ಒಲಿಂಪಿಕ್ಸ್ ನಲ್ಲಿ ಮುಂದಿನ ದಿನಗಳಲ್ಲಿ ಚಿನ್ನ ದೊರಕಲಿದೆ ಎಂದು ಮುಖ್ಯಮಂತ್ರಿಯಾಗಿದ್ದ ಮೋದಿ ನುಡಿದ ಭವಿಷ್ಯ ನಿಜವಾದದ್ದು ಹೇಗೆ ಗೊತ್ತಾ ?

2013 ನೇ ಇಸವಿಯಲ್ಲಿ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪುಣೆಯ ಫರ್ಗುಸನ್ ಕಾಲೇಜ್‌ನಲ್ಲಿ ಅವರು ಮಾಡಿದ್ದ ಭಾಷಣದ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಟೊಕಿಯೋ ಒಲಿಂಪಿಕ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದು ಭಾರತದ ಗರಿಮೆಯನ್ನು ಹೆಚ್ಚಿಸಿದ್ದು.

ಹೌದು, ಅಂದು ಮೋದಿ ಭಾಷಣ ಮಾಡುತ್ತಾ, ನಾವು ಒಲಿಂಪಿಕ್ಸ್‌ನಲ್ಲಿ ಪದಕ ಏಕೆ ಗೆಲ್ಲುತ್ತಿಲ್ಲ ಎಂಬುದರ ಬಗ್ಗೆ ವಿವರಣೆ ನೀಡಿದ್ದರು. ಭಾಷಣದಲ್ಲಿ ಅವರು, ಒಲಿಂಪಿಕ್ಸ್ ಚಿನ್ನ ಗೆಲ್ಲಲು ಯುವ ಸೈನಿಕರಿಗೆ ಸೂಕ್ತ ತರಬೇತಿ ನೀಡಿದರೆ 8-10 ಚಿನ್ನದ ಪದಕಗಳು ಭಾರತಕ್ಕೆ ಲಭಿಸುತ್ತವೆ. 1.2 ಬಿಲಿಯನ್ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡಾಪಟುಗಳ ಕೊರತೆಯಿಲ್ಲ. ಅದರಲ್ಲಿಯೂ ಸೇನೆಯಲ್ಲಿ ಇರುವ ನವಯುವಕರಿಗೆ ತರಬೇತಿ ಕೊರತೆ ಇದೆ. ಇಂಥವರಿಗೆ ಸೂಕ್ತ ತರಬೇತಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರೋತ್ಸಾಹ, ತರಬೇತಿ ನೀಡಿ ನೋಡಿ, ಆಗ ಅವರ ತಾಕತ್ತು ಗೊತ್ತಾಗುತ್ತದೆ ಎಂದಿದ್ದರು ಮೋದಿ.

ಆ ಭವಿಷ್ಯವಾಣಿಯನ್ನು ಇದೀಗ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೂಪ್ರಾ ನಿಜವಾಗಿಸಿದ್ದಾರೆ. ಅಲ್ಲದೆ ಒಲಿಂಪಿಕ್ಸ್ ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂದು ಬರೀ ಭಾಷಣ ಮಾಡಿ ಸುಮ್ಮನಾಗಲಿಲ್ಲ ಮೋದಿಯವರು. ಈ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಪ್ರವೃತ್ತರಾದರು. ಅವರು ಪ್ರಧಾನಿಯಾದ ಬಳಿಕವಂತೂ ಇಂಥ ಕ್ರೀಡಾ ತಾರೆಯರಿಗೆ ಹೆಚ್ಚು ಉತ್ತೇಜನ ನೀಡಿ ಅವರಿಗೆ ತಾವು ನುಡಿದಂತೆಯೇ ಹೆಚ್ಚಿನ ತರಬೇತಿ, ಪ್ರೋತ್ಸಾಹ ನೀಡುತ್ತಿದ್ದುದೇ ಇಂದು ನೀರಜ್ ಚಿನ್ನ ಗೆಲ್ಲಲು ಸಾಧ್ಯವಾಗಿದೆ. ಮೋದಿಯವರು ನುಡಿದಂತೆ ನಡೆದಿದ್ದಾರೆ. ಅವರ ಭವಿಷ್ಯ ನಿಜವಾಗಿದೆ ಎಂದು ಅವರ ಅಭಿಮಾನಿಗಳು ಈ ವೈರಲ್ ಆದ ವಿಡಿಯೋ ಗೆ ಕಮೆಂಟ್ ಮಾಡುತ್ತಿದ್ದಾರೆ.

ವೀಡಿಯೋ ತುಣುಕು

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೀಗ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವುದು ಇದಕ್ಕೆ ಪುಷ್ಠಿ ನೀಡಿದ್ದು, ಹಾಗಾಗಿ ಪ್ರಧಾನಿ ಮೋದಿಯವರ ಹಳೆಯ ಭಾಷಣದ ವೀಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಾಗೆಯೇ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಎಲ್ಲಾ 228 ಮಂದಿಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ಕ್ರೀಡಾಪಟುಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

Leave A Reply

Your email address will not be published.