ಕಾರ್ಕಳ:ಅರ್ಬಿ ಫಾಲ್ಸ್ ನಲ್ಲಿ ನೀರಿಗಿಳಿದ ಯುವತಿ ನೀರುಪಾಲು ಈಜು ಅರಿತಿದ್ದರೂ ಜೀವ ಉಳಿಸಲಿಲ್ಲ ಜವರಾಯ

ಮಲ್ಪೆ ಬೀಚ್ ನಲ್ಲಿ ಯುವತಿಯೊಬ್ಬಳು ನೀರು ಪಾಲಾಗಿ, ಉಳಿದವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಮಾಸುವ ಮುನ್ನವೇ,ಇಂದು ಕಾರ್ಕಳ ತಾಲೂಕಿನ ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ತನ್ನ ಇತರ ಗೆಳತಿಯರೊಂದಿಗೆ ಸೇರಿಕೊಂಡು ವೀಕ್ಷಣೆಗೆ ತೆರಳಿದ ಯುವತಿಯೊಬ್ಬಳು ನೀರುಪಾಲಾದ ಘಟನೆ ನಡೆದಿದ್ದು, ಮೃತ ಯುವತಿಯನ್ನು ಪ್ರಸ್ತುತ ಕಾರ್ಕಳ ಕಾಲೇಜ್ ಒಂದರ ವಿದ್ಯಾರ್ಥಿನಿ, ಮಂಗಳೂರು ಮೂಲದ ವರ್ಷಿತ ಎಂದು ಗುರುತಿಸಲಾಗಿದೆ.

ಗೆಳೆತಿಯರೊಂದಿಗೆ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ, ಆಟವಾಡಲು ನೀರಿಗೆ ಇಳಿದಿದ್ದು, ಎಲ್ಲರೂ ನೋಡ ನೋಡುತ್ತಿದ್ದಂತೆಯೇ ನೀರಿನ ಸೆಳೆತಕ್ಕೆ ಸಿಲುಕಿ ಆಕೆ ನೀರುಪಾಲಾದಳು.ಆಕೆಗೆ ಈಜು ಅರಿತಿದ್ದರೂ ಕೂಡಾ ನೀರಿನ ಸೆಳೆತಕ್ಕೆ ಸಿಲುಕಿ ತನ್ನ ಪ್ರಾಣ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.

ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ.ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.