ಅವಿಭಜಿತ ದ.ಕ.ಜಿಲ್ಲೆಗೆ 2 ಸಚಿವ ಸ್ಥಾನ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು,ಅವಿಭಜಿತ ದ.ಕ.ಜಿಲ್ಲೆಗೆ ಎರಡು ಮಂತ್ರಿ ಸ್ಥಾನ ಪಕ್ಕಾ ಆಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್ ಅಂಗಾರ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಬಹುತೇಕ ಖಚಿತವಾಗಿದೆ.

ಸಂಭಾವ್ಯ ಸಚಿವರುಗಳ ಖಾತೆಗಳ ಪಟ್ಟಿ ಇಂತಿದೆ:

  • ಸಿಎಂ- ಹಣಕಾಸು, ಆಡಳಿತ ಸುಧಾರಣೆ
  • ಆರ್. ಅಶೋಕ್- ಗೃಹ ಖಾತೆ
  • ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ
  • ನಿರಾಣಿ- ಗಣಿ ಮತ್ತು ಬೃಹತ್ ಕೈಗಾರಿಕೆ
  • ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ ಡಾ.ಕೆ. ಸುಧಕಾರ್- ಆರೋಗ್ಯ
  • ಎಸ್.ಟಿ. ಸೋಮಶೇಖರ್- ಸಹಕಾರ
  • ಬೈರತಿ ಬಸವರಾಜ್- ನಗರಾಭಿವೃದ್ಧಿ
  • ಸುನಿಲ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ನಾಗೇಶ್- ಸಣ್ಣ ನೀರಾವರಿ ಇಲಾಖೆ ಕೆ.ಎಸ್.ಈಶ್ವರಪ್ಪ- ಕಂದಾಯ ಇಲಾಖೆ
  • ಗೋಪಾಲಯ್ಯ- ಅಬಕಾರಿ ಖಾತೆ
  • ಸಿ.ಸಿ. ಪಾಟೀಲ್- ವಾರ್ತಾ ಮತ್ತು ಸಣ್ಣ ಕೈಗಾರಿಕೆ
  • ಶಶಿಕಲಾ ಜೊಲ್ಲೆ- ಕನ್ನಡ ಮತ್ತು ಸಂಸ್ಕೃತಿ
  • ಶ್ರೀರಾಮುಲು- ಸಮಾಜ ಕಲ್ಯಾಣ
  • ಗೋವಿಂದ ಕಾರಜೋಳ- ಲೋಕೋಪಯೋಗಿ
  • ವಿ. ಸೋಮಣ್ಣ- ವಸತಿ
  • ಬಿ.ಸಿ. ಪಾಟೀಲ್- ಕೃಷಿ
  • ಎಂಟಿಬಿ ನಾಗರಾಜ್- ಪೌರಡಳಿತ ಮತ್ತು ಸಕ್ಕರೆ
  • ಕೋಟಾ ಶ್ರೀನಿವಾಸ ಪೂಜಾರಿ- ಮುಜಾರಾಯಿ
  • ಮುನಿರತ್ನ- ಪ್ರವಾಸೋದ್ಯಮ
  • ಕೆ.ಸಿ.ನಾರಾಯಣ- ತೋಟಗಾರಿಕೆ
  • ಶಿವರಾಂ ಹೆಬ್ಬಾರ್- ಕಾರ್ಮಿಕ
  • ಉಮೇಶ್ ಕತ್ತಿ- ಆಹಾರ ಅಥವಾ ವಿದ್ಯುತ್
  • ಇನ್ನು ಅಶ್ವಥ್ ನಾರಾಯಣ ಅವರ ಹೆಗಲಿಗೆ ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ಹಾಗೆ ಜಲಸಂಪನ್ಮೂಲ ಖಾತೆಯನ್ನು ಸಿಎಂ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
Leave A Reply

Your email address will not be published.