ಸಂಘಪರಿವಾರ ತನ್ನ ಅಟ್ಟಹಾಸ ಮುಂದುವರಿಸಿ ಗಲಭೆ ಸೃಷ್ಟಿಸಲು ಪ್ರಯತ್ನಿಸುವುದಾದರೆ ಸಂವಿಧಾನ ಬದ್ದವಾಗಿ ತಡೆಯಲು ಪಾಪ್ಯುಲರ್ ಫ್ರಂಟ್ ಹಿಂಜರಿಯುವುದಿಲ್ಲ: ಜಾಬಿರ್ ಅರಿಯಡ್ಕ

ಪುತ್ತೂರು: 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮಾಡುವ ನೆಪದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ
ಸಂಘಪರಿವಾರದ ಹಿಡನ್ ಅಜೆಂಡಾಗಳನ್ನು ಈಡೇರಿಸಲು ಕಬಕ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ನಿಲುವು ತೆಗೆದುಕೊಂಡು ಹೇಡಿ ಸಾವರ್ಕರ್ ಚಿತ್ರವನ್ನು ಸ್ವಾತಂತ್ರ್ಯ ರಥದಲ್ಲಿ ಹಾಕಿರುವುದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ‌.

ಈ ಘಟನೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಪುತ್ತೂರಿನಲ್ಲಿ ಗಲಭೆ ಸೃಷ್ಟಿಸಲು ಸರಕಾರಿ ವಾಹನವನ್ನು ದುರುಪಯೋಗಪಡಿಸಿ ಕೋವಿಡ್ ನಿಯಮ ಉಲ್ಲಂಘಿಸಿ ಸ್ವಾತಂತ್ರ್ಯ ರಥವನ್ನು ಸ್ವಾಗತಿಸುವ ನೆಪದಲ್ಲಿ ಪುತ್ತೂರು ಗಾಂಧಿ ಕಟ್ಟೆಯ ಬಳಿ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ಬಹಿರಂಗವಾಗಿ ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಾ ಸಂಘರ್ಷಕ್ಕೆ ಆಹ್ವಾನ ನೀಡಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ.
ಮಾತ್ರವಲ್ಲದೆ ನಂತರದ ಘಟನಾವಳಿಗಳಲ್ಲಿ ಬಿಜೆಪಿಯ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರುಗಳು, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾದಲ್ಲಿ ಮೃತರಾದ ಹಿಂದೂ ಮಹಿಳೆಯ ಪಾರ್ಥಿವ ಶರೀರವನ್ನು ಸ್ವ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿ ಊರೂರು ಸುತ್ತಾಡಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯಂತಹ ಶಾಸಕರು ಮತ್ತು ಬಿಜೆಪಿಯ ಜನಪ್ರತಿನಿಧಿಗಳು ಗಾಂಧಿಜಿಯನ್ನು ಕೊಂದ ಆರೋಪಿ ಹಾಗೂ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಹೇಡಿ ಸಾವರ್ಕರ್ ರನ್ನು ದೇಶಪ್ರೇಮಿಯಂತೆ ಚಿತ್ರೀಕರಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದೇಶದ್ರೋಹ ಕೃತ್ಯವಾಗಿದೆ.
ಅದೇ ರೀತಿ ದೇಶಕ್ಕಾಗಿ ಎರಡು ಮಕ್ಕಳನ್ನು ಒತ್ತೆಯಿಟ್ಟ ಟಿಪ್ಪು ಸುಲ್ತಾನ್ ರನ್ನು ದೇಶದ್ರೋಹಿಯಂತೆ ಚಿತ್ರೀಕರಿಸಿರುವುದು ಖಂಡನಾರ್ಹವಾಗಿದೆ.

ಬಿಜೆಪಿ/ಸಂಘಪರಿವಾರದ ನಾಯಕರು, ಜನಪ್ರತಿನಿಧಿಗಳು ಬಹಿರಂಗವಾಗಿ ಸಂಘರ್ಷಕ್ಕೆ ಆಹ್ವಾನ ನೀಡಿ ಶಾಂತಿಯುತ ಪುತ್ತೂರನ್ನು ಕೋಮುಗಲಭೆಗೆ ತಳ್ಳುವ ಪ್ರಯತ್ನವನ್ನು ಪೋಲಿಸ್ ಇಲಾಖೆ ಕೈಕಟ್ಟಿ ಕುಳಿತು ಮೂಖ ಪ್ರೇಕ್ಷರಾಗಿ ನೋಡುತ್ತಿರುವುದು ವಿಪರ್ಯಾಸವಾಗಿದೆ. ಒಂದು ವೇಳೆ ಸಂಘಪರಿವಾರ ತನ್ನ ನೀಚ ಸಂಸೃತಿಯನ್ನು ಮುಂದುವರೆಸಿದರೆ ಅದನ್ನು ಸಂವಿಧಾನ ಬದ್ದವಾಗಿ ಯಾವುದೇ ರೀತಿಯಲ್ಲಿ ತಡೆಗಟ್ಟಲು ಪಾಪ್ಯುಲರ್ ಫ್ರಂಟ್ ಸನ್ನದ್ದವಾಗಿದೆ ಎಂದು ಜಾಬಿರ್ ಅರಿಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಅದೇ ರೀತಿ ಪೋಲಿಸ್ ಇಲಾಖೆ ಕೂಡ ಯಾವುದೇ ಒತ್ತಡಕ್ಕೆ ಮಣಿಯದೆ ಅಶಾಂತಿ ಸೃಷ್ಟಿಸುವ ಬಿಜೆಪಿ ಸಂಘಪರಿವಾರದ ನಾಯಕರ ಮತ್ತು ಕಾರ್ಯಕರ್ತರ ವಿರುದ್ಧ ಕಠಿಣ ನಿಲುವು ತಾಳಬೇಕೆಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಅಧ್ಯಕ್ಷ ಜಾಬಿರ್ ಅರಿಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave A Reply

Your email address will not be published.