ಇನ್ನು ಮುಂದೆ ಆಗಸ್ಟ್ 14 ಕೂಡಾ ವಿಶೇಷ ದಿನ |ವಿಭಜನೆಯ ನೆನಪಿಗಾಗಿ ಮೋದಿ ಘೋಷಿಸಿದ ಆ ದಿನವಾದರೂ ಯಾವುದು?

ದೇಶದಲ್ಲಿ ಎಲ್ಲಾ ದಿನಗಳಿಗೂ ಒಂದೊಂದು ವಿಶೇಷತೆ ಇದ್ದು ಅದರಂತೆಯೇ ಎಲ್ಲಾ ಹಬ್ಬ ಹರಿದಿನಗಳು ಒಂದೆಡೆಯಾದರೆ, ನೆನಪಿಗೋಸ್ಕರ ಸ್ಮರಣಾ ದಿನಗಳು ಹೀಗೆ ಎಲ್ಲಾ ದಿನಗಳಿಗೂ ಒಂದೊಂದು ವಿಶೇಷತೆ ಇದೆ. ಸದ್ಯ ಆಗಸ್ಟ್ 14 ನ್ನೂ ಕೂಡಾ ಒಂದು ವಿಶೇಷ ದಿನವಾಗಿ ಪರಿಗಣಿಸಲಾಗಿದೆ.ವಿಭಜನೆಯ ಭಯಾನಕತೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ವಿಭಜನೆಯ ಸಂದರ್ಭ ಜನರ ತ್ಯಾಗಗಳು, ಕಷ್ಟಗಳು, ಹೋರಾಟಗಳ ನೆನಪಿಗಾಗಿ ಆಗಸ್ಟ್ 14 ಇನ್ನುಮುಂದೆ “ವಿಭಜನೆ ಭಯಾನಕತೆಯ ಸ್ಮರಣಾ ದಿನ” ವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ವಿಭಜನೆಯ ನೋವನ್ನು ದೇಶವು ಎಂದಿಗೂ ಮರೆಯುವುದಿಲ್ಲ. ದ್ವೇಷ ಮತ್ತು ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ಸ್ಥಳಾಂತರಗೊಂಡರು ಹಾಗೂ ತಮ್ಮ ಜೀವಗಳನ್ನು ಸಹ ಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ಸ್ಮರಣೆಯಾಗಿ ಆಗಸ್ಟ್ 14 ಅನ್ನು ಪಾರ್ಟಿಶನ್ ಹಾರರ್ ರಿಮೆಂಬರ್ರೆನ್ಸ್ ಡೇ ಎಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಭಜನೆ ಭಯಾನಕತೆಯ ಸ್ಮರಣಾ ದಿನವು ತಾರತಮ್ಯ, ವೈರತ್ವ ಮತ್ತು ದುರಾಸೆಯ ವಿಷವನ್ನು ತೊಡೆದುಹಾಕಲು ನಮಗೆ ಸ್ಫೂರ್ತಿ ನೀಡುವುದಲ್ಲದೆ, ಇದು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಂವೇದನೆಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಹೇಳಿದ್ದಾರೆ.

Leave A Reply

Your email address will not be published.