ಪೊಲೀಸ್ ಇಲಾಖೆಗೆ ಸೇರಿ 25 ವರ್ಷ ಸೇವೆ,50 ನೇ ವರ್ಷದ ಜನ್ಮದಿನ ಸಂಭ್ರಮ | ವಿಕಲ ಚೇತನಗೆ ವೀಲ್ ಚೇರ್ ನೀಡಿದ ವಸಂತ ಗೌಡ ನೂಜಿ

ಸವಣೂರು : ಪೋಲಿಸ್ ಇಲಾಖೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಮತ್ತು ಜೀವನದ ಐವತ್ತು ವರ್ಷಗಳನ್ನು ಪೂರೈಸಿರುವ ನೆನಪಿಗೆ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಮತ್ತು ಬೆಳಂದೂರು ಗ್ರಾಮದ ಬೀಟ್ ಪೊಲೀಸ್ ಆಗಿರುವ ಶ್ರೀ ವಸಂತ ಗೌಡ ನೂಜಿ ಅವರು ಹಲವು ಸಮಯದಿಂದ ಅನಾರೋಗ್ಯದಿಂದ ಮನೆಯ ಒಳಗಡೆ ಇರುವ ಮನೆಯಿಂದ ಹೊರಗಡೆ ಬರಲಾಗದ ಪರಿಸ್ಥಿತಿಯಲ್ಲಿ ಇರುವ ತಮ್ಮ ಬೀಟ್ ವ್ಯಾಪ್ತಿಯ ಬೆಳಂದೂರು ಗ್ರಾಮದ ಜನತಾ ಕಾಲೊನಿಯ ಶ್ರೀ ಕುಶಲ ಎಂಬುವವರಿಗೆ ವೀಲ್‌ಚೇರ್ ನೀಡಿ ಆಸರೆಯಾಗುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ವಸಂತ ಗೌಡ ನೂಜಿ, ಅವರ ಪುತ್ರ ರೋಹಿನೀಶ್ ನೂಜಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತ್ ಕೆಡೆಂಜಿ, ಉಪಾಧ್ಯಕ್ಷರಾದ ತೇಜಾಕ್ಷಿ ಕೊಡಂಗೆ, ಸದಸ್ಯರಾದ ಜಯಂತ ಅಬೀರ, ಜಯರಾಮ ಬೆಳಂದೂರು, ಹರಿಣಾಕ್ಷಿ, ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಸಚಿನ್ ಸವಣೂರು, ಜಿನ್ನಪ್ಪ ಗೌಡ ಅಂಕಜಾಲು ಉಪಸ್ಥಿತರಿದ್ದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: