ತುಳುನಾಡಿನಲ್ಲಿ ಆಟಿ ಸೋಣ ತಿಂಗಳುಗಳು ತುಳುವರ ಸುಖ ದುಃಖಗಳ ಸೂಚಕ – ಗೋಪಾಲಕೃಷ್ಣ ವಾಂತಿಚ್ಚಾಲ್.

ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದಿಂದ ಆಯೋಜಿಸಿದ್ದ ಆಟಿದ ಕೂಟ ಎಂಬ ಆನ್ ಲೈನ್ ಕಾರ್ಯಕ್ರಮದಲ್ಲಿ ವಿಷೇಶ ಉಪನ್ಯಸಾಕರಾಗಿ ಪಾಲ್ಗೊಂಡ ಪ್ರಮುಖ ದೈವರಾಧನೆಯ ಚಿಂತಕ ಗೋಪಾಲಕೃಷ್ಣ ವಾಂತಿಚ್ಚಾಲು ಅವರು ಕಾರ್ಯಕ್ರಮದಲ್ಲಿ ತುಳುನಾಡಿನ ತುಳುವರ ವಿಶೇಷ ರೀತಿಯಲ್ಲಿ ಆಚರಿಸಲ್ಪಡುವ ಆಟಿ ತಿಂಗಳ ಕಾರ್ಯಕ್ರಮದ ಬಗ್ಗೆ‌ ವಿವರಿಸಿದರು.

ಆಟಿ ಎಂಬುದು ತುಳುವರ ಆಚರಣೆಯಲ್ಲ, ಅದು ತುಳುವರ ಸಂಸ್ಕೃತಿ. ಹಿಂದಿನ ಕಾಲದಲ್ಲಿ ಬೂಮಿಗೆ ಅತೀವೃಷ್ಟಿ ಹಾಗೂ ಸಂಕಷ್ಟ ಸಮಯವೆಂದರೆ ಅದು ಆಟಿ ತಿಂಗಳು. ಆದುದರಿಂದ ತುಲುವರು ತೀರಾ ಬಡತನ ಹಾಗೂ ಕಷ್ಟಮಯ ಜೀವನದಲ್ಲಿರಬೇಕಾದರೆ ಹಸಿವು ನೀಗಿಸಲು ಕೆಲವು ಸೊಪ್ಪು,ಹಣ್ಣು ಗಳನ್ನು
ಸೇವಿಸಿ ಹಸಿವನ್ನು ನೀಗುಸುತಿದ್ದರು ಹಾಗೂ ಅವುಗಳಲ್ಲಿ ಔಷದಿಯನ್ನು ಕಂಡುಕೊಂಡಿದ್ದರು. ಇಂದು ಮನುಷ್ಯ ಆಡಂಬರ ಹಾಗೂ ವೈಜ್ಞಾನಿಕ ಯುಗದಲ್ಲಿ ಜೀವನ ನಡೆಸುತ್ತಿರಬೇಕಾದರೆ, ಪ್ರಕೃತಿಯನ್ನು ನಾಶ ಮಾಡುತ್ತಾನೆ. ಅಂದು ಪ್ರಕೃತಿಯನ್ನು ಬಳಸಿ ನಾಡಿಗೆ ಬಂದ ಸಂಕಷ್ಟವನ್ನು ತಡೆಯುತಿದ್ದರುಹಾಗೂ ಆಟಿ ತಿಂಗಳಿನ ವಿಶೇಷ, ಕೆಲವು ಆಚರಣಾ ಪದ್ದತಿಗಳ ಬಗ್ಗೆ ಬಹಳ ಸೊಗಸಾಗಿ ಮಾರ್ಮಿಕವಾಗಿ ಉಪನ್ಯಾಸವನ್ನು ಕೊಟ್ಟು ನೆರೆದಿದ್ದವರಿಗೆ ಬಹಳಷ್ಟು ವಿಷಯಗಳು ಅರಿಯುವಂತಾಯಿತು.

ಗೂಗಲ್ ಮೀಟ್ ವೇದಿಕೆ ಯಲ್ಲಿ ನಡೆದ ಕಾರ್ಯಕ್ರಮವು ಶ್ರೀಮತಿ ಲಕ್ಷೀ ಗೋಪಾಲ ಗುಂಡಿಬೈಲ್ ಅವರ ಆಟಿ ಕಲೆಂಜ ಪಾಡ್ದನದೊಂದಿಗೆ ಆರಂಭವಾಯಿತು. ತುಳು ಸಾಹಿತಿ ಹಾಗು ಜೈತುಳುನಾಡ್ (ರಿ) ಕಾಸ್ರೋಡು ಘಟಕ ಸದಸ್ಯೆ ಕುಶಲಾಕ್ಷಿ ವಿ ಕುಲಾಲ್ ಅವರು ಆಟಿ ತಿಂಗಳ ತಿನಸುಗಳು ಹಾಗೂ ಕೆಲವೊಂದು ಔಷದೀಯ ಸಸ್ಯಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು .ಮುಂದಕ್ಕೆ ಕಾರ್ಯಕ್ರಮ ಅಧ್ಯಕ್ಷರಾಗಿ ಘಟಕದ ಅಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ ಆಟಿ ತಿಂಗಳ ತುಳುವರ ನಂಬಿಕೆ ಆಚಾರದ ಬಗ್ಗೆ ವಿವರಗಳನ್ನು ಹಂಚಿದರು.

ನಂತರ ಪ್ರಶ್ನೋತ್ತರವಾಗಿ ಶೋತೃಗಳಿಂದ ಅನಿಸಿಕೆಗಳನ್ನು ಪಡೆಯಲಾಯಿತು. ದೇಶ ವಿದೇಶಗಳಿಂದ ಗಣ್ಯಾದಿ ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಕಾರ್ಯಕ್ರಮನ್ನು ಘಟಕದ ಸದಸ್ಯೆ ಹಾಗು ಯುವ ತುಳು ಸಾಹಿತಿ ರಾಜ ಶ್ರೀ ಟಿ ರೈ ಪೆರ್ಲ ಬಹಳ ಸೊಗಸಾಗಿ ಕಾರ್ಯಕ್ರಮನ್ನು ನಿರೂಪಿಸಿದರು. ಘಟಕದ ಕಾರ್ಯದರ್ಶಿ ಕಾರ್ತಿಕ್ ಪೆರ್ಲ ಸ್ವಾಗತಿಸಿ, ಘಟಕದ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ವಂದಿಸಿದರು.

Leave A Reply

Your email address will not be published.