ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೋನ ಪ್ರಕರಣ | ಮತ್ತೊಮ್ಮೆ ಲಾಕ್ ಡೌನ್ ಭೀತಿಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆ | ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನ್ ಲಾಕ್ ಆಗಿ, ಕೊರೋನ ಪ್ರಕರಣಗಳು ಸ್ವಲ್ಪ ಕಡಿಮೆಗೊಂಡು ಇನ್ನೇನು ಸಹಜ ಸ್ಥಿತಿಯತ್ತ ಮರಳುತ್ತಿರುವ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪುನಃ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುವತ್ತ ಯೋಚಿಸುತ್ತಿದೆ.

ಹೊರಜಿಲ್ಲೆಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು ಕೊರೊನ ಪ್ರಕರಣಗಳು ಹೆಚ್ಚಾದರೆ ಕೂಡಲೇ ಲಾಕ್ಡೌನ್ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಯೋಜನೆಯನ್ನು ರೂಪಿಸಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೂಡಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದೂ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಕೆಲವು ನಿರ್ಬಂಧಗಳನ್ನು ಹೇರಿದ್ದು ಈ ಕೆಳಗಿನಂತಿವೆ.

ದ.ಕ ಜಿಲ್ಲೆಯಾದ್ಯಂತ ದೇವಸ್ಥಾನಗಳಿಗೆ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದೂ ಹಲವೆಡೆ ನಿರ್ಬಂಧಗಳನ್ನು ಹೇರಲಾಗಿದೆ. ನೆರೆ ರಾಜ್ಯವಾದ ಕೇರಳದಿಂದ ಕಾಸರಗೊಂಡು ಮಾರ್ಗವಾಗಿ ಮಂಗಳೂರಿಗೆ ಬರುವ ಪ್ರಯಾಣಿಕರನ್ನು ಈಗಾಗಲೇ ಹಲವು ನೆಗೆಟಿವ್ ರಿಪೋರ್ಟ್ ಪರಿಶೀಲಿಸಿ ಬಿಡಲಾಗುತ್ತಿದೆ.

ದ.ಕ ಜಿಲ್ಲೆಯ ದೇವಾಲಯಗಳಲ್ಲಿ ಬೆಳಿಗ್ಗೆ 07 ರಿಂದ ಸಂಜೆ 07 ರ ವರೆಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ವಾರಾಂತ್ಯದಲ್ಲಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದ್ದು, ವಸತಿ ಗೃಹಗಳಲ್ಲಿ ತಂಗಲು ವಾರಾಂತ್ಯದಲ್ಲಿ ಅವಕಾಶವಿಲ್ಲದಿದ್ದರೂ ಕೂಡಾ, ಉಳಿದ ದಿನ 72 ಗಂಟೆಗೆ ಮೊದಲು ಪರೀಕ್ಷೆ ಮಾಡಿದ ನೆಗೆಟಿವ್ ವರದಿಯನ್ನು ಹೊಂದಿರಬೇಕಾಗಿದ್ದು ವಾರಾಂತ್ಯದಲ್ಲಿ ಯಾವುದೇ ಸೇವೆಗಳಿಗೂ ಅನುಮತಿ ಇಲ್ಲ.

ಇನ್ನು ಉಡುಪಿ ಜಿಲ್ಲೆಯಲ್ಲಿನ ನಿಯಮಗಳನ್ನು ನೋಡುವುದಾದರೆ,ಇಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 05 ಗಂಟೆಯ ವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು ಮುಂದಿನ ಆದೇಶ ಬರುವವರೆಗೂ ಇದು ಅನ್ವಯವಾಗುತ್ತದೆ. ಯಾವುದೇ ಪಬ್ ಗಳಿಗೆ ಅವಕಾಶವಿಲ್ಲ, ಯಾವುದೇ ಸಭೆ ಸಮಾರಂಭಗಳಿಗೂ ಅವಕಾಶವಿಲ್ಲ. ಅದಲ್ಲದೇ ಮನೆಯಲ್ಲಿ ನಡೆಯುವ ಸಮಾರಂಭಗಳಿಗೆ 100 ಕ್ಕೂ ಮಿಕ್ಕಿ ಜನರಿಗೆ ಅವಕಾಶವಿಲ್ಲ. ಸಿನಿಮಾ ಟಾಲ್ಕಿಸ್ ಗಳಲ್ಲಿ 50ರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಬಸ್ಸಿನಲ್ಲಿ ಮಿತಿಮೀರಿ ಜನ ಪ್ರಯಾಣಿಸಿದರೆ ದಂಡ ಹಾಕುವ ಯೋಜನೆಯನ್ನು ಕೈಗೊಳ್ಳಲಾಗಿದೆ.

Leave A Reply

Your email address will not be published.