ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದ ಪಿವಿ ಸಿಂಧು | ಭಾರತಕ್ಕೆ ಮತ್ತೊಂದು ಪದಕದ ಗರಿ

ಟೋಕಿಯೋ: ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ನಲ್ಲಿ ಭಾರತದ ಪರ ಪದಕ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ಇಂದು ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಸೋಲಿಸಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ಚೀನಾದ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಜಯಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸಿಂಧು ಸೋಲನ್ನು ಅನುಭವಿಸಿದ್ದರು.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಫೈನಲ್ ನಲ್ಲಿ ಸೋತು ಬೆಳ್ಳಿ ಪದಕವನ್ನು ಗೆದ್ದಿದ್ದರು.

Leave A Reply

Your email address will not be published.