ಕಬಕ:ಸ್ವಾತಂತ್ರ್ಯ ರಥಕ್ಕೆ ತಡೆಯೊಡ್ಡಿದವರನ್ನು ದೇಶದ್ರೋಹದ ಕೇಸು ದಾಖಲಿಸಿ ಜೈಲಿಗಟ್ಟಿ |ಯುವ ಮೋರ್ಚಾ ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲ

ಕಬಕ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಸ್ವಾತಂತ್ರ್ಯ ರಥಕ್ಕೆ ತಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ದೇಶ ಸ್ವತಂತ್ರ್ಯದ ದಿನದಂದೇ ದೇಶದ್ರೋಹಕ್ಕೆ ಹೊರಟ ಎಸ್. ಡಿ.ಪಿ.ಐ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ದೇಶ ದ್ರೋಹದ ಕೇಸು ದಾಖಲಿಸಿ ಜೈಲಿಗಟ್ಟಬೇಕು ಎಂದು ಗ್ರಾಮಾಂತರ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲ ಆಗ್ರಹಿಸಿದ್ದಾರೆ.

ಇಂದು ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಸಾವರ್ಕರ್ ಅವರ ಫೋಟೋ ಗಳನ್ನು ಗಲ್ಲಿ ಗಲ್ಲಿಗಳಲ್ಲಿ ಹಾಕುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ದೇಶ ದ್ರೋಹಿಗಳಿಗೆ ತಾಕೀತು ಮಾಡಿದರು.ಇಂತಹ ದೇಶದ್ರೋಹಿಗಳನ್ನು ಈಗಲೇ ಮಟ್ಟಹಾಕಬೇಕು, ಇಂದಿನ ಘಟನೆಯಲ್ಲಿ ರಥಕ್ಕೆ ತಡೆ ಮಾಡಿದ ಎಸ್ಡಿಪಿಐ ನ ಎಲ್ಲಾ ಕಾರ್ಯಕರ್ತರನ್ನು ಬಂಧಿಸುವಂತೆ ಈಗಾಗಲೇ ಮಾನ್ಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಘಟನೆ ವಿವರ:ಇಂದು ಕಬಕ ಪಂಚಾಯತ್ ಆವರಣದಲ್ಲಿ ಸ್ವಾತಂತ್ರ್ಯ ರಥಕ್ಕೆ ತಡೆ ಹಿಡಿದ ಎಸ್ಡಿಪಿಐ ಕಾರ್ಯಕರ್ತರು, ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಹಾಕುವಂತೆ ಪ್ರತಿಭಟಿಸಿದರು. ಗ್ರಾಮ ಪಂಚಾಯತ್, ಸಿಬ್ಬಂದಿಗಳು, ಅಧಿಕಾರಿಗಳು ಅದೆಷ್ಟು ಮನವೊಲಿಸಿದರೂ ಬಗ್ಗದ ಪ್ರತಿಭಟನಾಕಾರರ ಎರಡು ಬಣಗಳ ನಡುವೆ ಕೈ ಕೈ ಮಿಲಾಯಿಸುವಸ್ಟರಲ್ಲಿ ಪೊಲೀಸರು ಆಗಮಿಸಿ ಎರಡೂ ಗುಂಪುಗಳನ್ನು ಚದುರಿಸಿದರು

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: