ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮತ್ತೋರ್ವ ವೇಗದ ಓಟಗಾರನ ಉದಯ | ಉಸೇನ್ ಬೋಲ್ಟ್ ಉತ್ತರಾಧಿಕಾರಿ ಇಟಲಿಯ ಮಾರ್ಕೆಲ್ ಜೊಕೋಬ್

ಟೋಕಿಯೋ: ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿನ್ನೆ ರಾತ್ರಿ ಉತ್ತರ ಸಿಕ್ಕಿದೆ.

ವಿಶ್ವ ಶ್ರೇಷ್ಠ, ಮಾನವ ಚಿರತೆ ಉಸೇನ್ ಬೋಲ್ಟ್ ಪ್ರತಿನಿಧಿಸದ ಈ ಒಲಿಂಪಿಕ್ಸ್ ನಲ್ಲಿ ಹೊಸದೊಂದು ಓಟದ ವೀರನ ಉದಯವಾಗಿದೆ. ಇಂದು ನಡೆದ ಪುರುಷರ 100 ಮೀ. ಓಟದಲ್ಲಿ 9.80 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಇಟಲಿ ದೇಶದ ಲಮೌಂಟ್ ಮಾರ್ಕೆಲ್ ಜೊಕೋಬ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಬೋಲ್ಟ್ ನಂತರ ಯಾ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.

ಅಮೆರಿಕಾದ ಫ್ರೆಡ್ ಕೆರ್ಲೆ 9.84 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಬೋಲ್ಟ್ ಉತ್ತರಾಧಿಕಾರಿ ಎಂದೇ ಹೇಳಲಾಗಿದ್ದ ಕೆನಡಾದ ಆಂಡ್ರೆ ಡಿ ಗ್ರಾಸ್ 9. 89 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

6 ಆಡಿ 2 ಇಂಚು ಎತ್ತರದ ಈ ಹೊಸ ಹೀರೋ ಇರಲಿ ದೇಶವನ್ನು ಪ್ರತಿನಿಧಿಸಿದ್ದರು. ಅಮೇರಿಕನ್ ಅಪ್ಪ ಮತ್ತು ಇಟಾಲಿಯನ್ ಅಮ್ಮನ ಮಗನಾಗಿ, ಟೆಕ್ಸಾಸ್ ನಲ್ಲಿ ಜನಿಸಿದ್ದರೂ, ತಂದೆಯ ಉದ್ಯೋಗ ನಿಮಿತ್ತ ಕುಟುಂಬ ದಕ್ಷಿಣ ಕೊರಿಯಾಕ್ಕೆ ತೆರಳಿತ್ತು. ನಂತರ ಅವರು ಇಟಲಿಯಲ್ಲಿ ನೆಲೆಸಿದ್ದರು. ಮೂಲತಹ ಲಾಂಗ್ ಜಂಪ್ ರಾಗಿದ್ದ ಲಮೊಂಟ್ ಜಾಕೋಬ್ ಇದೇ ವರ್ಷ ಮೊದಲ ಬಾರಿಗೆ 60 ಮೀಟರ್ ಓಟವನ್ನು ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಓಡಿದ್ದರು. ನಂತರ, ಆಯ್ಕೆ ಟ್ರೈಲ್ ನಲ್ಲಿ ತೇರ್ಗಡೆ ಗೊಂಡು ಇದೇ ಮೊದಲ ಬಾರಿಗೆ ಒಲಿಂಪಿಕ್ ನಲ್ಲಿ 100 ಮೀಟರ್ ಓಟಕ್ಕೆ ನಿಂತಿದ್ದರು. ಇದೀಗ ಆತ ಪ್ರಸ್ತುತ ವಿಶ್ವದ ವೇಗದ ಓಟಗಾರ.

Leave A Reply

Your email address will not be published.