ರಾಜ್ಯ ಮೀಸಲು ಪೊಲೀಸ್ ಪಡೆ (ksrp)ಯಲ್ಲಿ 250 ಹುದ್ದೆಗಳಿಗೆ ನೇಮಕಾತಿ | ಆನ್ ಲೈನ್ ಅರ್ಜಿಗೆ ಆಗಸ್ಟ್ 30 ಕೊನೆಯ ದಿನ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ (ಕೆಎಸ್ ಆರ್‌ಪಿ) ಖಾಲಿ ಇರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಆನ್‌ಲೈನ್ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

30.8.2021ಕ್ಕೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ, ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಬೆಂಗಳೂರಿನ ಕೆಎಸ್‌ಆರ್‌ಪಿಯಲ್ಲಿ 25 ಸ್ಥಾನ, ಮೈಸೂರಿನಲ್ಲಿ 30 ಸ್ಥಾನ, ಕಲಬುರಗಿಯಲ್ಲಿ 25, ಮಂಗಳೂರಿನಲ್ಲಿ 46, ಶಿಗ್ಗಾಂವಿಯಲ್ಲಿ 50, ತುಮಕೂರಿಗೆ ಕೆಎಸ್‌ಆರ್‌ಪಿನಲ್ಲಿ 74 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ನೇರ ನೇಮಕಾತಿ ಮೂಲಕ ನೇಮಕಗೊಂಡ ಅಭ್ಯರ್ಥಿಗಳು 2 ವರ್ಷದ ಕಾಯಂ ಪೂರ್ವ ಅವಧಿಗೆ ಒಳಗೊಂಡಿದ್ದು, ಮಾಸಿಕ 18,600- 32,600 ರೂ. ವರೆಗೆ ವೇತನ ಜೊತೆಗೆ ನೂತನ ಅಂಶದಾಯಿ ಪಿಂಚಣಿ ಸೌಲಭ್ಯ ಪಡೆಯಲಿದ್ದಾರೆ.

ಒಟ್ಟು ಹುದ್ದೆಗಳು: 250

ಹುದ್ದೆಗಳ ವಿವರ:

  • ಅಡುಗೆಯವರು – 81
  • ಕ್ಷೌರಿಕ – 45
  • ಧೋಬಿ – 53
  • ಕಸ ಗುಡಿಸುವವರು – 58
  • ನೀರು ತರುವವರು – 13

ಸೂಚನೆಗಳು:

*ಒಬ್ಬರು ಒಂದು ಹುದ್ದೆಗಷ್ಟೇ ಅರ್ಜಿ ಸಲ್ಲಿಸಬಹುದು.

*ಘಟಕವಾರು ಆದ್ಯತೆ ನಮೂದಿಸಬೇಕು.

*ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಸ್ಥಳೀಯ ಹಾಗೂ ಮಿಕ್ಕುಳಿದ ವೃಂದದ ಹುದ್ದೆ ಎರಡೂ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

*ಅರ್ಜಿ ತಿದ್ದುಪಡಿಗೆ ಕೊನೇ ದಿನಾಂಕದ ನಂತರ 10 ದಿನಗಳ ಕಾಲಾವಕಾಶವಿರಲಿದೆ.

ಆಯ್ಕೆ ಪ್ರಕ್ರಿಯೆ:
*ದೇಹದಾರ್ಡ್ಯತೆ ಪರೀಕ್ಷೆ
ಸಾಮಾನ್ಯ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 170 ಸೆಂ.ಮೀ., ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ. ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ (ಸಿದ್ದಿಗರು, ಜೇನುಕುರುಬ, ಕಾಡುಕುರುಬ, ಯೆರವ, ಸೋಲಿಗ, ಕುಡಿಯ, ಗೌಡ್ಲು, ಹಸಲರು, ಮಲೆಕುಡಿಯ, ಕೊರಗ) ಕನಿಷ್ಠ ಎತ್ತರ 155 ಸೆಂ.ಮೀ., ಎದೆ ಸುತ್ತಳತೆ 75 ಸೆಂ.ಮೀ ಇದ್ದು, ಎರಡೂ ಅಭ್ಯರ್ಥಿಗಳೂ ಎದೆ ಎತ್ತರಿಸಿದಾಗ ಕನಿಷ್ಠ 5 ಸೆಂ.ಮೀ ವಿಸ್ತರಿಸಬೇಕು.

*ಸಹಿಷ್ಣುತೆ ಪರೀಕ್ಷೆ
ಒಂದು ನಿಮಿಷದಲ್ಲಿ 400 ಮೀ. ಓಟ, 3.80 ಮೀಗಿಂತ ಕಡಿಮೆ ಇಲ್ಲದಂತೆ ಉದ್ದ ಜಿಗಿತ, 4 ಕೆ.ಜಿ ಗುಂಡು ಎಸೆತ ಪರೀಕ್ಷೆ ನಡೆಸಲಾಗುವುದು.

*ವೈದ್ಯಕೀಯ ಪರೀಕ್ಷೆ
ಆಯ್ದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ನಂತರ ಜಾತಿ, ಮೀಸಲಾತಿ, ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆ ನಡೆಸಲಾಗುವುದು.

*ವೃತ್ತಿಪರ ಪರೀಕ್ಷೆ
ನೀರು ತರುವವರು ಮತ್ತು ಕಸ ಗುಡಿಸುವವರಿಗೆ ಯಾವ ವೃತ್ತಿಪರ ಪರೀಕ್ಷೆ ಇರುವುದಿಲ್ಲ. ಉಳಿದ ಹುದ್ದೆಗಳಿಗೆ ಪ್ರಾಯೋಗಿಕ ಪರೀಕ್ಷೆ, ವೃತ್ತಿ ಕುರಿತಾಗಿ ಮೌಖಿಕ ಪರೀಕ್ಷೆ, ವೃತ್ತಿ ಅನುಭವ ಒಳಗೊಂಡತೆ ಅಂಕ ನೀಡಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ-1 ಕ್ಕೆ ಸೇರದ ಅಭ್ಯರ್ಥಿಗಳು 100 ರೂ. ಹಾಗೂ ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳು 250 ರೂ. ಶುಲ್ಕವನ್ನು ನಗದು/ ಆನ್‌ಲೈನ್ ಮೂಲಕ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 30.8.2021
ಶುಲ್ಕ ಪಾವತಿಗೆ ಕೊನೇ ದಿನ: 1.9.2021

ಅಧಿಸೂಚನೆಗೆ: https://bit.ly/2WyRBKO ಮಾಹಿತಿಗೆ: recruitment.ksp.gov.in

Leave A Reply

Your email address will not be published.