ತಾಲಿಬಾನ್ ರಕ್ಕಸರಿಗೆ ಸಂಪೂರ್ಣ ಶರಣಾದ ಅಫ್ಘಾನಿಸ್ತಾನ | ಆಶ್ರಯ ನೀಡಿದ್ದ ನೆಲಕ್ಕೇ ದ್ರೋಹ ಬಗೆದರಾ ತಾಲಿಬಾನಿಗಳು!!

ರಸ್ತೆರಸ್ತೆಗಳಲ್ಲಿ ರಕ್ತದೋಕುಳಿ ಹರಿಸಿ, ಹೆಣ್ಣುಮಕ್ಕಳನ್ನು ಅಪಹರಿಸಿ ಅತ್ಯಾಚಾರ ಎಸಗಿ ನೀಡಬಾರದ ಹಿಂಸೆ ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ರಕ್ಕಸರಿಗೆ ಇದೀಗ ಸಂಪೂರ್ಣ ಅಫ್ಘಾನಿಸ್ತಾನ ಶರಣಾಗಿದೆ.

ರಾಜಧಾನಿ ಕಾಬೂಲ್ ಸುತ್ತುವರಿದು ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಉಗ್ರರು ಅಫ್ಘಾನಿಸ್ತಾನ ಸರ್ಕಾರದ ವಿರುದ್ಧ ಜಯ ಸಾಧಿಸಿದ್ದಾರೆ. ಕೆಲದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು.

ಕಾಬೂಲ್ ಅನ್ನು ತಾವು ಹಿಂಸೆಯಿಂದ ವಶಪಡಿಸಿಕೊಳ್ಳುವುದಿಲ್ಲ ಎಂದು ಈ ಉಗ್ರರು ಮೊದಲೇ ಘೋಷಣೆ ಮಾಡಿದ್ದರು. ಅದರಂತೆಯೇ ಆಂತರಿಕ ಸಚಿವ ಅಬ್ದಲ್ ಸತ್ತಾರ್ ಹೇಳಿಕೆ ನೀಡಿದ್ದು, ತಾಲಿನಾನಿಗಳು ದಾಳಿ ಮಾಡಿಲ್ಲ. ಶಾಂತಿಯುತವಾಗಿ ಕಾಬೂಲ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದಿದ್ದಾರೆ. ಶಾಂತಿಯುತವಾಗಿ ತಾಲಿಬಾನಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ನಿನ್ನೆಯಷ್ಟೇ ಕಾಬೂಲ್ ನಗರವನ್ನು ತಾಲಿಬಾನಿಗಳು ಪ್ರವೇಶಿಸಿರುವುದಾಗಿ ಅಫ್ಘಾನಿಸ್ತಾನ ಗೃಹಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದರು. ಅಫ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಜಲಾಲಾಬಾದನ್ನೂ ವಶಕ್ಕೆ ಪಡೆದುಕೊಂಡಿದ್ದು, ಸರ್ಕಾರದ ವಶದಲ್ಲಿರುವ ಏಕೈಕ ನಗರ ಕಾಬೂಲನ್ನೂ ಸುತ್ತುವರೆದಿದ್ದರು.

ಇದರ ಬೆನ್ನಲ್ಲೇ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಾಬೂಲಿನಿಂದ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿತ್ತು. ಜತೆಗೆ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನೂ ಏರ್‌ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆ.

ಇನ್ನು 90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಕಳೆದ ವಾರವಷ್ಟೇ ಭವಿಷ್ಯ ನುಡಿದಿತ್ತು. ಅದಕ್ಕಿಂತ ಮುಂಚೆಯೇ ಸಂಪೂರ್ಣ ಕಾಬೂಲ್ ಉಗ್ರರ ವಶವಾಗಿದೆ. ಈ ಮೂಲಕ ಅಫ್ಘಾನಿಸ್ತಾನದ ಪ್ರತಿಯೊಂದು ಪಟ್ಟಣ, ನಗರ, ಮಹಾನಗರ ಎಲ್ಲವೂ ಉಗ್ರರ ವಶವಾಗಿದೆ.

Leave A Reply

Your email address will not be published.