ಒಲಿಂಪಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ.
ಒಲಿಂಪಿಕ್ಸ್ ಕೂಟದಲ್ಲೂ ಅತೀ ಹೆಚ್ಚು ಪದಕಗಳನ್ನು ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಯದ್ದಾಗಿದೆ. ಇಂದು ನಡೆದ 4X100 ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ.
ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಏಳು ಪದಕಗಳನ್ನು ಜಯಿಸಿದ್ದರು. ಅದಾದ ಬಳಿಕ ಎಮ್ಮಾ ಮೆಕಿಯನ್ ಏಳು ಪದಕಗಳನ್ನು ಒಂದೇ ಒಲಿಂಪಿಕ್ಸ್ ನಲ್ಲಿ ಪಡೆದುಕೊಂಡಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮೈಕಲ್ ಫೆಲ್ಸ್ ಎಂಟು ಪದಕಗಳನ್ನು ಗೆದ್ದಿದ್ದರು, ಇದೀಗ ಅವರ ಸಾಲಿಗೆ ಮೆಕಿಯನ್ ಸೇರಿಕೊಂಡಿದ್ದಾರೆ. 27 ವರ್ಷದ ಮೆಕಿಯನ್ ಈ ಒಲಿಂಪಿಕ್ಸ್ ನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎಮ್ಮಾ ಮೆಕಿಯನ್ ಗೆದ್ದ ಪದಕಗಳು ಇಂತಿವೆ. 4×100 ಮೀ. ಪ್ರೀಸ್ಟೈಲ್ ರಿಲೇ(ಚಿನ್ನ), 100 ಮೀ. ಫ್ರೀಸ್ಟೈಲ್(ಚಿನ್ನ), 50 ಮೀ. ಫ್ರೀಸ್ಟೈಲ್ (ಚಿನ್ನ), 4×100 ಮೀ. ಮೆಡ್ಡಿ ರಿಲೇ (ಚಿನ್ನ) 100 ಮೀ. ಬಟರ್ ಫ್ಲೈ (ಕಂಚು), 4×200 ಮೀ. ಫ್ರೀ ಸ್ಟೈಲ್ ರಿಲೇ (ಕಂಚು), 4×100 ಮೀ. ಮಿಕ್ಸೆಡ್ ಮೆಡ್ಡಿ ರಿಲೇ (ಕಂಚು).