Daily Archives

August 12, 2021

ಬುಡೋಳಿ : ಲಾರಿ -ಆಕ್ಟೀವಾ ನಡುವೆ ಅಪಘಾತ | ಆಕ್ಟೀವಾ ಸವಾರ ಸಾವು

ಬಂಟ್ವಾಳ: ಲಾರಿ ಮತ್ತು ಆಕ್ಟಿವಾ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ.ಸವಾರನ ವಾಹನ ದಾಖಲೆಗಳ ಪ್ರಕಾರ ಕನ್ಯಾನ ಗ್ರಾಮದ ಗಣೇಶ ಬಂಗೇರ ಎಂದು ಗುರುತಿಸಲಾಗಿದೆ.

ಕಡಬದಿಂದ ಕಾಲ್ನಡಿಗೆಯಲ್ಲಿ ಲಡಾಖ್ ತಲುಪಲಿದೆ ಯುವಕರ ತಂಡ|’ರೈತರಿಗಾಗಿ ನಡಿಗೆ’ ಶೀರ್ಷಿಕೆಯಡಿಯಲ್ಲಿ ಯುವಕರ…

ಹದಿನೆಂಟು ಹರೆಯ ತುಂಬುತ್ತಿರುವ ಉತ್ಸಾಹಿ ಯುವಕರ ತಂಡವೊಂದು ಹೊಸ ಯೋಜನೆಯೊಂದಿಗೆ, ಹೊಸ ಪ್ರಯತ್ನಕ್ಕೆ ಸಜ್ಜಾಗುತ್ತಿದೆ. ಹೌದು, ರೈತರೊಂದಿಗೆ ನಾವಿದ್ದೇವೆ, ಅನ್ನ ನೀಡುವ ರೈತನಿಗೆ ನಮ್ಮದೊಂದು ಸಲಾಂ ಎಂದು ತಾವು ಮಾಡುವ ಕಾಲ್ನಡಿಗೆ ಜಾಥಾ ಕ್ಕೆ 'ರೈತರಿಗಾಗಿ ನಡಿಗೆ' ಎಂಬ ಹೆಸರನ್ನೂ ಇಡಲಾಗಿದೆ.

ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

ಆಸ್ತಿ ಹಂಚಿಕೆ ವಿವಾದದಿಂದ ಸಹೋದರರ ಜೊತೆಗೂಡಿ, ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಇಂದು ನಡೆದಿದೆ.ರಹಮಾನ್ ಈ ಹತ್ಯೆಯ ಪ್ರಮುಖ ಆರೋಪಿ. ರೇಷ್ಮಾ ರಹಮಾನ್ ತಾಸೆವಾಲೆ ಮೃತಪಟ್ಟ ಮಹಿಳೆ.ಆಸ್ತಿಯ ಪಾಲಿನ ವಿಚಾರವಾಗಿ ಆರಂಭವಾದ

ದ.ಕ.ಪ್ರವಾಸ ಮುಖ್ಯಮಂತ್ರಿ ಮಂಗಳೂರಿಗೆ ಆಗಮನ

ಮಂಗಳೂರು : ಜಿಲ್ಲೆಯಲ್ಲಿನ ಕೋವಿಡ್-19 ಸೋಂಕು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆ ಮಾಡಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ.12 ಹಾಗೂ 13ರಂದು ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗ್ಗೆ ಜಜ್ಪೆ ಅಂತರಾಷ್ಟ್ರೀಯ

ಮನಸ್ತಾಪದಿಂದ ದೂರವಾದ ಜೋಡಿ,ಯುವಕನಿಂದ ಯುವತಿಯ ಸಂಪರ್ಕಕ್ಕೆ ಪ್ರಯತ್ನ | ಯುವತಿಯಿಂದ ಯುವಕನ ಮೇಲೆ ಮಾನಭಂಗ ಯತ್ನ ದೂರು

ಸುಳ್ಯ: ಮಾನಭಂಗ ಆರೋಪದಡಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಮಡಪ್ಪಾಡಿ ಸೇವಾಜೆ ಕರಂಗಿಲಡ್ಕ ಕಿರಣ್ ಬಂಧನಕ್ಕೊಳಗಾದ ಯುವಕ ಎಂದು ತಿಳಿದುಬಂದಿದೆ.ಚೆಂಬು ಗ್ರಾಮದ ಯುವತಿ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಆ ನಂತರ ಯಾವುದೋ ಕಾರಣಕ್ಕೆ ಮನಸ್ತಾಪವಾಗಿ

ಉಡುಪಿ | ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ , ಆರೋಪಿ ಬಂಧನ

ಆರು ಗೋವುಗಳನ್ನು ಪಿಕಪ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬಂಧಿಸಲಾಗಿದೆ.ಶಬೀರ್ ಬಂಧಿತ ಆರೋಪಿ. ಈತ ಕುಂದಾಪುರ ತಾಲೂಕಿನಿಂದ ಭಟ್ಕಳಕ್ಕೆ ಪಿಕಪ್ ನಲ್ಲಿ ಗೋವುಗಳನ್ನು ತುಂಬಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ

ಬೆಳ್ತಂಗಡಿ : ಗುಂಡು ಹಾರಿಸಿ ಕಾಡು ಹಂದಿ ಹತ್ಯೆ | ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ

ಕಾಡು ಹಂದಿಯೊಂದನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುಡ್ತಲಾಜೆ ಸರಕಾರಿ ಜಾಗದಲ್ಲಿ ನಡೆದಿದೆ.ಈ ಬಗ್ಗೆ ಕಳೆಂಜ ಶಾಖೆಯ ಉಪವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದಾಗ ಒಂದು ಕಾಡು ಹಂದಿ

ಅನುಮತಿ ಪಡೆದು ಮಸೀದಿಗಳಲ್ಲಿ ಮೈಕ್ ಬಳಸುವಂತೆ ಮಸೀದಿಗಳಿಗೆ ಹೈ ಕೋರ್ಟ್ ತಾಕೀತು

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅನ್ವಯ ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಉಪಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಬೆಂಗಳೂರಿನ ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳಿಗೆ ಹೈ ಕೋರ್ಟ್ ಸೂಚಿಸಿದೆ.ಮಸೀದಿಗಳು ಅನಧಿಕೃತವಾಗಿ ಧ್ವನಿವರ್ಧಕಗಳನ್ನು

ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಮನೆಯ ಎದುರು ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.ಸತೀಶ್ ರೆಡ್ಡಿ ಅವರಿಗೆ ಸೇರಿದ್ದ ಕಾರುಗಳು ಇವಾಗಿದ್ದು, ತಡರಾತ್ರಿ 1.30ಕ್ಕೆ ನಾಲ್ವರು ಕಿಡಿಗೇಡಿಗಳು