ರೂ.455 ಗಡಿ ದಾಟಿದ ಹೊಸ ಅಡಿಕೆ ಧಾರಣೆ | ಬೆಳೆಗಾರ ಫುಲ್ ಖುಷ್

ಇವತ್ತು ಅಡಿಕೆ ಚಿನ್ನದ ಅಕ್ಕಪಕ್ಕ ನಿಂತುಕೊಂಡು ಬೀಗುತ್ತಿದೆ. ಚಿನ್ನದಂತಹ ಚಿನ್ನಕ್ಕೆ ಹೆಗಲಿಗೆ ಹೆಗಲು ಕೊಟ್ಟು ದಾಪುಗಾಲು ಹಾಕುತ್ತಿದೆ ಅಡಿಕೆಯ ಬೆಲೆ. ಇವತ್ತು ಹೊಸ ಅಡಿಕೆಗೆ ಕೆ.ಜಿ.ಗೆ ರೂ.455 ಗಡಿ ದಾಟಿದೆ. ಇದರಿಂದಾಗಿ ಅಡಿಕೆ ಕೃಷಿಕರು ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿದೆ. ಕಾರಣ ಅಡಿಕೆ ಬೆಲೆ ಸೋಮವಾರ ಹೊರ ಮಾರುಕಟ್ಟೆಯಲ್ಲಿ 455 ರೂ.ಗಡಿ ದಾಟಿ, ಮುಂದಕ್ಕೆ ಮುಖಮಾಡಿ ನುಗ್ಗಿರುವುದು.

ಸೋಮವಾರ ಕ್ಯಾಂಪೋ ಧಾರಣೆಗಿಂತ 5 ರೂ. ಅಧಿಕ ಧಾರಣೆ ಹೊರ ಮಾರುಕಟ್ಟೆಯಲ್ಲಿ ಇತ್ತು. ಸುಳ್ಯ ತಾಲೂಕಿನ ಬೆಳ್ಳಾರೆಯ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 453 ರಿಂದ 455 ರೂ. ತನಕ ಖರೀದಿಯಾಗಿದೆ.

ಕ್ಯಾಂಪ್ಕೋ ಮತ್ತು ಹೊರ ಮಾರುಕಟ್ಟೆ ನಡುವೆ, ಹೊಸ ಅಡಿಕೆ ಧಾರಣೆ ಏರಿಕೆಗೆ ಪೈಪೋಟಿ ಕಂಡು ಬಂದಿದೆ. ಹಳೆ ಅಡಿಕೆ ಧಾರಣೆ ಸ್ಥಿರವಾಗಿದ್ದು, 520 ರಿಂದ 530 ರಷ್ಟು ಇದೆ.

ಬೆಲೆ ಏರಿಕೆ ಏನು ಕಾರಣ?

ಈ ಬಾರಿ ಫಸಲು ಕಡಿಮೆ ಆಗಿರುವುದು, ಅಂತರ್‌ ದೇಶೀಯ ಗಡಿಗಳು ತೆರವು ಸಾಧ್ಯತೆ ಕಡಿಮೆ ಇರುವುದು, ಈಗಾಗಲೇ ಶೇ. 75ರಷ್ಟು ಅಡಿಕೆ ಮಾರಾಟ ಆಗಿರುವುದು ಮೊದಲಾದ ಕಾರಣಗಳಿಂದ ಅಡಿಕೆ ಕೊರತೆ ಧಾರಣೆ ಏರಿಕೆಗೆ ಕಾರಣ ಎನ್ನಲಾಗಿದೆ.

ರೈಲ್ವೇಯಲ್ಲಿ ಸಾಗಾಟ ಧಾರಣೆ ಏರಿಕೆಗೆ ಪೂರಕ

ಕೊಂಕಣ ರೈಲ್ವೇ ಪುತ್ತೂರಿನಿಂದ ಸ್ಪರ್ಧಾತ್ಮಕ ದರದಲ್ಲಿ ಗುಜರಾತ್‌, ಅಹಮದಾಬಾದ್‌ ಮೊದಲಾದೆಡೆ ಅಡಿಕೆ ಸಾಗಾಟ ನಡೆಸುತ್ತಿದೆ. ಇದರಿಂದ ಸಾಗಾಟದ ವೆಚ್ಚ ಇಳಿಮುಖ ಮತ್ತು ಸಮಯ ಉಳಿತಾಯವಾಗಿದ್ದು, ಅಡಿಕೆ ಧಾರಣೆ ಏರಿಕೆಗೆ ಪರೋಕ್ಷ ಕಾರಣ ಎನ್ನಲಾಗಿದೆ. ಈ ಹಿಂದೆ ಲಾರಿ, ಟ್ರಕ್‌ಗಳಲ್ಲಿ ಅಡಿಕೆಯನ್ನು ಸಾಗಿಸುತ್ತಿದ್ದಾಗ ಸಾಗಾಟ ವೆಚ್ಚ ಹೆಚ್ಚಾಗುತ್ತಿದ್ದು ಈ ಅದಕ್ಕಿಂತ ರೈಲ್ವೇಯಲ್ಲಿ ವೆಚ್ಚ ಕಡಿಮೆ ಆಗಿರುವ ಕಾರಣ ಈ ಲಾಭ ಧಾರಣೆ ಏರಿಕೆಗೆ ಕಾರಣ ಎಂದೂ ಊಹಿಸಲಾಗಿದೆ.

Leave A Reply

Your email address will not be published.