ಮಂಗಳೂರು| ವಠಾರದಲ್ಲಿ ಬಿದ್ದು ಸಿಕ್ಕಿದ 1.5 ಲಕ್ಷ ರೂ. ಮೌಲ್ಯದ ಕರಿಮಣಿ ಸರವನ್ನು ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ

ಸುಮಾರು 1.5 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ವಠಾರದಲ್ಲಿ ಬಿದ್ದಿದ್ದನ್ನು ಕಂಡ ಪ್ರಾಮಾಣಿಕ ಯುವಕನೋರ್ವ ಅದನ್ನು ವಾರೀಸುದಾರರಿಗೆ ಹಿಂತಿರುಗಿಸಿದ ಘಟನೆ ಮಂಗಳೂರು ನಗರದ ಕೊಡಿಯಾಲ್ ಬೈಲ್ ನ ಬೆಸೆಂಟ್ ಸಂಕೀರ್ಣದ ವಠಾರದಲ್ಲಿ ನಡೆದಿದೆ.

ಚಿನ್ನದ ಬೆಲೆ ಏರುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಿ ಚಿನ್ನ ಸಿಗುತ್ತದೆ ಎಂದು ಕಾದು ಕೂರುವ ಜನರ ನಡುವೆ, ಇಲ್ಲೊಬ್ಬ ಸಜ್ಜನ ಹುಡುಗ ಬಿದ್ದಿದ್ದ ಕರಿಮಣಿಯನ್ನು ಹೆಕ್ಕಿ ಮಹಿಳೆಗೆ ಕೊಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾನೆ.

ಗುರುವಾರ ಸುಮಾರು 1.5 ಲಕ್ಷ ರೂ. ಮೌಲ್ಯದ ಕರಿಮಣಿ ಸರ, ಮಂಗಳೂರು ಸ್ಟೇಷನರಿ ಮಾರ್ಟ್ ಸಂಸ್ಥೆಯ ಉದ್ಯೋಗಿ ನಿತಿನ್ ಪೂಜಾರಿ ಕೋಡಿಕಲ್ ಅವರಿಗೆ ಅವರಿಗೆ ದೊರಕಿತ್ತು.
ಕೂಡಲೇ ಅದರ ಬಗ್ಗೆ ಮಾಹಿತಿ ನೀಡಿ ಅದರ ವಾರೀಸುದಾರರಾದ ಬೆಸೆಂಟ್ ಪ.ಪೂಕಾಲೇಜಿನ ಉಪನ್ಯಾಸಕಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಅವರ ಈ ಕಾರ್ಯಕ್ಕೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಅವರ ಈ ಸಹಾಯ ಹಸ್ತದ ಕೈ ಇತರರಿಗೆ ಇನ್ನಷ್ಟು ಪ್ರೇರಣೆ ಆಗಲಿ ಎಂದು ಹಾರೈಸಿದ್ದಾರೆ.

Leave A Reply

Your email address will not be published.