ಶಿಥಿಲಾವಸ್ಥೆಗೆ ತಲುಪಿ ಮುರಿದು ಬೀಳುವ ಹಂತದಲ್ಲಿರುವ ಮುತ್ತಜ್ಜ ಇನ್ನಾದರೂ ಕಡಬದ ಪ್ರವಾಸಿ ಬಂಗಲೆ ತೆರವುಗೊಳಿಸುವಲ್ಲಿ ಗಮನಹರಿಸುವರೇ ಅಧಿಕಾರಿಗಳು

1925ರಲ್ಲಿ ಅಂದರೆ ಸರಿ ಸುಮಾರು 96 ವರ್ಷಗಳ ಹಿಂದೆ ಕೊಡುಗೈ ದಾನಿ ದಿ|ಚಂದಯ್ಯ ಶೆಟ್ಟಿ ಅವರು ನಿರ್ಮಿಸಿದ ಪ್ರವಾಸಿ ಬಂಗಲೆ(ನಿರೀಕ್ಷಣ ಮಂದಿರ)ಯು ಸದ್ಯ ಶಿಥಿಲಗೊಂಡು, ಅಲೆಮಾರಿ ಭಿಕ್ಷುಕರ ಆಶ್ರಯತಾಣವಾಗಿ ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದೆ


ಸುಮಾರು 96 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಪ್ರವಾಸಿ ಬಂಗಲೆ ಇರುವುದು ಕಡಬದ ಹೃದಯ ಭಾಗದಲ್ಲಿರುವ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲೇ ಇರುವ ಪ್ರವಾಸಿ ಬಂಗಲೆಯಲ್ಲಿ. ಸದ್ಯ ಈ ಬಂಗಲೆ ಉಪಯೋಗಕ್ಕೆ ಬಾರದೆ ಶಿಥಿಲಗೊಂಡಿದ್ದು, ಬಿರುಸಾಗಿ ಬರುತ್ತಿರುವ ಗಾಳಿ ಮಳೆಗೆ ನೆಲಸಮವಾಗುವ ಸಾಧ್ಯತೆ ಹೆಚ್ಚಿದ್ದು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವಂತಿದೆ.


ಈ ಮೊದಲು ಆಸ್ಪತ್ರೆಯ ಸಿಬ್ಬಂದಿಗಳು ತಂಗಲು ಈ ಕಟ್ಟಡವನ್ನು ಉಪಯೋಗಿಸುತ್ತಿದ್ದರು. ಕ್ರಮೇಣ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಅಲ್ಲಿ ತಂಗಲು ಬರುವ ಜನರ ಸಂಖ್ಯೆಯೂ ಕಡಿಮೆಯಾಗತೊಡಗಿತು. ಎರಡು ವರ್ಷಗಳ ಹಿಂದೆ ಪರಿಶೀಲಿಸಲು ಬಂದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಟ್ಟಡವು ದುರಸ್ತಿಗೆ ಯೋಗ್ಯವಲ್ಲ ಎಂದು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರೆಯುವ ಬಗೆಗೆ ನಿರ್ಧರಿಸಲಾಗಿತ್ತು, ಆದರೆ ಇದುವರೆಗೂ ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಉಡಾಫೆ ಮತ್ತು ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕಟ್ಟಡವು ಮುರಿದು ಬಿದ್ದರೆ ಕೆಲ ಅಮಾಯಕರ ಸಾವು ಖಚಿತವಾಗಿದ್ದು ಇನ್ನಾದರೂ ಅಧಿಕಾರಿಗಳು ಗಮನ ಹರಿಸಲಿ ಎಂಬುವುದೇ ನಾಗರಿಕರ ಬೇಡಿಕೆಯಾಗಿದೆ.

Leave A Reply

Your email address will not be published.