ಒಲಿಂಪಿಕ್ಸ್ ನಲ್ಲಿ ಬಾಲಿಕೆಯರದೇ ದೊಡ್ಡ ಸದ್ದು | 13 ನೇ ವಯಸ್ಸಿಗೇ ಚಿನ್ನ ಗೆದ್ದ ಹುಡುಗಿ

ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕನೇ ದಿನದಂದು ಹದಿಹರೆಯದ ಆಟಗಾರರು ಸದ್ದು ಮಾಡಿದ್ದಾರೆ. ಇಲ್ಲಿಬ್ಬರು 13 ವರ್ಷದ ಇಬ್ಬರು ಬಾಲಕಿಯರು ಒಂದೇ ಆಟದಲ್ಲಿ ಎದುರುಬದುರಾಗಿ ಸ್ಪರ್ಧಿಸಿದ್ದಾರೆ. ಈ ಕಾರಣದಿಂದಾಗಿ ಸ್ಪರ್ಧೆಯು ಬಹಳ ರಸಭರಿತವಾಗಿತ್ತು.

ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ (skateboarding) ಆಟ ಪಾದಾರ್ಪಣೆ ಮಾಡುತ್ತಿದೆ. ಸ್ಕೇಟ್‌ಬೋರ್ಡಿಂಗ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಬ್ಬರು ಹುಡುಗಿಯರು ಮುಖಾಮುಖಿಯಾಗಿದ್ದರು. ಜಪಾನ್‌ನ ನಿಶಿಯಾ ಮೊಮಿಜಿ ಚಿನ್ನದ ಪದಕ ಗೆದ್ದರೆ, ಬ್ರೆಜಿಲ್‌ನ ರೈಸಾ ಲೀಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಶಿಯಾ ಮೊಮೊಜಿ ಒಲಿಂಪಿಕ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಜಪಾನಿನ ಮಹಿಳಾ ಸ್ಕೇಟ್ಬೋರ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಿಳೆಯರ ಸ್ಕೇಟ್‌ಬೋರ್ಡಿಂಗ್ ಪಂದ್ಯಾವಳಿಯಲ್ಲಿ ಜಪಾನ್ ಕಂಚಿನ ಪದಕ ಗೆದ್ದಿದೆ. ಜಪಾನ್ ಮೂಲದ 18 ವರ್ಷದ ಫೂನಾ ನಕಯಾಮಾ ಪದಕ ಗೆದ್ದಿದ್ದಾರೆ. ಈ ಮೂವರು ಕ್ರೀಡಾಪಟುಗಳಿಗೆ ಇದು ಮೊದಲ ಒಲಿಂಪಿಕ್ಸ್ ಆಗಿದೆ. ಮೊದಲ ಒಲಿಂಪಿಕ್ಸ್‌ನಲ್ಲಿ ಈ ಮೂವರು ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದು, ತಮ್ಮ ದೇಶಕ್ಕಾಗಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಜಪಾನ್‌ನ ನಿಶಿಯಾ ಮೊಮೊಜಿ ಸ್ಕೇಟ್‌ಬೋರ್ಡಿಂಗ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ನಂತರ ಭಾವುಕರಾದರು. ಮೊಮೊಜಿಗೆ ಈ ಯಶಸ್ಸು ಬಹಳ ಮುಖ್ಯವಾಗಿತ್ತು. ಮೊದಲ ಬಾರಿಗೆ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರಿಂದ ಮೊಮೊಜಿ ಭಾವಕರಾಗಿ ಕ್ರೀಡಾಂಗಣದಲ್ಲೇ ಕಣ್ಣೀರು ಹಾಕಿದರು.

ಮತ್ತೊಂದೆಡೆ, ಮಹಿಳೆಯರ ಸ್ಕೇಟ್‌ಬೋರ್ಡಿಂಗ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಬ್ರೆಜಿಲಿಯನ್ ರೈಸಾ ಲೀಲ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಅಭ್ಯಾಸವನ್ನು ಪ್ರಾರಂಭಿಸಿದ್ದರಂತೆ. ಇಂದು, 5 ವರ್ಷಗಳ ಕಠಿಣ ಪರಿಶ್ರಮದ ನಂತರ, ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ರೈಸಾ ಲಿಲ್ಲೆ ಅವರನ್ನು ಬ್ರೆಜಿಲ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ ರಾಣಿ ಎಂದು ಕರೆಯುತ್ತಾರೆ. ಅವರು 2015 ರಲ್ಲಿ ಸ್ಕೇಟ್‌ಬೋರ್ಡಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನೂ ಗೆದಿದ್ದರು.

Leave A Reply

Your email address will not be published.