Day: August 1, 2021

ಹುಡುಗಿ ಹುಡುಕಿ ಸೋತಿದ್ದ ಹುಡುಗ, 1 ಲಕ್ಷ ವಧು ದಕ್ಷಿಣೆ ಕೊಟ್ಟು ಸುಂದರಿಯನ್ನೇ ಮದುವೆ ಆಗಿದ್ದ | ಫರ್ಸ್ಟ್ ನೈಟ್ ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಡೆದಿತ್ತು ಮೋಸ !!?

ಇದು ಅತ್ಯಂತ ವಿಚಿತ್ರ ಘಟನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ. ಮದುವೆಯಾಗದೇ ಕಂಗಾಲಾಗಿದ್ದ ಯುವಕನ ಕಥೆಯಿದು. ಹುಡುಗಿ ಸಿಕ್ಕಿಲ್ಲ ಎಂದು ಗೋಳಾಡಿದ್ದ ಯುವಕನ ಬಳಿ ಬಂದ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ಆದರೆ ಮೊದಲ ರಾತ್ರಿಯೇ ಎಸ್ಕೇಪ್ ಆಗಿದ್ದಾಳೆ! ಅಷ್ಟಕ್ಕೂ ಆಗಿದ್ದೇನೆಂದರೆ, ಸೋನು ಜೈನ್ ಎಂಬ ಯುವಕನಿಗೆ ಮದುವೆಯಾಗಲು ಹುಡುಗಿ ಸಿಕ್ಕಿರಲಿಲ್ಲ. ಹುಡುಗಿಗಾಗಿ ಹುಡುಕಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವನೇ ಆದ ಉದಲ್ ಖಾತಿಕ್ ಎಂಬವನು ಹುಡುಗಿಯ ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು …

ಹುಡುಗಿ ಹುಡುಕಿ ಸೋತಿದ್ದ ಹುಡುಗ, 1 ಲಕ್ಷ ವಧು ದಕ್ಷಿಣೆ ಕೊಟ್ಟು ಸುಂದರಿಯನ್ನೇ ಮದುವೆ ಆಗಿದ್ದ | ಫರ್ಸ್ಟ್ ನೈಟ್ ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಡೆದಿತ್ತು ಮೋಸ !!? Read More »

ಉಡುಪಿ | ಸಾರ್ವಜನಿಕ ಸ್ಥಳದಲ್ಲಿ ಆಟೋ ನಿಲ್ಲಿಸಿ ತರಕಾರಿ ಮಾರಿದಂತೆ ಗಾಂಜಾ ಮಾರಲು ಯತ್ನ, ಇಬ್ಬರ ಬಂಧನ

ಉಡುಪಿಯ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಕಾರ್ತಿಕ್ (24) ಹಾಗೂ ತೇಜಸ್ (18) ಎಂದು ಗುರುತಿಸಲಾಗಿದೆ. ಆರೋಪಿಗಳು ನಿನ್ನೆ ರಾತ್ರಿ 7.45 ರ ಸುಮಾರಿಗೆ ಉದ್ಯಾವರದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ಬಬ್ಬುಸ್ವಾಮಿ ದೈವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ …

ಉಡುಪಿ | ಸಾರ್ವಜನಿಕ ಸ್ಥಳದಲ್ಲಿ ಆಟೋ ನಿಲ್ಲಿಸಿ ತರಕಾರಿ ಮಾರಿದಂತೆ ಗಾಂಜಾ ಮಾರಲು ಯತ್ನ, ಇಬ್ಬರ ಬಂಧನ Read More »

ಭಿಕ್ಷಾಟನೆ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ | ಆರೋಪಿಯ ಬಂಧನ

ಮಂಗಳೂರು: ನಗರದ ಬೈಕಂಪಾಡಿ ರೈಲ್ವೆ ಗೇಟ್ ಬಳಿ ಭಿಕ್ಷಾಟನೆ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ನಿಖಿಲ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ನಿಖಿಲ್ ರಾತ್ರಿ ವೇಳೆ ತನ್ನ ಇತರ ಸಂಗಡಿಗರಾದ ಅರುಂಧತಿ ರಾಶಿ, ರೇಖಾ, ಪ್ರೀಯಾ ಮತ್ತಿತರೊಂದಿಗೆ ಸೇರಿ ಬೈಕಂಪಾಡಿ ರೈಲ್ವೆ ಗೇಟ್ ಬಳಿ ಭಿಕ್ಷಾಟನೆ ಮಾಡುತ್ತಿದ್ದ ಶಾಂತಾ, ಪೂರ್ಣಿಮಾ, ನೀಲಾ, ಹುಲಿಗೆಮ್ಮ ಮತ್ತು ಪಾರ್ವತಿ ಎಂಬವರ …

ಭಿಕ್ಷಾಟನೆ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ | ಆರೋಪಿಯ ಬಂಧನ Read More »

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದ ಪಿವಿ ಸಿಂಧು | ಭಾರತಕ್ಕೆ ಮತ್ತೊಂದು ಪದಕದ ಗರಿ

ಟೋಕಿಯೋ: ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ನಲ್ಲಿ ಭಾರತದ ಪರ ಪದಕ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇಂದು ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಸೋಲಿಸಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ಚೀನಾದ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಜಯಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ವಿಶ್ವದ …

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದ ಪಿವಿ ಸಿಂಧು | ಭಾರತಕ್ಕೆ ಮತ್ತೊಂದು ಪದಕದ ಗರಿ Read More »

ಒಲಿಂಪಿಕ್ಸ್ ನಲ್ಲಿ ಮಿಂಚಿ ವಿಶ್ವದಾಖಲೆ ಬರೆದ ಎಮ್ಮಾ ಮೆಕಿಯನ್ | ಆಸ್ಟ್ರೇಲಿಯಾದ ಈ ಈಜುಗಾರ್ತಿ ಪಡೆದದ್ದು ಏಳು ಪದಕಗಳು

ಒಲಿಂಪಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ. ಒಲಿಂಪಿಕ್ಸ್ ಕೂಟದಲ್ಲೂ ಅತೀ ಹೆಚ್ಚು ಪದಕಗಳನ್ನು ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಯದ್ದಾಗಿದೆ. ಇಂದು ನಡೆದ 4X100 ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ. ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಏಳು ಪದಕಗಳನ್ನು ಜಯಿಸಿದ್ದರು. ಅದಾದ ಬಳಿಕ ಎಮ್ಮಾ ಮೆಕಿಯನ್ ಏಳು ಪದಕಗಳನ್ನು …

ಒಲಿಂಪಿಕ್ಸ್ ನಲ್ಲಿ ಮಿಂಚಿ ವಿಶ್ವದಾಖಲೆ ಬರೆದ ಎಮ್ಮಾ ಮೆಕಿಯನ್ | ಆಸ್ಟ್ರೇಲಿಯಾದ ಈ ಈಜುಗಾರ್ತಿ ಪಡೆದದ್ದು ಏಳು ಪದಕಗಳು Read More »

ಕಡಬ | ನಿನ್ನೆ ನಾಪತ್ತೆಯಾಗಿದ್ದ ರೆಖ್ಯಾ ನಿವಾಸಿ ಶಕುಂತಲಾ ಅವರ ಮೃತದೇಹ ಪತ್ತೆ

ನಿನ್ನೆ ಸೊಪ್ಪು ತರುವುದಾಗಿ ಹೇಳಿಹೋಗಿ ನಾಪತ್ತೆಯಾಗಿದ್ದ ಕಡಬ ತಾಲೂಕಿನ ರೆಖ್ಯಾದ ನಿವಾಸಿ ಸುಂದರ ಗೌಡ ಅವರ ಪತ್ನಿ ಶಕುಂತಲಾ ಅವರ ಮೃತದೇಹ ಇಂದು ಎಂಜಿರ ಎಂಬಲ್ಲಿ ನದಿ ಬದಿಯಲ್ಲಿ ಪತ್ತೆಯಾಗಿದೆ. ನಿನ್ನೆಯೇ ನದಿ ಬದಿಯಲ್ಲಿ ಚಪ್ಪಲಿ ಪತ್ತೆಯಾದ್ದರಿಂದ ಹೊಳೆಗೆ ಆಕಸ್ಮಿಕವಾಗಿ ಬಿದ್ದರಿಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಹುಡುಕಾಟ ಪ್ರಾರಂಭಿಸಲಾಗಿತ್ತು. ನಿನ್ನೆ ಇಡೀ ದಿನ ಶಕುಂತಲಾ ಅವರ ಪತ್ತೆಗಾಗಿ ಧರ್ಮಸ್ಥಳದ ಪೊಲೀಸರು, ಅಗ್ನಿಶಾಮಕ ದಳದವರು, ಪಿಲಿಕುಳದ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಅವರ …

ಕಡಬ | ನಿನ್ನೆ ನಾಪತ್ತೆಯಾಗಿದ್ದ ರೆಖ್ಯಾ ನಿವಾಸಿ ಶಕುಂತಲಾ ಅವರ ಮೃತದೇಹ ಪತ್ತೆ Read More »

ಮಲ್ಪೆಯಲ್ಲಿ ಸಮುದ್ರ ಪಾಲಾದ ಯುವತಿ, ಮೂವರ ರಕ್ಷಣೆ

ಮಲ್ಪೆ ಕಡಲತೀರದಲ್ಲಿ ಯುವತಿಯೋರ್ವಳು ಸಮುದ್ರ ಪಾಲಾದ ಘಟನೆ ಇಂದು ನಡೆದಿದೆ. ಮುಂಜಾನೆ ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಮಲ್ಪೆ ಬೀಚ್ ಗೆ ಆಗಮಿಸಿ, ನೀರಿನಲ್ಲಿ ಆಟವಾಡುತ್ತಿದ್ದರು. ಸ್ಥಳೀಯರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಇವರು ಕೇಳದೆ, ನೀರಿಗಿಳಿದಿದ್ದಾರೆ. ಇನ್ನು ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದು, ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮದುವೆ ನಡೆಯುತ್ತಿದ್ದಾಗ ತೂಕಡಿಸಿದ ವಧು | ಸಮಯದ ಸದುಪಯೋಗ ಪಡಿಸಿಕೊಂಡ ಯುವಕ ಮಾಡಿದ ವಧುವಿಗೆ ಕಿಸ್!!

ಭಾರತೀಯ ವಿವಾಹ ವಿಧಿವಿಧಾನಗಳು ಹಲವು ದಿನಗಳವರೆಗೆ ನಡೆಯುತ್ತವೆ. ಪ್ರತಿಯೊಂದು ಶಾಸ್ತ್ರದಲ್ಲಿ ಭಾಗಿಯಾಗುವ ವಧುವರರು ಸುಸ್ತಾಗುವುದು ಸಹಜ. ಕೆಲವೊಮ್ಮೆ ಆಯಾಸ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಶಾಸ್ತ್ರಗಳು ನಡೆಯುತ್ತಿರುವಾಗಲೇ ವಧು, ವರರು ತೂಕಡಿಸಲು ಆರಂಭಿಸುತ್ತಾರೆ. ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಸುಸ್ತಾಗಿದ್ದ ವಧು ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಈ ಸಮಯವನ್ನು ಅಲ್ಲೇ ಹಿಂದೆ ಕುಳಿತಿದ್ದ ಹುಡುಗನೊಬ್ಬ ಹೇಗೆ ಬಳಸಿಕೊಂಡಿದ್ದಾನೆ ಎಂಬುದನ್ನು ನೋಡಿ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ …

ಮದುವೆ ನಡೆಯುತ್ತಿದ್ದಾಗ ತೂಕಡಿಸಿದ ವಧು | ಸಮಯದ ಸದುಪಯೋಗ ಪಡಿಸಿಕೊಂಡ ಯುವಕ ಮಾಡಿದ ವಧುವಿಗೆ ಕಿಸ್!! Read More »

ಒಂದೊಂದಾಗಿ ಹೊರ ಬೀಳುತ್ತಿದೆ ರಾಜ್ ಕುಂದ್ರಾ ಕರ್ಮಕಾಂಡಗಳು | ಬೆತ್ತಲೆ ಮಾಡಿ, ಬೆದರಿಕೆ ಒಡ್ಡಿದ ಆರೋಪ ಹೊರಿಸಿದ ಮಾಡೆಲ್

ರಾಜ್ ಕುಂದ್ರಾ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಇವರ ಮೇಲಿನ ಕೇಸ್ ಗೆ ಮತ್ತಷ್ಟು ಸಾಕ್ಷಿ ದೊರಕಂತಾಗಿದೆ. ಇದೀಗ ಮಾಡೆಲ್ ಒಬ್ಬರು ಇವರ ಬಗ್ಗೆ ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸಾಲು ಸಾಲು ಆರೋಪಗಳ ಸುರಿ ಮಳೆಯೇ ಆಗುತ್ತಿದ್ದು, ಒಂದು ಕಡೆ ನೀಲಿ ಚಿತ್ರ ತಯಾರಿಸಿರುವ ಆರೋಪ ಹೊತ್ತ ಉದ್ಯಮಿ ರಾಜ್ ಕುಂದ್ರಾರ ಪತ್ನಿ ತನ್ನ ಮತ್ತು ಗಂಡನ ಬಗ್ಗೆ ವರದಿ ಮಾಡಿದರೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಇನ್ನೊಂದೆಡೆ …

ಒಂದೊಂದಾಗಿ ಹೊರ ಬೀಳುತ್ತಿದೆ ರಾಜ್ ಕುಂದ್ರಾ ಕರ್ಮಕಾಂಡಗಳು | ಬೆತ್ತಲೆ ಮಾಡಿ, ಬೆದರಿಕೆ ಒಡ್ಡಿದ ಆರೋಪ ಹೊರಿಸಿದ ಮಾಡೆಲ್ Read More »

ಮಂಗಳೂರು | ಕೊರೋನಾ ನಿಯಮಾವಳಿ ಗಾಳಿಗೆ ತೂರಿ ಜಿಲ್ಲಾ ಕಾಂಗ್ರೆಸ್ ನಿಂದ ಸಮಾರಂಭ ಆಯೋಜನೆ

ಮಂಗಳೂರು: ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೋವಿಡ್ -19 ನಿಯಮಾವಳಿ ಉಲ್ಲಂಘಿಸಲಾಗಿದ್ದು, ನೂರಾರು ಜನ ಇಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಗಸ್ಟ 10ರವರೆಗೆ ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ನಿನ್ನೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಯಾವುದೇ ರೀತಿಯ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಭಾಗವಹಿಸಿದ್ದು, ಸ್ಯಾನಿಟೈಸೇಶನ್ ಪ್ರಕ್ರಿಯೆಯೂ ಇರಲಿಲ್ಲ …

ಮಂಗಳೂರು | ಕೊರೋನಾ ನಿಯಮಾವಳಿ ಗಾಳಿಗೆ ತೂರಿ ಜಿಲ್ಲಾ ಕಾಂಗ್ರೆಸ್ ನಿಂದ ಸಮಾರಂಭ ಆಯೋಜನೆ Read More »

error: Content is protected !!
Scroll to Top