ಮಂಗಳೂರಲ್ಲೊಬ್ಬ ಹಸಿ ಮೀನು ಭಕ್ಷ್ಯಕ | ಹಸಿ ಬಂಗುಡೆ ಮೀನನ್ನು ತ್ರಾಜ್ಯದ ಜತೆ ಸ್ವಾಹಾ ಮಾಡಿದ ವಿಡಿಯೋ ವೈರಲ್

ಮಂಗಳೂರು: ಮಂಗಳೂರಿನಲ್ಲಿ ಯುವಕನೋರ್ವನು ಸಲೀಸಾಗಿ ಹಸಿ ಮೀನನ್ನೇ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ. 

ಮಂಗಳೂರು ನಗರದ ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್ ಎಂಬ ಯುವಕನೇ ಹಸಿ ಬಂಗುಡೆ ಮೀನಿನ ಹೊಸ ರುಚಿ ಅನುಭವಿಸಿದಾತ.

ಎರಡು ದಿನದ ಕೆಳಗೆ, ಜುಲೈ 25 ರಂದು ಭಾನುವಾರ ಮಧ್ಯಾಹ್ನ  ಗೆಳೆಯರೊಂದಿಗೆ ಹರಟುತ್ತಾ ಇರುವಾಗ ಅವರಿಂದ ಹಸಿ ಮೀನು ತಿನ್ನುವ ಚಾಲೆಂಜ್ ಹರೀಶ್ ಗೆ ಎದುರಾಗಿತ್ತು.
ಇದಕ್ಕೆ ತಕ್ಷಣ ಒಪ್ಪಿದ ಹರೀಶ್, ಒಂದು ಮಧ್ಯಮ ಗಾತ್ರದ ಹಸಿ ಬಂಗುಡೆ ಮೀನನ್ನು ಬಾಲದ ಬದಿಯಿಂದ ಆರಂಭಿಸಿ, ಅದರ ಹೊಟ್ಟೆಯ ಒಳಗಿನ ತ್ರಾಜ್ಯದ ಸಮೇತ ತಲೆಯವರೆಗೆ ಏನನ್ನೂ ಬಿಸಾಡದೆ ಚಪ್ಪರಿಸಿ ತಿಂದಿದ್ದಾನೆ. ಹೀಗೆ ಇಡೀ ಮೀನನ್ನು ಅದರ ಹೊಟ್ಟೆಯೊಳಗಿನ ತ್ಯಾಜ್ಯದ ಸಹಿತ ತಿಂದು ಎಲ್ಲರನ್ನೂ ಚಕಿತನನ್ನಾಗಿಸಿದ್ದಾರೆ.

Ad Widget


Ad Widget


Ad Widget

Ad Widget


Ad Widget

ಈಗ ಹಸಿ ಮೀನಿನ ಈ ಹೊಸ ರುಚಿ ವೀಡಿಯೋ ವೈರಲ್ ಆಗುತ್ತಿದ್ದು, ಫೇಸ್ ಬುಕ್ ನ ಅದನ್ನು 19 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನಂತರ ವಾಟ್ಸಪ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೀಡಿಯೋ ಶೇರ್ ಆಗುತ್ತಿದೆ.

ಇದೀಗ ಇದರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದೀಗ ಆತನಿಗೆ ಹಸಿ ಮೀನು ತಿಂದ ಅನುಭವ ಕೇಳಲು ಜನರು
ಮೇಲಿಂದ ಮೇಲೆ ಕರೆ ಮಾಡುತ್ತಿದ್ದಾರಂತೆ. ‘ಹಸಿ ಮೀನಿನ ಟೇಸ್ಟ್ ಹೇಗಿದೆ ಮಾರೆ. ಶೋಕು ಉಂಡ ? ‘ ಎಂಬುದು ಜನರ ಕುತೂಹಲದ ಪ್ರಶ್ನೆ. ಚಾಲೆಂಜ್ ಗಾಗಿ ಹೊಟ್ಟೆಯೊಳಗೆ ಹಸಿ ಬಂಗುಡೆ ಬಗ್ಗಿಸಿದಾತ, ಇದೊಂದು ವೀಡಿಯೊ ದಿಂದ ಹರೀಶ್ ರಾತ್ರೋರಾತ್ರಿ ಎಲ್ಲಡೆ ಸುದ್ದಿಯಾಗಿರೋದಂತೂ ಸುಳ್ಳಲ್ಲ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ👇:

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: