ಕಳೆದ ವರ್ಷ ಮಲೇಷ್ಯಾ ಮತ್ತು ಇಂಡೋನೇಷಿಯಾದಿಂದ 7.2 ಮಿಲಿಯನ್ ಟನ್ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ 34 ಲಕ್ಷ ಟನ್ ಸೋಯಾಬೀನ್ ಎಣ್ಣೆಯನ್ನ ಆಮದು ಮಾಡಿಕೊಳ್ಳಲಾಗಿದೆ ಮತ್ತು 2.5 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಮತ್ತು ಉಕ್ರೇನ್ʼನಿಂದ ಆಮದು ಮಾಡಿಕೊಳ್ಳಲಾಗಿದೆ. ತಾಳೆ ಎಣ್ಣೆಯನ್ನು ಮಲೇಷ್ಯಾ ಮತ್ತು ಇಂಡೋನೇಷ್ಯಾ ಎರಡರಿಂದಲೂ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಬೇಡಿಕೆ ಮತ್ತು ಪೂರೈಕೆಯ ಈ ಅಂತರದಿಂದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಪರಿಣಾಮ ಬೀರುತ್ತವೆ.

ನಿನ್ನೆಯಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಸೆಪ್ಟಂಬರ್ 30 ರವರೆಗೆ ಮಾತ್ರ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.

Leave A Reply

Your email address will not be published.