ಬಿಗ್ ಬಾಸ್ ಸೀಸನ್ 8 | ಬಿಗ್ ಬಾಸ್ ಆದ ಮಂಜು ಪಾವಗಡ | ಹಾಸ್ಯ ಕಲಾವಿದನ ಮುಡಿಗೇರಿತು ವಿನ್ನರ್ ಪಟ್ಟ

ಬಿಗ್ ಬಾಸ್ ಸೀಸನ್ 8 ರಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದಾರೆ.

ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಅವರಿಗೆ 45,03,495 ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ 43,35,957 ಮತಗಳು ಬಿದ್ದಿವೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ.

ಈ ಹಿಂದೆ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ವೈನ್ ಸ್ಟೋರ್, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಸೇರಿ ಮೆಜಾರಿಟಿ ಸದಸ್ಯರು ಮಂಜು ಪಾವಗಡ ಅವರು ಗೆಲ್ಲಬಹುದು ಎಂದಿದ್ದರು.

Ad Widget
Ad Widget

Ad Widget

Ad Widget

ಬಹುತೇಕ ಸ್ಪರ್ಧಿಗಳು ಹೇಳಿದಂತೆ ಟಾಸ್ಕ್ ಮತ್ತು ಎಂಟರ್ ಟೈನ್ಮೆಂಟ್ ಮಂಜು ಪಾವಗಡ ಅವರ ಪ್ಲಸ್ ಪಾಯಿಂಟ್ ಆಗಿತ್ತು. ರಂಗಭೂಮಿ ಹಿನ್ನೆಲೆಯುಳ್ಳ ಮಂಜು, ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರ ಹಾಗೂ ವೀಕ್ಷಕರ ಮನ ಗೆದ್ದಿದ್ದರು.

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಜೊತೆಗಿನ ಕೆಲ ಗದ್ದಲಗಳನ್ನು ಬಿಟ್ಟರೆ ಬೇರಾವ ಜಗಳದಲ್ಲೂ ಮಂಜು ಕಾಣಿಸಿಕೊಂಡವರಲ್ಲ. ಉಳಿದಂತೆ ಮನೆಯ ತುಂಬೆಲ್ಲ ನಗುವಿನ ಹೊಳೆ ಹರಿಸಿದ್ದ ಮಂಜು ಪಾವಗಡ ಅರ್ಹವಾಗಿಯೇ ಗೆದ್ದು ಬೀಗಿದ್ದಾರೆ.

ಮಂಜು ಪಾವಗಡ ಪರಿಚಯ: ಮಂಜು ಪಾವಗಡ ಕನ್ನಡ ಕಿರುತೆರೆಯ ಹಾಸ್ಯ ಕಲಾವಿದ. ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ ಹಾಸ್ಯಪ್ರಧಾನ ಕಾರ್ಯಕ್ರಮದ ಮೂಲಕ ಖ್ಯಾತರಾದವರು. ರಂಗಭೂಮಿ, ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಎಂದಿನ ಹಾಸ್ಯ, ಭಾವುಕತೆಯ ಕಾರಣದಿಂದ ಗಮನ ಸೆಳೆದವರು.

Leave a Reply

error: Content is protected !!
Scroll to Top
%d bloggers like this: