ತಾಯಿಯ ಆಶೀರ್ವಾದ,ತರವಾಡು ಮನೆ ಭೇಟಿ ವಿಶೇಷ ಅರ್ಥ ಬೇಡ-ನಳಿನ್ ಕುಮಾರ್

ಸವಣೂರು: ದ.ಕ.ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತನ್ನ ಹುಟ್ಟೂರು ಕಡಬದ ಪಾಲ್ತಾಡಿ ಗ್ರಾಮದ ಕುಂಜಾಡಿಗೆ ಬಂದು ತಾಯಿಯ ಆಶೀರ್ವಾದ ಹಾಗೂ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.ಇದು ನನ್ನ ಎಂದಿನ ಸಂಪ್ರದಾಯ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.   ವಿವಿಧ ಮಾಧ್ಯಮಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವರದಿಗಳು ಬರುತ್ತಿರುವುದರಿಂದ ನಳಿನ್ ಕುಮಾರ್ ಕಟೀಲ್ ಈ ಸ್ಪಷ್ಟನೆ ನೀಡಿದ್ದಾರೆ.