ನಟಿಯರ ಖಾಸಗಿ ಭಾಗಗಳನ್ನು ತೋರಿಸುವುದಿಲ್ಲ ಎಂದು ಹೇಳಿ ಶೂಟಿಂಗ್ ಮಾಡಿಸ್ತಿದ್ದ ರಾಜ್ ಕುಂದ್ರಾ | ಮತ್ತೋರ್ವ ಯುವತಿಯಿಂದ ಕೇಸು ದಾಖಲು

ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ಅವರು ತಮ್ಮ ಅಶ್ಲೀಲ ಸಿನಿಮಾಗಳಲ್ಲಿ ಹಲವು ನಟಿಯರು ಮತ್ತು ಮಾಡೆಲ್‌ಗಳ ಅನುಮತಿಯಿಲ್ಲದೆ ಅವರ ಖಾಸಗಿ ಭಾಗಗಳನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ವಿಚಾರ ಇದೀಗ ಬಯಲಿಗೆ ಬಂದಿದೆ.

ರಾಜ್‌ಕುಂದ್ರಾ ಬಂಧನ ಹಾಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣ ತನಿಖೆ ತೀವ್ರಗೊಳಿಸಿರುವ ಬೆನ್ನಲ್ಲೇ, ಹಲವು ನಟಿಯರು ಮತ್ತು ಮಾಡೆಲ್‌ಗಳು ಮುಂದೆ ಬಂದು ರಾಜ್‌ಕುಂದ್ರಾ ಅವರ ಕೃತ್ಯವನ್ನು ಬಹಿರಂಗಪಡಿಸುತ್ತಿದ್ದಾರೆ.

ಇದೀಗ ಮತ್ತೋರ್ವ ಸಂತ್ರಸ್ತ ಯುವತಿ ಮಲ್ವಾನಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಸಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಕುಂದ್ರಾ ನನ್ನ ಖಾಸಗಿ ಭಾಗಗಳನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ನನ್ನ ಸಿನಿಮಾವನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುವಾಗ ಎಡಿಟ್ ಮಾಡದೆ ನನ್ನ ಖಾಸಗಿ ಭಾಗಗಳನ್ನು ಪ್ರದರ್ಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿಕೆ ದಾಖಲಿಸಿದ್ದಾಳೆ.

Ad Widget
Ad Widget

Ad Widget

Ad Widget

ಇದಕ್ಕೂ ಮುನ್ನ ಬಾಲಿವುಡ್‌ ನಟಿ ಪೂನಂ ಪಾಂಡೆ ಕುಂದ್ರಾ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು.

Leave a Reply

error: Content is protected !!
Scroll to Top
%d bloggers like this: