2022ನೇ ಸಾಲಿನ ಪದ್ಮ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನಕ್ಕೆ ಸೆಪ್ಟೆಂಬರ್‌ 15, 2021ರವರೆಗೆ ಅವಕಾಶ

2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳಿಗೆ (ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ) ಆನ್‌ಲೈನ್ ಮೂಲಕ ನಾಮನಿರ್ದೇಶನ/ಶಿಫಾರಸುಗಳನ್ನು ಆಹ್ವಾನಿಸಲಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು 2021ರ ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿರುತ್ತದೆ. ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳು/ಶಿಫಾರಸುಗಳನ್ನು ಪದ್ಮ ಪ್ರಶಸ್ತಿ ಪೋರ್ಟಲ್‌ನಲ್ಲಿ https://padmaawards.gov.in ಮಾತ್ರ ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದು.

ಪದ್ಮ ಪ್ರಶಸ್ತಿಗಳನ್ನು “ಜನತಾ ಪದ್ಮ” ಆಗಿ ಪರಿವರ್ತಿಸಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಪ್ರಾವಿಣ್ಯ ಹಾಗೂ ಸಾಧನೆ ಮೂಲಕ ಗುರುತಿಸಲು ನೈಜ ಅರ್ಹತೆ ಪಡೆದಿರುವ ಹಾಗೂ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹಿಳೆಯರು, ಎಸ್ಸಿ/ಎಸ್ಟಿಗಳು, ದಿವ್ಯಾಂಗ ವ್ಯಕ್ತಿಗಳನ್ನು ಗುರುತಿಸಿ, ಅವರ ನಾಮ ನಿರ್ದೇಶನ ಮಾಡುವಂತೆ ಎಲ್ಲಾ ನಾಗರಿಕರನ್ನು ಕೋರಲಾಗಿದೆ.

ನಾಮನಿರ್ದೇಶನಗಳು/ ಶಿಫಾರಸುಗಳು ಮೇಲೆ ಹೇಳಲಾದ ಪದ್ಮ ಪೋರ್ಟ್‌ನಲ್ಲಿ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು. ಶಿಫಾರಸು ಮಾಡಲಾದ ವ್ಯಕ್ತಿ ಆ ಕ್ಷೇತ್ರದಲ್ಲಿ ಮಾಡಿದ ಅಸಾಧಾರಣ ಸಾಧನೆಗಳು / ಸೇವೆ, ಅವರ ವಿಶಿಷ್ಟತೆ ಬಗ್ಗೆ ಸ್ಪಷ್ಟವಾಗಿ ನಿರೂಪಣಾ ಶೈಲಿಯ ಬರಹವನ್ನು (ಗರಿಷ್ಠ 800 ಪದಗಳು) ಒಳಗೊಂಡಿರಬೇಕು.

ಈ ಕುರಿತು ಹೆಚ್ಚಿನ ವಿವರಗಳು ಗೃಹ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ (www.mha.gov.in) ‘ಪ್ರಶಸ್ತಿಗಳು ಮತ್ತು ಪದಕಗಳು’ ಶೀರ್ಷಿಕೆಯಡಿ ಲಭ್ಯವಿವೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಾಸನಗಳು ಮತ್ತು ನಿಯಮಗಳು https://padmaawards.gov.in/AboutAwards.aspx ವೆಬ್‌ಸೈಟ್ ಲಿಂಕ್‌ನಲ್ಲಿ ಲಭ್ಯವಿವೆ.

Leave A Reply

Your email address will not be published.