ಆಕೆಯ ಕೈಯಲ್ಲಿ ಕಾಂಡೋಮ್ ಇಲ್ಲದೆ ಹೋಗಿದ್ದರೆ, ಒಲಿಂಪಿಕ್ಸ್ ನಲ್ಲಿ ಕಂಚು ಕನಸಿನ ಮಾತಾಗಿತ್ತು |  ಕಾಂಡೋಮ್ ನಿಂದ ಒಲಿಂಪಿಕ್ಸ್ ಪದಕ ಪಡೆದ ಜೆಸ್ಸಿಕಾ !!

ಟೋಕಿಯೋ: ಆಸ್ಟ್ರೇಲಿಯಾದ ಕ್ಯಾನೋಯಿಸ್ಟ್ ಜೆಸ್ಸಿಕಾ ಫಾಕ್ಸ್ ಅವರು ಟೋಕಿಯೋ ಒಲಿಂಪಿಕ್ಸ್‌ನ ಕಯಾಕ್ (ತೊಗಲ ದೋಣಿ) ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಕೆ-1 ಈವೆಂಟ್‌ನಲ್ಲಿ ಆಕೆ ಚಿನ್ನದ ಪದಕ ಗೆಲ್ಲಬೇಕಿತ್ತು. ಆದರೆ ಆಕೆಯ ದುರದೃಷ್ಟಕ್ಕೆ ಸಮಯ ಮಿತಿಯ ದಂಡದಿಂದಾಗಿ ಚಿನ್ನದ ಪದಕವನ್ನು ಜೆಸ್ಸಿಕಾ ಮಿಸ್ ಮಾಡಿಕೊಂಡರು.

ಆದರೆ ವಿಶೇಷವೇನೆಂದರೆ ಆಕೆ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆಲ್ಲಲು ಕಾರಣವಾಗಿದ್ದು ಆಕೆಯ ಕೈಯಲ್ಲಿದ್ದ ಕಾಂಡೋಮ್ ! ಆಕೆ ಕೈಯಲ್ಲಿ ಕಾಂಡೊಮ್ ಹಿಡಿದುಕೊಂಡು ಇಲ್ಲದೆ ಹೋಗಿದ್ದರೆ, ಪದಕ ಗೆಲ್ಲುವುದು ಅಸಾಧ್ಯವಾಗಿತ್ತು. ಅದು ಹೇಗೆ ಎಂಬುದನ್ನು ಪಂದ್ಯದ ನಂತರ ಆಕೆಯೇ ವಿಡಿಯೋ ಮಾಡಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಒಲಿಂಪಿಕ್ ಗ್ರಾಮದಲ್ಲಿ ಸ್ಪರ್ಧಿಗಳಿಗೆ ನೀಡುವ ಕಾಂಡೋಮ್ ಜಸ್ಸಿಕಾಳಿಗೆ ಸರಿಯಾದ ಸಮಯದಲ್ಲಿ ಉಪಯೋಗಕ್ಕೆ ಬಂದಿದೆ. ಯಾಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಇರುವಾಗ ಸ್ಪರ್ಧೆಯಲ್ಲಿ ಆಕೆಯ ಕಯಾಕ್ ಮುರಿದು ಹೋಗಿದೆ. ಆಗ ಜಸ್ಸಿಕಾ ಕಯಾಕ್ ಅನ್ನು ಕಾಂಡೋಮ್‌ನಿಂದಲೇ ಸರಿಮಾಡಿಕೊಂಡು ಸ್ಪರ್ಧೆ ಮುಂದುವರಿಸಿದಳು. ಅವಳ ಈ ತಂತ್ರಕ್ಕೆ ಆಗ ಎಲ್ಲರೂ ಹುಬ್ಬೇರಿಸಿದ್ದರು. ಕಯಾಕ್‌ನಲ್ಲಿನ ಎರಡು ಪೋಲ್ ಸ್ಟೈಕ್‌ಗಳಿಂದ ಜಸ್ಸಿಕಾ ನಾಲ್ಕು ಸೆಕೆಂಡ್ ದಂಡ ತೆರಬೇಕಾಯಿತು. ಇದರಿಂದ ಜರ್ಮನಿಯ ರಿಕಾರ್ಡಾ ಫಂಕ್ ಗೆ ಅನುಕೂಲವಾಯಿತು. ಕಾಂಡೋಮ್ ಇಲ್ಲದಿದ್ದರೆ ಜೆಸ್ಸಿಕಾ ಗೆ ಯಾವ ಪದಕವೂ ಸಿಗುತ್ತಿರಲಿಲ್ಲ.

ಅಂತಿಮವಾಗಿ ಜೆಸ್ಸಿಕಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 2016ರಲ್ಲಿ ರಿಯೊ ಡಿ ಜನೈರೊದಲ್ಲಿಯೂ ಜಸ್ಸಿಕಾ ಕಂಚಿನ ಪದಕ ಗೆದ್ದಿದ್ದರು. ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ಬೆಳ್ಳಿ ಜಯಿಸಿದ್ದ ಗೆಲುವಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜೆಸ್ಸಿಕಾ, ಕಯಾಕ್ ರಿಪೇರಿಗಾಗಿ ಕಾಂಡೋಮ್‌ಗಳನ್ನು ಬಳಸಬಹುದೆಂದು ನಿಮಗೆ ತಿಳಿದಿಲ್ಲ, ಬೇಕಿದ್ದರೆ ಪಂದ್ಯ ಕಟ್ಟಿ ಎಂದಿದ್ದಾರೆ. ಕಾಂಡೋಮ್ ಹೇಗೆ ಬಳಸಿದ ಎಂಬ ವಿಡಿಯೋ ವಿವರಣೆಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಹೀಗಿದೆ ನೋಡಿ ಕಾಂಡೋಮ್ ನ ವಿಧವಿಧ ಉಪಯೋಗ !!

Leave A Reply

Your email address will not be published.