ಟೋಕಿಯೋ ಒಲಿಂಪಿಕ್ಸ್ ಡಿಸ್ಕಸ್ ಥ್ರೋ | ಫೈನಲ್ ಪ್ರವೇಶಿಸಿದ ಕಮಲ್‌ಪ್ರೀತ್ ಕೌರ್

ಟೋಕಿಯೋ ಒಲಿಂಪಿಕ್ಸ್ ನ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‍ಪ್ರೀತ್ ಕೌರ್ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದ್ದಾರೆ.

ಭಾರತಕ್ಕೆ ಪದಕ ತಂದುಕೊಡುವಲ್ಲಿ ಕಮಲ್‍ಪ್ರೀತ್ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದಾರೆ. ಮೂರನೇ ಪ್ರಯತ್ನದಲ್ಲಿ ಕಮಲ್‍ಪ್ರೀತ್ 64 ಮೀಟರ್ ಥ್ರೋ ಮಾಡಿ ತಮ್ಮ ಭುಜಬಲ ಪ್ರದರ್ಶಿಸಿದ್ದಾರೆ. ಆ ಮೂಲಕ ಫೈನಲ್ ಪ್ರವೇಶಿಸಿದರು.

ಡಿಸ್ಕಸ್ ಥ್ರೋನ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಇತಿಹಾಸ ಬರೆದಿರುವ ಕಮಲ್‍ಪ್ರೀತ್ ಆಗಸ್ಟ್ 2ರಂದು ಫೈನಲ್ ಆಡಲಿದ್ದಾರೆ. ಆಕೆಯ ಇನ್ನೊಂದು ಅದ್ಭುತ ಪ್ರದರ್ಶನಕ್ಕಾಗಿ ಭಾರತ ಎದುರು ನೋಡುತ್ತಿದೆ. ಕಮಲ್‍ಪ್ರೀತ್ ಅವರಿಗೆ ಪದಕ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ದರೆ ಡಿಸ್ಕಸ್ ಥ್ರೋನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಕಮಲ್‍ಪ್ರೀತ್ ಪಂಜಾಬ್ ರಾಜ್ಯದ ಮುತ್ಸರ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಪಟಿಯಾಲಾದಲ್ಲಿ ಆಯೋಜಿಸಲಾಗಿದ್ದ 24ನೇ ಫಡರೇಶನ್ ಕಪ್ ಸೀನಿಯರ್ ಅಥ್ಲಿಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಪ್ರಯತ್ನದಲ್ಲಿಯೇ 65.06 ಥ್ರೋ ಮಾಡಿ ಟೀಕಿಯೋ ಟಿಕೆಟ್ ಪಡೆದಿದ್ದರು. 2012ರಲ್ಲಿ ಕೃಷ್ಣಾಪುನಿಯಾ ಅವರ 64.76 ಮೀಟರ್ ದಾಖಲೆಯನ್ನು ಕಮಲ್ ಪ್ರೀತ್ ಬ್ರೇಕ್ ಮಾಡಿದ್ದರು.

Leave A Reply

Your email address will not be published.