ಪ್ರತಿಭಟಿಸುವುದು ನಮ್ಮ ಹಕ್ಕು, ಅದನ್ನು ಕೇಳಲು ನೀವ್ಯಾರು? ಉಳ್ಳಾಲ ಪಾಕಿಸ್ಥಾನದಲ್ಲಿದೆಯಾ?ಖಾದರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಮಂಗಳೂರು:ಲವ್ ಜಿಹಾದ್, ಮತಾಂತರ ಸಹಿತ ಉಗ್ರರ ಜೊತೆಗೆ ನಂಟು ಮುಂತಾದ ಕೃತ್ಯ ನಡೆದರೆ ಹಿಂದೂ ಸಂಘಟನೆ ಪ್ರಶ್ನೆ ಮಾಡಿಯೇ ಮಾಡುತ್ತದೆ, ಅದನ್ನು ಕೇಳೋದಕ್ಕೆ ನೀವ್ಯಾರು? ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ.

ಮೊನ್ನೆ ತಾನೇ ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬ ರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಯ ಕಾರ್ಯಕರ್ತರ ನಡೆಯನ್ನು ಪ್ರಶ್ನಿಸಿದ್ದ ಶಾಸಕ ಖಾದರ್ ಅವರಿಗೆ, ಪತ್ರಿಕಾ ಗೋಷ್ಠಿಯಲ್ಲಿ ಈ ರೀತಿಯಾಗಿ ಪ್ರಶ್ನಿಸಿದ್ದಾರೆ.

ಇದಿನಬ್ಬರ ಮನೆಯಲ್ಲಿ ನಡೆದಂತಹ ಪ್ರಕರಣವನ್ನು ಪ್ರಶ್ನಿಸಲು ನೀವ್ಯಾರು? ತಾಕತ್ತು ಇದ್ದರೆ ಲವ್ ಜಿಹಾದ್ ಬ್ಯಾನ್ ಮಾಡುವ ಕಾನೂನನ್ನು ತನ್ನಿ, ಅಂತರ್ಜಾತಿ ವಿವಾಹ ತಡೆ ಕಾನೂನನ್ನು ತನ್ನಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ವಾ, ಹೋಗಿ ಬಿಜೆಪಿ ಕಛೇರಿಯ ಮುಂದೆ ಧರಣಿ ಕುಳಿತುಕೊಳ್ಳಿ ಎಂಬಂತೆ ಹಲವು ತಾಕೀತು ಮಾಡಿದ್ದ ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡ ಸುದರ್ಶನ್, ನಮ್ಮದು ನಿನ್ನೆ ಮೊನ್ನೆಯ ಹೋರಾಟವಲ್ಲ, ಸತತವಾಗಿ ಏಳು ದಶಕಗಳಿಂದ ಲವ್ ಜಿಹಾದ್, ಗೋ ಹತ್ಯೆ ಮತಾಂತರ ದ ವಿರುದ್ಧ ಹಿಂದೂ ಸಂಘಟನೆಗಳು ಸಮರ ಸಾರುತ್ತಲೇ ಬಂದಿದೆ, ನಾವೇನು ಪಾಕಿಸ್ಥಾನದಲ್ಲಿ ಪ್ರತಿಭಟನೆ ನಡೆಸಲಿಲ್ಲ, ಉಳ್ಳಾಳ ಪಾಕಿಸ್ಥಾನದಲ್ಲಿ ಇಲ್ಲ ಅದು ನಮ್ಮ ಜಿಲ್ಲೆಯಲ್ಲೇ ಇರೋದು ಎಂದು ಕಟುವಾಗಿ ನುಡಿದರು.

Leave A Reply

Your email address will not be published.