ಸವಣೂರು ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳಿಂದ ತ್ಯಾಜ್ಯ ವಿಂಗಡನೆ ,ಅಡಿಕೆ ತೋಟ ನಿರ್ಮಾಣ,ತೆಂಗಿನ‌ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿನ ಸರಣಿ ಕಾರ್ಯಕ್ರಮ

ಗ್ರಾಮದ ಅಭಿವೃದ್ಧಿಗೆ ವಿನೂತ ಕಾರ್ಯಕ್ರಮ ಪೂರಕ -ತಾ.ಪಂ.ಇಓ

ಸವಣೂರು : ಸವಣೂರು ಗ್ರಾಮ ಪಂಚಾಯತ್ ಮತ್ತು ಗ್ರಾಮ ವಿಕಾಸ ಪ್ರತಿಷ್ಠಾನ ಪಾಲ್ತಾಡಿ ,ವಿವೇಕಾನಂದ ಯುವಕ ಮಂಡಲ ಮಂಜುನಾಥ ನಗರ ಇದರ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ನಡೆಯುವ ಸರಣಿ ಕಾರ್ಯಕ್ರಮದ ಅಂಗವಾಗಿ ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸವಣೂರು ಗ್ರಾ.ಪಂ.ಸದಸ್ಯರು,ಸಿಬಂದಿಗಳಿಂದ,ಸಾರ್ವಜನಿಕರಿಂದ ತ್ಯಾಜ್ಯ ವಿಂಗಡನೆ ಮತ್ತು ತೆಂಗಿನ ಗಿಡ ನೆಡುವುದು,ಅಡಿಕೆ ತೋಟ ನಿರ್ಮಾಣ ಕಾರ್ಯಕ್ಕೆ ಚಾಲನೆ ಆ.13ರಂದು ನೀಡಲಾಯಿತು.

ಅಡಿಕೆ ತೋಟ ನಿರ್ಮಾಣಕ್ಕೆ ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಚಾಲನೆ ನೀಡಿ ಮಾತನಾಡಿ,ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಸವಣೂರು ಗ್ರಾ.ಪಂ.ವಿನೂತನ ಕಾರ್ಯಕ್ರಮ ನಡೆಸುತ್ತಿದ್ದು,ಇದು ಉತ್ತಮ ಕಾರ್ಯ,ಗ್ರಾಮದ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮ ಪೂರಕ ಎಂದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರು ತೆಂಗಿನ ಸಸಿ ನೆಟ್ಟರು.

ಈ ಸಂದರ್ಭದಲ್ಲಿ ತಾ.ಪಂ.ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ,ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಅಂಗಡಿಮೂಲೆ, ಅಬ್ದುಲ್ ರಝಾಕ್,ಭರತ್ ರೈ,ಚೇತನಾ ಪಾಲ್ತಾಡಿ, ವಿನೋದಾ ರೈ ಚೆನ್ನಾವರ, ಹರಿಕಲಾ ರೈ ಕುಂಜಾಡಿ, ತೀರ್ಥರಾಮ ಕೆಡೆಂಜಿ,ಇಂದಿರಾ ಬೇರಿಕೆ,ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಕಾರ್ಯದರ್ಶಿ ಉದಯ ಬಿ.ಆರ್, ಅಶ್ವಿನಿ ರಾವ್,ಅಂಕತಡ್ಕ ಫ್ರೆಂಡ್ಸ್ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ರೋಹಿತ್ ರೈ ಕುಂಜಾಡಿ,ಜಯರಾಮ ರೈ ಮೂಡಂಬೈಲು,ಕಾಯಕ ಮಿತ್ರ ಗೀತಾ,ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಮಾಲೆತ್ತಾರು,ಉಮೇಶ್,ಬಾಬು ಮೊದಲಾದವರಿದ್ದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿದರು, ಸದಸ್ಯ ಗಿರಿಶಂಕರ ಸುಲಾಯ ವಂದಿಸಿದರು.

Leave A Reply

Your email address will not be published.