ಬೆಳ್ತಂಗಡಿ | ವಿದ್ಯಾರ್ಥಿನಿ ನಾಪತ್ತೆ, ತಾಯಿಯಿಂದ ದೂರು ದಾಖಲು

ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಮನೆಯಿಂದ ನಿನ್ನೆ ಸಂಜೆ ಹೊರಹೋದ ವಿದ್ಯಾರ್ಥಿನಿ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿ ಕಸಬಾ ಗ್ರಾಮದ ಸೋಬಿನ್ ಮತ್ತು ಮೊಳಿ ಸೋಬಿನ್ ದಂಪತಿ ಪುತ್ರಿ ಕುಮಾರಿ ಆಸೀನಾ ಎಂಬವರು ನಾಪತ್ತೆಯಾದವರು. ಕುಮಾರಿ ಆಸೀನಾ ರವರು ಉಜಿರೆ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರೈಸಿದ್ದು, ಬಳಿಕ ಮನೆಯಲ್ಲಿಯೇ ಇದ್ದು ಸಿಇಟಿ ಪರೀಕ್ಷೆಯ ಪೂರ್ವ ತಯಾರಿ ನಡೆಸುತ್ತಿದ್ದರು.

ಈಕೆ ನಿನ್ನೆ ಸಂಜೆ ಮನೆಯಿಂದ ಹೊರಟವರು ಇದುವರೆಗೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಯುವತಿಯ ತಾಯಿ ಮೊಳಿಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಾಗೆಯೇ ಪುತ್ರಿ ಆಸೀನಾ ಬೆದ್ರಬೆಟ್ಟುವಿನ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಾಯಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Leave A Reply

Your email address will not be published.