ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದಿದ್ದ ಮೀರಾಬಾಯಿ ಚಾನು ಚಿನ್ನವನ್ನೇ ಎತ್ಕೊಂಡು ಬರ್ತಾರಾ ?!

ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ಚಿನ್ನದ ಪದಕವೇ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾನು ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದ ಚೀನಾದ ಜಿಹುಯಿ ಹೌ ಅವರನ್ನು ಇಂದು ಎರಡನೇ ಡೋಪಿಂಗ್ ಪರೀಕ್ಷೆಗೆ ಒಡ್ಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಜುಲೈ 24 ರಂದು ನಡೆದ ಮಹಿಳೆಯರ 49 ಕೆಜಿ ತೂಕದ ಕೆಟಗರಿಯಲ್ಲಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚೀನಾದ ಹೌ, 210 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಪಡೆದಿದ್ದರು. ಕ್ರೀನ್ ಅಂಡ್ ಜರ್ಕ್ ವಿಶ್ವ ದಾಖಲೆ ಹೊಂದಿರುವ ಚಾನು, 202 ಕೆಜಿ ಭಾರ ಎತ್ತಿ ಎರಡನೇ ಸ್ಥಾನ ಗಳಿಸಿದ್ದರು. ಇಂಡೋನೇಷಿಯಾದ ವಿಂ ಕಾಂಟಿಕ ಅವರು 194 ಕೆಜಿ ಭಾರ ಎತ್ತಿ ಕಂಚಿನ ಪದಕ ಗಳಿಸಿದ್ದರು.

ದೈಹಿಕ ಪರೀಕ್ಷೆಯಲ್ಲಿ, ಚೀನಾದ ಚಿನ್ನ ಗೆದ್ದ ಹೌ ವಿಷಯದಲ್ಲಿ ಕೆಲವು ಅಡ್ಡ ವಿಶ್ಲೇಷಣೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ರಕ್ತದ ಸ್ಯಾಂಪಲ್‌ ಅನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಅವರು ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಆ್ಯಂಟಿ ಡೋಪಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೇ ಎಂದೂ ಪರಿಶೀಲಿಸಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಒಂದು ವೇಳೆ ಚೀನಾದ ಸ್ಪರ್ಧೆ ರೂಪಿನಲ್ಲಿ ಆದರೆ ಸಹಜವಾಗಿ ಬೆಳ್ಳಿ ಗೆದ್ದಿರುವ ನಮ್ಮ ಮೀರಾಬಾಯಿ ಚಾನು ಚಿನ್ನ ಗೆಲ್ಲಲಿದ್ದಾರೆ. ಮೀರಾಬಾಯಿ ಚಾನು ಚಿನ್ನ ಗೆಲ್ಲುತ್ತಾರೆ ಎಂದು ಕಾಯುತ್ತಿದೆ ದೇಶ !!

Leave A Reply

Your email address will not be published.