Day: August 10, 2021

ಸವಣೂರು : 400 ಮೀ ಟ್ರ್ಯಾಕ್ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ದಿನೇಶ್ ಮೆದು ಮನವಿ

ಸವಣೂರು: ಸವಣೂರಿನಲ್ಲಿ ಸ.ಪ.ಪೂ.ಕಾಲೇಜಿಗೆ ಹೊಂದಿಕೊಂಡಂತೆ ಪ್ರಸ್ತಾವಿತ 400 ಮೀ.ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ದೆಹಲಿಯಲ್ಲಿ ಮನವಿ ಸಲ್ಲಿಸಿದರು. ಈ ಸಂಧರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು,ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು,ಪ್ರಪುಲ್ಲನಾಥ ರೈ ಕುಂಜಾಡಿ,ಹರೀಶ್ ಉಬರಡ್ಕ,ಸುಧೀರ್ ಪ್ರಸಾದ್ ಕೊಡಿಪ್ಪಾಡಿ,ರಾಜೇಂದ್ರ ಪ್ರಸಾದ್,ವಸಂತ ವೀರಮಂಗಲ, ಜೀವನ್ ಮೊದಲಾದವರಿದ್ದರು.

ಕಡಬ : ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ | ರಕ್ಷಣೆಗೆ ಬಾಲಕಿ ಬೊಬ್ಬೆ ಹೊಡೆದಾಗ ಅಪರಿಚಿತ ವ್ಯಕ್ತಿ ಎಸ್ಕೇಪ್

ಇಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕಿಯೋರ್ವಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದು,ಆ ಬಳಿಕ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತ ಘಟನೆ ಕಡಬ ತಾಲೂಕಿನ ನೆಟ್ಟಣದಲ್ಲಿ ನಡೆದಿದೆ. ಘಟನೆ ವಿವರ:ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬಳು ಇಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದು,ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಬಾಲಕಿಯು ಬೊಬ್ಬೆ ಹೊಡೆದಿದ್ದು, ತಕ್ಷಣವೇ ಅಪರಿಚಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು …

ಕಡಬ : ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ | ರಕ್ಷಣೆಗೆ ಬಾಲಕಿ ಬೊಬ್ಬೆ ಹೊಡೆದಾಗ ಅಪರಿಚಿತ ವ್ಯಕ್ತಿ ಎಸ್ಕೇಪ್ Read More »

ಇಂದು ಮಕ್ಕಿಮನೆ ಕಲಾವೃಂದ ಮಂಗಳೂರು ಇವರಿಂದ ಪ್ರತಿಭಾ ಪ್ರಸ್ತುತಿಯ 25 ನೇ ಸಂಚಿಕೆ | ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ

ಅದೊಂದು ಭೀಮಬಲದ ಸಂಘಟನೆ. ಸಾಂಸ್ಕೃತಿಕ ಪ್ರತಿಭೆಗಳನ್ನು ಅಪ್ಪಿ ಬಿಗಿದಪ್ಪಿ ತೋಳತೆಕ್ಕೆಗೆ ಸೇರಿಸಿ, ಬಳಸಿ, ಬೆಳೆಸಿ ಅವರ ಪ್ರತಿಭೆಗಳಿಗೆ ಜಲಧಾರೆಯನ್ನು ಎರೆದು ಪೋಷಿಸುವ ಸಾಂಸ್ಕೃತಿಕ ಸಂಘಟನೆ. ಕಲಾರಸಿಕರನ್ನು ಕೈ ಬೀಸಿ ಕರೆದು ಅವರ ಹೃನ್ಮನಗಳನ್ನು ಪ್ರಫುಲ್ಲಿತಗೊಳಿಸುವ ಕಾರ್ಯಕ್ರಮ. ಇಂತಹಾ ಕಾರ್ಯಕ್ರಮ ಆಯೋಜನೆ ಮಾಡಿದ ಆಯೋಜಕರಿಗೆ ಶಹಬ್ಬಾಸ್ ಎಂದು ಮೆಚ್ಚುಗೆಯ ನುಡಿಗಳು ಹೊರಬರುತ್ತದೆ. ಜಾತಿ ಮತ ಭೇದವಿಲ್ಲದೇ , ಲಿಂಗ , ಪ್ರಾದೇಶಿಕ ಎಂಬ ಭಾವವಿಲ್ಲದೇ ಪಂಪನ ಮಾನವ ಕುಲ ತಾನೊಂದೆವಲಂ ಎಂಬ ನಾಣ್ಣುಡಿಯಂತೆ ಹೆಜ್ಜೆಗೆ ಹೆಜ್ಜೆ ಇಟ್ಟು ಮುನ್ನಡೆಯುತ್ತಿರುವ …

ಇಂದು ಮಕ್ಕಿಮನೆ ಕಲಾವೃಂದ ಮಂಗಳೂರು ಇವರಿಂದ ಪ್ರತಿಭಾ ಪ್ರಸ್ತುತಿಯ 25 ನೇ ಸಂಚಿಕೆ | ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ Read More »

ಬೆಳ್ತಂಗಡಿ | ಮನೆಯಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ನಾಪತ್ತೆ, ಹತ್ತಿರದ ನದಿಗೆ ಮಗು ಇಳಿದ ಶಂಕೆ

ಬೆಳ್ತಂಗಡಿ: ಸುಲ್ಕೇರಿ ಬಳಿಯ ಜಂತಿಗೋಳಿ ಬಳಿ ಮನೆಯಲ್ಲಿ ಆಟವಾಡುತ್ತಿದ್ದ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ನಾಪತ್ತೆಯಾದ ಘಟನೆ ನಡೆದಿದೆ. ಜಂತಿಗೋಳಿ ಬಳಿಯ ಮನೆಯೊಂದರಲ್ಲಿ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗುವನ್ನು ಅಜ್ಜನ ಜೊತೆ ಬಿಟ್ಟು, ತಾಯಿ ಹಾಗೂ ಅಜ್ಜಿ ಹುಲ್ಲು ತರಲು ತೆರಳಿದ್ದರು. ಮನೆಯ ಸಮೀಪದಲ್ಲಿ ನದಿ ಇದ್ದು, ಒಂದು ವೇಳೆ ಮಗು ತಾಯಿ ಹಾಗೂ ಅಜ್ಜಿಯನ್ನು ಹಿಂಬಾಲಿಸಿಕೊಂಡು ಹೋಗಿ ನದಿಗೆ ಇಳಿದಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ. ಮಾಹಿತಿ ತಿಳಿದ ಕೂಡಲೇ …

ಬೆಳ್ತಂಗಡಿ | ಮನೆಯಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ನಾಪತ್ತೆ, ಹತ್ತಿರದ ನದಿಗೆ ಮಗು ಇಳಿದ ಶಂಕೆ Read More »

“ಬಿರ್ದ್’ದ ಕಂಬುಲ” ಚಿತ್ರದ ಶೀರ್ಷಿಕೆ ಬಿಡುಗಡೆ | ಸುಬ್ರಹ್ಮಣ್ಯದಲ್ಲಿ ಸಚಿವ ಎಸ್.ಅಂಗಾರ ಅವರಿಂದ ಬಿಡುಗಡೆ

ಸುಬ್ರಹ್ಮಣ್ಯ: ಎ.ಆರ್.ಪ್ರೊಡಕ್ಷನ್ ಲಾಂಛನದಲ್ಲಿ ಅರುಣ್ ರೈ ತೋಡಾರ್ ನಿರ್ಮಾಣದಲ್ಲಿ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ “ಬಿರ್ದ್’ದ ಕಂಬುಲ” ಸಿನೆಮಾದ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ರಾಜ್ಯ ಬಂದರು, ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಬಿರ್ದ್’ದ ಕಂಬುಲ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿದರು. ಬಿರ್ದ್’ದ ಕಂಬುಲ ಚಿತ್ರವು ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ. ತುಳುನಾಡಿನ ಕಂಬಳ ಹಿನ್ನಲೆಯಲ್ಲಿ ಚಿತ್ರಕಥೆ ಹೊಂದಿರುವ ಸಿನೆಮಾ ಇದಾಗಿದ್ದು, ಈಗಾಗಲೇ ಇದರ ಕಥೆಯನ್ನು ಈ ಭಾಗದಲ್ಲಿ …

“ಬಿರ್ದ್’ದ ಕಂಬುಲ” ಚಿತ್ರದ ಶೀರ್ಷಿಕೆ ಬಿಡುಗಡೆ | ಸುಬ್ರಹ್ಮಣ್ಯದಲ್ಲಿ ಸಚಿವ ಎಸ್.ಅಂಗಾರ ಅವರಿಂದ ಬಿಡುಗಡೆ Read More »

ಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ವ್ಯಕ್ತಿಯೋರ್ವರು ಕೆರೆಯ ನೀರಿನಲ್ಲಿ ಈಜಲು ತೆರಳಿದ್ದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ನಾರ್ಲಪಡೀಲಿನಲ್ಲಿ ಇಂದು ಸಂಜೆ ಸಂಭವಿಸಿದೆ. ನಾರ್ಲಪಡೀಲು ನಿವಾಸಿ ರಾಜೇಶ್ ಶೆಟ್ಟಿ (55) ಎಂಬವರೇ ಮೃತಪಟ್ಟ ವ್ಯಕ್ತಿ. ತಲಪಾಡಿ ಟೋಲ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆರೆಯಲ್ಲಿ ಸ್ಥಳೀಯರು ಈಜಲು ಹೋಗುತ್ತಿದ್ದು ರಾಜೇಶ್ ಕೂಡಾ ಈಜಲು ತೆರಳಿದ್ದರು. ರಾಜೇಶ್ ಇಂದು ಸಂಜೆ ಈಜುವಾಗ ಏಕಾಏಕಿ ಮುಳುಗಿ ಅಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಿಸಲು ಮುಂದಾದರೂ ಅದಾಗಲೇ …

ಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು Read More »

ನರಿಮೊಗರು : ಜೀಗುಜ್ಜೆ ಕೊಯ್ಯುವಾಗ ವಿದ್ಯುತ್ ತಂತಿಗೆ ತಗುಲಿದ ದೋಟಿ | ತಾ.ಪಂ.ಮಾಜಿ ಸದಸ್ಯೆ ಯಶೋಧಾ ಅವರ ಪತಿ ಮೃತ್ಯು

ಪುತ್ತೂರು : ವಿದ್ಯುತ್ ಶಾಕ್ ನಿಂದ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋಧಾ ಅವರ ಪತಿ ಕೃಷ್ಣಪ್ಪ ಗೌಡ ಅವರು ಮೃತಪಟ್ಟ ಘಟನೆ ಆ.10ರಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಒತ್ತೆಮುಂಡೂರು ನಿವಾಸಿ ಕೃಷ್ಣಪ್ಪ ಗೌಡ ಮೃತ ದುರ್ದೈವಿ. ಕೃಷ್ಣಪ್ಪ ಗೌಡ ಅವರು ಮನೆಯ ಸಮೀಪದ ಜೀಗುಜ್ಜೆ ಮರದಲ್ಲಿ ಜೀಗುಜ್ಜೆ ಕೊಯ್ಯಲು ಕೊಕ್ಕೆ ಹಿಡಿದುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾಕ್ ಹೊಡೆದ ಕೂಡಲೇ …

ನರಿಮೊಗರು : ಜೀಗುಜ್ಜೆ ಕೊಯ್ಯುವಾಗ ವಿದ್ಯುತ್ ತಂತಿಗೆ ತಗುಲಿದ ದೋಟಿ | ತಾ.ಪಂ.ಮಾಜಿ ಸದಸ್ಯೆ ಯಶೋಧಾ ಅವರ ಪತಿ ಮೃತ್ಯು Read More »

ಸುಬ್ರಹ್ಮಣ್ಯ: ಪ್ರಾಧ್ಯಾಪಕನ ಕಾಮ ಕೃತ್ಯಕ್ಕೆ ಅ.ಭಾ.ವಿ.ಪ ಖಂಡನೆ | ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ತಿದ್ದಿ ತೀಡಬೇಕಾದ ಉಪನ್ಯಾಸಕನೇ ವಿದ್ಯಾರ್ಥಿನಿಯರ ಬಾಳಲ್ಲಿ ಚೆಲ್ಲಾಟವಾಡಿರುವ ಘಟನೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಶಾಲೆಯಲ್ಲಿ ನಡೆದಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಪೈಶಾಚಿಕ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ. ಈ ಮೊದಲು ಈತನ ಬಗ್ಗೆ ಅನೇಕ ದೂರುಗಳಿದ್ದದ್ದು ನಿಧಾನವಾಗಿ ಹೊರಬರುತ್ತಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಬೇಕು. ಕುಕ್ಕೆ ಸುಬ್ರಹ್ಮಣ್ಯನ ಪೋಷಣೆಯಲ್ಲಿರುವ ವಿದ್ಯಾಸಂಸ್ಥೆ ಗೆ ಕೆಟ್ಟ ಹೆಸರು ತಂದ ಈತನನ್ನು ಈ ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು …

ಸುಬ್ರಹ್ಮಣ್ಯ: ಪ್ರಾಧ್ಯಾಪಕನ ಕಾಮ ಕೃತ್ಯಕ್ಕೆ ಅ.ಭಾ.ವಿ.ಪ ಖಂಡನೆ | ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ Read More »

ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಹೂಗುಚ್ಚ, ಹಾರ, ತುರಾಯಿ, ನೆನಪಿನ ಕಾಣಿಕೆಗಳಿಗೆ ಬ್ರೇಕ್

ಇನ್ನು ಮುಂದೆ ಸರ್ಕಾರದ ಸಭೆ-ಸಮಾರಂಭಗಳಲ್ಲಿ ಹಾರ, ಹೂಗುಚ್ಛ, ತುರಾಯಿ, ನೆನಪಿನ ಕಾಣಿಕೆ, ಹಣ್ಣಿನ ಬುಟ್ಟಿ, ಶಾಲು ಇತ್ಯಾದಿಗಳನ್ನು ಕಾಣಿಕೆಯಾಗಿ ನೀಡುವುದನ್ನು ರದ್ದುಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಇವೆಲ್ಲ ಕಾಣಿಕೆಗಳ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ …

ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಹೂಗುಚ್ಚ, ಹಾರ, ತುರಾಯಿ, ನೆನಪಿನ ಕಾಣಿಕೆಗಳಿಗೆ ಬ್ರೇಕ್ Read More »

ಯುವತಿ ಟೈಟ್ ಆದ ಡ್ರೆಸ್ ಹಾಕಿದ್ದಕ್ಕೆ ಗುಂಡು ಹೊಡೆದು ಕೊಂದ ಜಿಹಾದಿಗಳು

ಯುವತಿ ಬಿಗಿಯಾದ ಬಟ್ಟೆಯನ್ನು ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯ ಬಲ್ಕನ್‍ನಲ್ಲಿ ನಡೆದಿದೆ. ನಜಾನಿನ್ (21) ಮೃತ ಯುವತಿ ಎಂದು ಗುರುತಿಸಲಾಗಿದೆ. ಸಮರ್ ಕ್ವಾಂಡ್ ಎಂಬ ಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದ್ದು, ಈ ಹಳ್ಳಿ ಸಂಪೂರ್ಣವಾಗಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ. ನಜಾನಿನ್ ಮಸೀದಿಗೆ ತೆರಳಲು ವಾಹನಕ್ಕೆ ಕಾಯುತ್ತಿರುವಾಗ ಈ ದಾಳಿ ನಡೆದಿದೆ. ಬಿಗಿಯಾಗಿ ಉಡುಪು ಧರಿಸಿದ್ದಳು ಮತ್ತು ಆಕೆಯೊಂದಿಗೆ ಪುರುಷರು ಯಾರೂ ಇರಲಿಲ್ಲ ಎಂಬ ಕಾರಣಕ್ಕೆ ಕೊಲ್ಲಲಾಗಿದೆ ಎಂದು …

ಯುವತಿ ಟೈಟ್ ಆದ ಡ್ರೆಸ್ ಹಾಕಿದ್ದಕ್ಕೆ ಗುಂಡು ಹೊಡೆದು ಕೊಂದ ಜಿಹಾದಿಗಳು Read More »

error: Content is protected !!
Scroll to Top