ಸವಣೂರು : ಕಾರ್ಗಿಲ್ ವಿಜಯ ದಿವಸ್,ಕಾರ್ಗಿಲ್ ಯೋಧರಿಗೆ ಗೌರವಾರ್ಪಣೆ

ಸವಣೂರು: ಭಾರತ ಮಾತೆಯ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರು ಹಾಗೂ ರೈತ ದೇಶದ ಎರಡು ಕಣ್ಣುಗಳು,ನಮ್ಮ ದೇಶ ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪಟ್ಟ ಯಾರಿಗೂ ಸಮವಲ್ಲ. ಇಂದು ಹಲವು ಕುಂದು ಕೊರತೆಗಳ ನಡುವೆಯೂ ಆರ್ಥಿಕ ಸ್ಥಾನಮಾನದಲ್ಲೂ ಉನ್ನತ ಮಟ್ಟವನ್ನೇ ಕಾಯ್ದುಕೊಂಡಿದೆ ಎಂದು ಸವಣೂರು ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ ಸುಲಾಯ ಹೇಳಿದರು.

ಅವರು ಸೋಮವಾರ ಸಂಜೆ ಸವಣೂರು ಯುವ ಸಭಾಭವನದಲ್ಲಿ ಸವಣೂರು ಯುವಕ ಮಂಡಲ ಹಾಗೂ ಅಂಬಾ ಬ್ರದರ್ಸ್ ವತಿಯಿಂದ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸವಣೂರು ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಕುದ್ಮಾರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಸದಸ್ಯ ತೀರ್ಥರಾಮ ಕೆಡೆಂಜಿ,ಯುವಕ ಮಂಡಲದ ಕಾರ್ಯದರ್ಶಿ ಪ್ರಕಾಶ್ ಮಾಲೆತ್ತಾರು ಉಪಸ್ಥಿತರಿದ್ದರು.

ಕಾರ್ಗಿಲ್ ಯೋಧರಿಗೆ ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡ ಯೋಧರಾದ ಪ್ರವೀಣ್ ರೈ ಹಾಗೂ ತನಿಯಪ್ಪ ನಾಯ್ಕ ಅವರನ್ನು ಗೌರವಿಸಲಾಯಿತು.

ಆದರ್ಶ್ ಜೆ. ರೈ ,ಕೀರ್ತನ್ ಮೇಲಿನಮುಗ್ಗ ಯೋಧರ ಪರಿಚಯ ಮಾಡಿದರು.ಸಂಪ್ರೀತ್ ಶೆಟ್ಟಿ ಬಾರಿಕೆ ದೇಶಭಕ್ತಿಗೀತೆ ಹಾಡಿದರು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು,ಸಾಮಾಜಿಕ ಮುಂದಾಳು ರಾಮಕೃಷ್ಣ ಪ್ರಭು ಹಾಗೂ ಯುವಕ ಮಂಡಲದ ಸದಸ್ಯರು,ಅಂಬಾ ಬ್ರದರ್ಸ್ ತಂಡದ ಸದಸ್ಯರು ಪಾಲ್ಗೊಂಡಿದ್ದರು.

ಸವಣೂರು ಯುವಕ‌ ಮಂಡಲದ ಮಾಜಿ ಅಧ್ಯಕ್ಷ ದಯಾನಂದ ಮೆದು ಸ್ವಾಗತಿಸಿದರು, ಅಂಬಾ ಬ್ರದರ್ಸ್ ತಂಡದ ಬಾಲಚಂದ್ರ ರೈ ಕೆರೆಕ್ಕೋಡಿ ವಂದಿಸಿದರು. ಯುವಕ ಮಂಲಡದ ಮಾಜಿ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.