ಹೆತ್ತಬ್ಬೆಯೆದುರಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮುಕ್ಕಿ, ವಿಷ ಕೊಟ್ಟು ಕೊಂದ ನಾಲ್ವರು ಕಾಮುಕರ ಗ್ಯಾಂಗ್ | ಗಾಢ ನಿದ್ದೆಯಲ್ಲಿದ್ದ ಆ ಮಕ್ಕಳಿಬ್ಬರು ಅನುಭವಿಸಿದ್ದು ಮಾತ್ರ ನರಕಯಾತನೆ!!

ಹೆತ್ತ ತಾಯಿಯ ಎದುರಲ್ಲೇ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಅನ್ಯಾಯವಾಗಿ ಹಿಂಸಿಸಿ, ಆ ಬಳಿಕ ಅವರನ್ನು ಸಾಮೂಹಿಕ ಅತ್ಯಾಚಾರಗೈದು ಕೊನೆಗೆ ವಿಷ ಉಣಿಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹರಿಯಾಣದ ಸೋನಿಪತ್ ನಲ್ಲಿ ನಡೆದಿದ್ದು,ಕೆಲ ದಿನಗಳ ಬಳಿಕ ಘಟನೆಯು ಬೆಳಕಿಗೆ ಬಂದಿದೆ.

ಘಟನೆಯ ವಿವರ:ತನ್ನ ಮನೆಯ ಒಂದು ಕೋಣೆಯಲ್ಲಿ ತಾಯಿ ಹಾಗೂ ಇನ್ನೊಂದು ಕೋಣೆಯಲ್ಲಿ ಅಪ್ರಾಪ್ತ ಪ್ರಾಯದ ಹೆಣ್ಣು ಮಕ್ಕಳಿಬ್ಬರು ಮಲಗಿದ್ದರು.ಗಾಢ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ರೂಮಿನಿಂದ ಕಿರುಚಾಟ ಚೀರಾಟದ ಸದ್ದು.ಗಾಬರಿಯಿಂದ ತಾಯಿ ಎದ್ದು ನೋಡಿದಾಗ ರೂಮಿನ ಬಾಗಿಲು ಲಾಕ್ ಆಗಿದ್ದು, ಕಿಟಕಿಯಿಂದ ಒಳ ಇಣುಕಿದಾಗ ತನ್ನಿಬ್ಬರು ಮಕ್ಕಳನ್ನು ನಾಲ್ವರು ಕಾಮುಕರ ತಂಡ ಅತ್ಯಾಚಾರ ವೆಸಗುತ್ತಿರುವುದು ಕಂಡುಬಂತು.

ಒಬ್ಬಳೇ ಹೆಂಗಸು, ಅಸಹಾಯಕ ಸ್ಥಿತಿಯಲ್ಲಿ ಆ ಹೆಂಗಸು ತನ್ನ ಮಕ್ಕಳನ್ನು ರಕ್ಷಿಸಲು ಅದೆಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ಇಷ್ಟಕ್ಕೇ ಸುಮ್ಮನಾಗದ ಅತ್ಯಾಚಾರಿಗಳು ತಮ್ಮ ಘನಂಧಾರಿ ಕಾರ್ಯ ಮುಗಿದ ಬಳಿಕ ಆ ಹೆಣ್ಣುಮಕ್ಕಳಿಗೆ ವಿಷ ಉಣಿಸಿ ಕೊಲೆಗೈದಿದು ಪರಾರಿಯಾದರು. ಇತ್ತ ಬಾಗಿಲು ತೆಗೆದು ತನ್ನ ಮಕ್ಕಳನ್ನು ತರಾತುರಿಯಲ್ಲಿ ಬದುಕಿಸಬೇಕೆಂಬ ಹಂಬಲದಿಂದ ಆ ತಾಯಿಯು ಆಸ್ಪತ್ರೆಗೆ ದಾಖಲಿಸಿದ್ದು,ತನ್ನ ಮಕ್ಕಳಿಗೆ ಹಾವು ಕಚ್ಚಿದೆ ಎಂಬ ಸುಳ್ಳನ್ನು ಹೇಳಿದಾಗ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಅತ್ಯಾಚಾರ ನಡೆದಿದೆ ಎಂದು ದೃಢ ಪಡಿಸಿದ್ದು, ವಿಚಾರಣೆಯ ಬಳಿಕ ಸತ್ಯತೆ ಹೊರಬಿದ್ದಿದ್ದು, ಪ್ರಕರಣದಲ್ಲಿ ಬಿಹಾರ ಮೂಲದ ಕೂಲಿ ಕಾರ್ಮಿಕರು ಅಪರಾಧಿಗಳಾಗಿದ್ದು, ಮಹಿಳೆಯ ಮನೆಯ ಪಕ್ಕದಲ್ಲೇ ವಾಸ್ತವ್ಯ ಹೂಡಿದ್ದ ಅವರುಗಳು ಈ ಕೃತ್ಯ ಎಸಗಿದ್ದಾಗಿ ಸದ್ಯ ನಾಲ್ವರನ್ನು ಬಂಧಿಸಲಾಗಿದೆ.

Ad Widget


Ad Widget


Ad Widget

Ad Widget


Ad Widget

ಬೆದರಿಕೆಗೆ ಕುಗ್ಗಿದಳು ಮಹಾತಾಯಿ
ತನ್ನ ಮಕ್ಕಳನ್ನು ಮುಕ್ಕಿದ ಕಾಮುಕರು, ಆ ಬಳಿಕ ಮಹಿಳೆಗೆ ಬೆದರಿಕೆ ಹಾಕಿದ್ದು ಘಟನೆಯನ್ನು ಬಾಯಿ ಬಿಟ್ಟರೆ ಗಂಡು ಮಕ್ಕಳ ಜೊತೆಗೆ ನಿನ್ನನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆನ್ನಾಲಾಗಿದೆ. ಬೆದರಿಕೆಗೆ ಕುಗ್ಗಿದ ಆ ಮಹಿಳೆ ಹಾವು ಕಚ್ಚಿದೆ ಎಂಬ ಸುಳ್ಳನ್ನು ಹೆಣೆದಿದ್ದಾಗಿ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾಳೆ. ಪ್ರಕರಣದ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: