ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸ್ಥಾನಕ್ಕೆ ಏರಿದ ಪ್ರಧಾನಿ ಮೋದಿ | 7 ಕೋಟಿ ಫಾಲೋವರ್ಸ್ ಇರುವ ಅವರ ಖಾತೆಯ ಮೌಲ್ಯವೇ 3.36 ಬಿಲಿಯನ್ !!

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಭಾಜನರಾಗಿದ್ದಾರೆ.

ಸೋಶಿಯಲ್ ಮೀಡಿಯಾ ವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆ ಪ್ರಸ್ತುತ 70 ಮಿಲಿಯನ್ (7 ಕೋಟಿ) ಹಿಂಬಾಲಕರನ್ನು ಹೊಂದಿದೆ. ಆ ಮೂಲಕ ಅಮೆರಿಕ‌ದ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಹಿಂದಿಕ್ಕಿ ಟ್ವಿಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದೆ ರಾಜಕಾರಣಿಗಳ ಪೈಕಿ ಅಗ್ರ ಶ್ರೇಯಾಂಕಕ್ಕೆ ಮಾಡಿ ತಲುಪಿದ್ದಾರೆ.

ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಬಳಕೆಯಲ್ಲಿ ಅಗ್ರಗಣ್ಯರಾಗಿದ್ದರು. ಟ್ವಿಟರ್ ಸಂಸ್ಥೆಯು ಅವರನ್ನು ಅಮಾನತು ಮಾಡಿದ ಬಳಿಕ ಪಿಎಂ ಮೋದಿ ಅವರ ಹೆಸರು ಮೈಕ್ರೋಬ್ಲಾಗಿಂಗ್ ಸೈಟ್‌ನ ಜನಪ್ರಿಯ ನಾಯಕರ ಪೈಕಿ ಅಗ್ರಸ್ಥಾನಕ್ಕೇರಿದೆ.

ಅಷ್ಟೇ ಅಲ್ಲದೆ, 2020 ರಲ್ಲಿ ಟ್ವಿಟ್ಟರ್, ಯೂಟ್ಯೂಬ್, ಗೂಗಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹುಡುಕಲ್ಪಟ್ಟ ರಾಜಕಾರಣಿಗಳಲ್ಲಿಯೇ ಪ್ರಧಾನಿ ಮೋದಿ ಅವರು ಮುಂಚೂಣಿಯಲ್ಲಿದ್ದಾರೆ. 2020 ರಲ್ಲಿ ತಮ್ಮ ಅನುಯಾಯಿಗಳನ್ನು ತೊಡಗಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಸಾಮಾಜಿಕ ಖಾತೆ ಒಟ್ಟು 3.36 ಬಿಲಿಯನ್‌ಗಳಷ್ಟು ಮೌಲ್ಯ ಪಡೆದುಕೊಂಡಿತ್ತು ಎಂದು ವರದಿಗಳು ತಿಳಿಸಿವೆ.

Leave A Reply

Your email address will not be published.