Day: August 15, 2021

ಬಳಂಜ‌ : ಅಟ್ಲಾಜೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಳಂಜ: ದೇಶದೆಲ್ಲೆಡೆ ಇಂದು 75 ನೇ ಸ್ವಾತಂತ್ರ್ಯ ಉತ್ಸವ ಸರಳವಾಗಿ ಆಚರಣೆಗಳು ನಡೆಯಿತು. ಬೆಳ್ತಂಗಡಿ ತಾಲೂಕಿನ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮ್ರತ ಮಹೋತ್ಸವದ ಸಂಭ್ರಮವು ಆ.15ರಂದು ಕೊರೋನಾ ನಿಯಮಗಳೊಂದಿಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವ್ರುಧ್ದಿ ಸಮಿತಿಯ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಶಿಕ್ಷಕ ವ್ರುಂದದವರು ಹಾಜರಿದ್ದರು.

ನೂಜಿಬಾಳ್ತಿಲ: ಆರ್ಥಿಕ ಸಂಕಷ್ಟ ಹಿನ್ನಲೆ | ತಾಯಿಯ ಸ್ವ ಇಚ್ಛೆಯಂತೆ ಮೂವರು ಮಕ್ಕಳು ಪುತ್ತೂರಿನ ಆಶ್ರಮಕ್ಕೆ

ತಾಯಿಯ ಸ್ವ ಇಚ್ಛೆಯಂತೆ ಮೂವರು ಮಕ್ಕಳು ಪುತ್ತೂರಿನ ಆಶ್ರಮಕ್ಕೆ ಸುಬ್ರಹ್ಮಣ್ಯ, ಆ.14: ಪತಿ ನಿಧನದಿಂದ ಮಹಿಳೆಗೆ ಮಕ್ಕಳನ್ನು ನೋಡಿಕೊಳ್ಳಲು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಮಹಿಳೆಯು ಮಕ್ಕಳ ರಕ್ಷಣಾ ಘಟಕ ಮಂಗಳೂರಿಗೆ ಪತ್ರ ಮುಖೇನ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಲ್ಲಿನ ಅಧಿಕಾರಿಗಳ ಆದೇಶದಂತೆ ಮಹಿಳೆಯ ಮೂವರು ಮಕ್ಕಳನ್ನು ಪುತ್ತೂರಿನ ಆಶ್ರಮಕ್ಕೆ ಸೇರಿಸಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೋಡಿಗದ್ದೆ ಎಂಬಲ್ಲಿ ವಾಸಿಸುತ್ತಿದ್ದ ಗೋಪಾಲಕೃಷ್ಣ ಎಂಬವರು ಇತ್ತೀಚೆಗೆ ನಿಧನರಾಗಿದ್ದು, ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು. ಪತಿಯ …

ನೂಜಿಬಾಳ್ತಿಲ: ಆರ್ಥಿಕ ಸಂಕಷ್ಟ ಹಿನ್ನಲೆ | ತಾಯಿಯ ಸ್ವ ಇಚ್ಛೆಯಂತೆ ಮೂವರು ಮಕ್ಕಳು ಪುತ್ತೂರಿನ ಆಶ್ರಮಕ್ಕೆ Read More »

ವೆಬ್‌ಸೈಟ್ ಜಾಹಿರಾತು ನೋಡಿ ಮದುವೆಯಾಗಿ ಮೋಸ ಹೋದ ಮಂಗಳೂರಿನ ಮಹಿಳೆ | ಕುವೈಟ್ ನಲ್ಲಿ ಕದ್ದು ಮುಚ್ಚಿ ಸಂಸಾರ ಮಾಡುತ್ತಿದ್ದ ಮೂವರು ಹೆಂಡಿರ ಗಂಡನ ಮುಖವಾಡ ಬಯಲು

ಮಂಗಳೂರು ಮೂಲದ ಮಹಿಳೆಯನ್ನು ವಿವಾಹಿತನೋರ್ವ ಮೋಸದಿಂದ ಮದುವೆಯಾಗಿ ಕುವೈಟ್‌ನಲ್ಲಿ 6 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಈಗ ನ್ಯಾಯಕ್ಕಾಗಿ ತಾಯ್ನಾಡಿನ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಎರಡು ವಿವಾಹವಾಗಿ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿ ಮೂರನೇ ವಿವಾಹವಾಗಿ, ಇಬ್ಬರು ಪತ್ನಿಯರ ಜತೆ ಕುವೈಟ್‌ನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆತ ಮೊದಲ ಪತ್ನಿ ಮತ್ತು ಪುತ್ರನ ಜತೆ ಕುವೈಟ್‌ಗೆ ಮತ್ತೆ ತೆರಳಲು ಸಿದ್ಧತೆ ನಡೆಸಿರುವಂತೆಯೇ ಮಂಗಳೂರು ಮೂಲದ ಸಂತ್ರಸ್ತೆ ಪೊಲೀಸ್‌ಇಲಾಖೆಯ …

ವೆಬ್‌ಸೈಟ್ ಜಾಹಿರಾತು ನೋಡಿ ಮದುವೆಯಾಗಿ ಮೋಸ ಹೋದ ಮಂಗಳೂರಿನ ಮಹಿಳೆ | ಕುವೈಟ್ ನಲ್ಲಿ ಕದ್ದು ಮುಚ್ಚಿ ಸಂಸಾರ ಮಾಡುತ್ತಿದ್ದ ಮೂವರು ಹೆಂಡಿರ ಗಂಡನ ಮುಖವಾಡ ಬಯಲು Read More »

ಆ.31 ರಿಂದ ದೂರದರ್ಶನ ಮರುಪ್ರಸಾರ ಕೇಂದ್ರಗಳ ಪ್ರಸಾರ ಸ್ಥಗಿತ

ದೂರದರ್ಶನ ಮರುಪ್ರಸಾರ ಕೇಂದ್ರಗಳ ಕೇಂದ್ರಗಳು ಆಗಸ್ಟ್‌ 31ರಿಂದ ಪ್ರಸಾರವನ್ನು ಸ್ಥಗಿತಗೊಳಿಸಲಿವೆ. ಡಿಜಿಟಲೀಕರಣದಿಂದಾಗಿ ದೇಶಾದ್ಯಂತ 272 ದೂರದರ್ಶನ ಮರುಪ್ರಸಾರ ಕೇಂದ್ರ (ಲೋ ಪವರ್‌ ಟ್ರಾನ್ಸ್‌ಮಿಟರ್‌- ಎಲ್‌ಪಿಟಿ) ಗಳನ್ನು ಮುಚ್ಚುವ ಪ್ರಕ್ರಿಯೆ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ.ಕರ್ನಾಟಕದಲ್ಲಿ 28 ಮರುಪ್ರಸಾರ ಕೇಂದ್ರ ಗಳಿದ್ದು, ಅವುಗಳ ಪೈಕಿ 11 ಕೇಂದ್ರಗಳ ಕಾರ್ಯನಿರ್ವಹಣೆ ಈ ತಿಂಗಳೇ ಕೊನೆ. ಒಂದೊಂದು ಕೇಂದ್ರ ದಲ್ಲಿ ತಲಾ 3-4 ಮಂದಿ ಸಿಬಂದಿ ಇದ್ದು, ಅವರನ್ನು ಹೈಪವರ್‌ ಟ್ರಾನ್ಸ್‌ ಮಿಟರ್‌ (ಎಚ್‌ಪಿಟಿ)ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಥವಾ ಆಕಾಶವಾಣಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ …

ಆ.31 ರಿಂದ ದೂರದರ್ಶನ ಮರುಪ್ರಸಾರ ಕೇಂದ್ರಗಳ ಪ್ರಸಾರ ಸ್ಥಗಿತ Read More »

ಕಡಬದಲ್ಲಿ ವೀಕೆಂಡ್ ಕರ್ಪ್ಯೂ ವೇಳೆಯೂ ತೆರೆದುಕೊಂಡ ಅನಧಿಕೃತ ಜ್ಯೂಸ್ ಅಂಗಡಿ! | ಬಂದ್ ನಡೆಸಿ ಅಂಗಡಿ ಮಾಲಕನ ವಶಕ್ಕೆ ಪಡೆದ ಪೋಲಿಸರು

ಕಡಬ: ವೀಕೆಂಡ್ ಕರ್ಪ್ಯೂ ವೇಳೆಯೇ ಜ್ಯೂಸ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಅನಧಿಕೃತ ಜ್ಯೂಸ್ ಅಂಗಡಿಯನ್ನು ಬಂದ್ ನಡೆಸಿ ಅಂಗಡಿ ಮಾಲಕನ್ನು ಪೋಲಿಸರು ವಶಕ್ಕೆ ತೆಗೆದುಕೊಂಡ ಘಟನೆ ಆ.15 ರಂದು ಸಂಜೆ ನಡೆದಿದೆ. ಅಂಗಡಿ ಮಾಲಕ ಪ್ರಾರಂಭದಲ್ಲಿ ನನಗೆ ಪಂಚಾಯತ್ ಅನುಮತಿ ಇದೆ ಎಂದು ಹೇಳಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ದಾಖಲೆ ಪರಿಶೀಲನೆ ನಡೆಸಿದಾಗ ಸಮೀಪದ ಕಟ್ಟಡದ ಹೆಸರಿನ ಕೊಠಡಿಯ ಪರವಾನಿಗೆ ಪಡೆದುಕೊಂಡು ರಸ್ತೆ ಪರಂಬೋಕುನಲ್ಲಿ ಅನಧಿಕೃತ ಕಟ್ಟಡ …

ಕಡಬದಲ್ಲಿ ವೀಕೆಂಡ್ ಕರ್ಪ್ಯೂ ವೇಳೆಯೂ ತೆರೆದುಕೊಂಡ ಅನಧಿಕೃತ ಜ್ಯೂಸ್ ಅಂಗಡಿ! | ಬಂದ್ ನಡೆಸಿ ಅಂಗಡಿ ಮಾಲಕನ ವಶಕ್ಕೆ ಪಡೆದ ಪೋಲಿಸರು Read More »

ತಾಲಿಬಾನ್ ರಕ್ಕಸರಿಗೆ ಸಂಪೂರ್ಣ ಶರಣಾದ ಅಫ್ಘಾನಿಸ್ತಾನ | ಆಶ್ರಯ ನೀಡಿದ್ದ ನೆಲಕ್ಕೇ ದ್ರೋಹ ಬಗೆದರಾ ತಾಲಿಬಾನಿಗಳು!!

ರಸ್ತೆರಸ್ತೆಗಳಲ್ಲಿ ರಕ್ತದೋಕುಳಿ ಹರಿಸಿ, ಹೆಣ್ಣುಮಕ್ಕಳನ್ನು ಅಪಹರಿಸಿ ಅತ್ಯಾಚಾರ ಎಸಗಿ ನೀಡಬಾರದ ಹಿಂಸೆ ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ರಕ್ಕಸರಿಗೆ ಇದೀಗ ಸಂಪೂರ್ಣ ಅಫ್ಘಾನಿಸ್ತಾನ ಶರಣಾಗಿದೆ. ರಾಜಧಾನಿ ಕಾಬೂಲ್ ಸುತ್ತುವರಿದು ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಉಗ್ರರು ಅಫ್ಘಾನಿಸ್ತಾನ ಸರ್ಕಾರದ ವಿರುದ್ಧ ಜಯ ಸಾಧಿಸಿದ್ದಾರೆ. ಕೆಲದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಕಾಬೂಲ್ …

ತಾಲಿಬಾನ್ ರಕ್ಕಸರಿಗೆ ಸಂಪೂರ್ಣ ಶರಣಾದ ಅಫ್ಘಾನಿಸ್ತಾನ | ಆಶ್ರಯ ನೀಡಿದ್ದ ನೆಲಕ್ಕೇ ದ್ರೋಹ ಬಗೆದರಾ ತಾಲಿಬಾನಿಗಳು!! Read More »

ಡಿ.ಕೆ.ಶಿ ಸೋನಿಯಾರನ್ನು ಹುತಾತ್ಮ ಎಂದು ಹೇಳಿದ ಕೆಲ ಹೊತ್ತಿನಲ್ಲೇ ತಮಾಷೆಗೀಡಾದ ಜಮೀರ್ ಖಾನ್ | ಶುಭ ಕೋರುವ ಭರದಲ್ಲಿದ್ದ ಜಮೀರ್ ಗೆ ಇಂದು 75ನೇ ಗಣರಾಜ್ಯೋತ್ಸವ!!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾಷಣದ ಬಿರುಸಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹುತಾತ್ಮ ಎಂದರೆ, ಇತ್ತ ಜಮೀರ್ ಖಾನ್ ಗೆ ಇಂದು 75 ನೇ ಗಣರಾಜ್ಯೋತ್ಸವ ಆಚರಣೆ. ಸದಾ ಹಲವಾರು ವಿಷಯದಲ್ಲಿ ಟ್ರೋಲಿಗರ ಕೈಗೆ ಸಿಕ್ಕು ಜನತೆಗೆ ಹಾಸ್ಯವನ್ನು ನೀಡುವ ಶಾಸಕ ಜಮೀರ್ ಖಾನ್ ಇಂದು ಮತ್ತೊಂದು ರೀತಿಯಲ್ಲಿ ತಮಾಷೆಗೆ ಈಡಾಗಿದ್ದಾರೆ. 75 ನೇ ಸ್ವಾತಂತ್ರೋತ್ಸವದ ಸಂಭ್ರಮ,ರಾಜ್ಯದ ಹಿರಿಯ ಹಾಗೂ ಕಿರಿಯ ರಾಜಕೀಯ ನಾಯಕರು, ಶಾಸಕರು ಹಲವೆಡೆ ಧ್ವಜಾರೋಹಣ ನಡೆಸಿ, ಜನತೆಗೆ ಶುಭ ಕೋರುವ …

ಡಿ.ಕೆ.ಶಿ ಸೋನಿಯಾರನ್ನು ಹುತಾತ್ಮ ಎಂದು ಹೇಳಿದ ಕೆಲ ಹೊತ್ತಿನಲ್ಲೇ ತಮಾಷೆಗೀಡಾದ ಜಮೀರ್ ಖಾನ್ | ಶುಭ ಕೋರುವ ಭರದಲ್ಲಿದ್ದ ಜಮೀರ್ ಗೆ ಇಂದು 75ನೇ ಗಣರಾಜ್ಯೋತ್ಸವ!! Read More »

ಸವಣೂರು : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ,ಸವಣೂರು ಬಸ್ ತಂಗುದಾಣಕ್ಕೆ ನೇತಾಜಿ ಹೆಸರು

ಸವಣೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಸವಣೂರು ಬಸ್ ತಂಗುದಾಣಕ್ಕೆ ರಾಷ್ಟ್ರ ನಾಯಕ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹೆಸರನ್ನು ಇಟ್ಟು ನಾಮಫಲಕ ಅನಾವರಣಗೊಳಿಸಲಾಯಿತು. ಈ ಸಂಧರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್, ಸತೀಶ್ ಅಂಗಡಿಮೂಲೆ, ಅಬ್ದುಲ್ ರಫೀಕ್ ಎಂ.ಎ,ತೀರ್ಥರಾಮ ಕೆಡೆಂಜಿ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ, ಚೆನ್ನು ಮಾಂತೂರು, ಹರಿಕಲಾ …

ಸವಣೂರು : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ,ಸವಣೂರು ಬಸ್ ತಂಗುದಾಣಕ್ಕೆ ನೇತಾಜಿ ಹೆಸರು Read More »

ಬಹುನಿರೀಕ್ಷೆಯ ದೇಶಭಕ್ತಿಗೀತೆ ಜಯತು ಜನ್ಮಭೂಮಿ ತೆರೆಗೆ | 75 ನೇ ಸ್ವಾತಂತ್ರ್ಯವನ್ನು ವಿಶೇಷವಾಗಿಸಿದೆ ಯುವಶಕ್ತಿ ಕಡೇಶಿವಾಲಯ

ಸದಾ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಯುವಶಕ್ತಿ(ರಿ)ಕಡೇಶಿವಾಲಯ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ದೇಶಭಕ್ತಿ ಗೀತೆ, ಜಯತು ಜನ್ಮಭೂಮಿ 75 ನೇ ಸ್ವಾತಂತ್ರ್ಯ ದಿನವಾದ ಇಂದು ಯುವಶಕ್ತಿ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತು. ಶೆಟ್ಟಿ ಅಜಯ್ ರಚನೆಯ ಸಾಹಿತ್ಯಕ್ಕೆ ಹೆಮ್ಮೆಯ ಗಾಯಕ ಸಂತೋಷ್ ಬೇಂಕ್ಯ ಧ್ವನಿಯಾಗಿದ್ದು, ಅಶ್ವಿನ್ ಪುತ್ತೂರು ಸಂಗೀತ ನಿರ್ದೇಶಸಿದ್ದಾರೆ. ಸದ್ಯ ಈ ದೇಶ ಭಕ್ತಿ ಗೀತೆ ಈಗಾಗಲೇ ಹತ್ತೂರಿನಲ್ಲೂ ಭಾರೀ ಸದ್ದು ಮಾಡುತ್ತಿದೆ. ಕಡೇಶಿವಾಲಯದ ಪುರದೊಡೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ …

ಬಹುನಿರೀಕ್ಷೆಯ ದೇಶಭಕ್ತಿಗೀತೆ ಜಯತು ಜನ್ಮಭೂಮಿ ತೆರೆಗೆ | 75 ನೇ ಸ್ವಾತಂತ್ರ್ಯವನ್ನು ವಿಶೇಷವಾಗಿಸಿದೆ ಯುವಶಕ್ತಿ ಕಡೇಶಿವಾಲಯ Read More »

ಪುತ್ತೂರು : ಸ್ವರಾಜ್ಯ ರಥಕ್ಕೆ ಅಡ್ಡಿ , ಮೂವರು ವಶಕ್ಕೆ

ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ. ಕಬಕ ಗ್ರಾ.ಪಂ ವತಿಯಿಂದ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಚಾಲನೆ ಕೊಡುವ ಸಂದರ್ಭದಲ್ಲಿ ರಥಯಾತ್ರೆಯಲ್ಲಿದ್ದ ದೇಶ ಭಕ್ತರ ಭಾವಚಿತ್ರದ ಜೊತೆಗೆ ಟಿಪ್ಪು ಸುಲ್ತಾನ್ ಅವರ ಭಾವ ಚಿತ್ರವನ್ನು ಕೂಡಾ ಅಳವಡಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದು ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. …

ಪುತ್ತೂರು : ಸ್ವರಾಜ್ಯ ರಥಕ್ಕೆ ಅಡ್ಡಿ , ಮೂವರು ವಶಕ್ಕೆ Read More »

error: Content is protected !!
Scroll to Top