ಬೆಳ್ತಂಗಡಿ | ಮಹಿಳೆಯ ಕಾಲಿನ ಮೇಲೆ ಹರಿದ ಟೆಂಪೋ, ಎರಡೂ ಕಾಲುಗಳಿಗೆ ಗಂಭೀರ ಗಾಯ !

ಬೆಳ್ತಂಗಡಿ : ಕೋಳಿಗಳನ್ನು ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಟೆಂಪೋ ಹರಿದು ಓರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಚಿಕನ್ ಸೆಂಟರ್‌ಗೆ ಟೆಂಪೋದಿಂದ ಕೋಳಿಗಳನ್ನು ಅನ್‌ಲೋಡ್ ಮಾಡಲಾಗುತ್ತಿತ್ತು. ಆ ಸಂದರ್ಭ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಟೆಂಪೊ ವಾಹನವು ಹಿಂದೆ ನಿಂತಿದ್ದ ಮಹಿಳೆಯ ಕಾಲ ಮೇಲೆ ಚಲಿಸಿದೆ.

ಈ ಘಟನೆ ಬೆಳ್ತಂಗಡಿಯ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ಎಂಬಲ್ಲಿ ನಡೆದಿದೆ. ಪಡಂಗಡಿಯ ಮುಟ್ಟಿ (65) ಎಂಬವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಿಳೆಯ ಕಾಲಿನ ಮೇಲೆ ಹಾದು ಹೋದ ಪರಿಣಾಮ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಮೊದಲು ಸ್ಥಳೀಯರ ಸಹಕಾರದಿಂದ ಗುರುವಾಯನಕೆರೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪಾಠಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸೇರಿಸಲಾಗಿದೆ.

Leave A Reply

Your email address will not be published.