Day: July 26, 2021

ರಾಜ್ಯ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರ ,ಸದಸ್ಯರ ನೇಮಕ

ರಾಜ್ಯ ಸರಕಾರ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಇಂದು ಆದೇಶ ಹೊರಡಿಸಿದೆ. ಹಿರಿಯ ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರೂ ಆಗಿರುವ ಸದಾಶಿವ ಶೆಣೈ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಆದೇಶ ಹೊರಬಿದ್ದ ಬೆನ್ನಲ್ಲೆ ಸದಾಶಿವ ಶೆಣೈ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಸದಸ್ಯರಾಗಿ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಮಲೆನಾಡು ಭಾಗದ ಸೂಕ್ಷ್ಮ ಸಂವೇದನೆಯ ವರದಿಗಾರ, ಲೇಖಕ ಗೋಪಾಲ್ ಯಡಗೆರೆ ,ಹಿರಿಯ ಪತ್ರಕರ್ತ ಮಲೆನಾಡು ಭಾಗದ ಕೆ ಕೆ ಮೂರ್ತಿ ಮತ್ತು ಶಿವಕುಮಾರ …

ರಾಜ್ಯ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರ ,ಸದಸ್ಯರ ನೇಮಕ Read More »

ಇಂದಿನಿಂದ ಕುಕ್ಕೆಯಲ್ಲಿ ಸೇವೆಗಳ ಜೊತೆಗೆ ಅನ್ನಪ್ರಸಾದ ಆರಂಭ |ಜುಲೈ 29 ರ ಬಳಿಕ ಆರಂಭವಾಗಲಿದೆ ಸರ್ಪಸಂಸ್ಕಾರ

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ, ಸರ್ಪ ಸಂಸ್ಕಾರಕ್ಕೆ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಿಂದ ಸೇವೆಗಳು ಆರಂಭಗೊಳ್ಳಲಿದೆ. ಕ್ಷೇತ್ರದಲ್ಲಿನ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಜು.29ರಿಂದ ಪ್ರಾರಂಭಗೊಳ್ಳಲಿದೆ. ಈ ಮೊದಲೇ ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ,ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶವಿರಲಿಲ್ಲ. ಆದರೆ ಇಂದಿನಿಂದ ಸೇವೆಗಳ ಜೊತೆಗೆ ಭಕ್ತರಿಗೆ ಭೋಜನ ಪ್ರಸಾದ ಸೇವೆಯೂ ನಡೆಯಲಿದೆ. ಬೆಳಗ್ಗೆ …

ಇಂದಿನಿಂದ ಕುಕ್ಕೆಯಲ್ಲಿ ಸೇವೆಗಳ ಜೊತೆಗೆ ಅನ್ನಪ್ರಸಾದ ಆರಂಭ |ಜುಲೈ 29 ರ ಬಳಿಕ ಆರಂಭವಾಗಲಿದೆ ಸರ್ಪಸಂಸ್ಕಾರ Read More »

ಬೆಳ್ತಂಗಡಿ | ಮಹಿಳೆಯ ಕಾಲಿನ ಮೇಲೆ ಹರಿದ ಟೆಂಪೋ, ಎರಡೂ ಕಾಲುಗಳಿಗೆ ಗಂಭೀರ ಗಾಯ !

ಬೆಳ್ತಂಗಡಿ : ಕೋಳಿಗಳನ್ನು ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಟೆಂಪೋ ಹರಿದು ಓರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಚಿಕನ್ ಸೆಂಟರ್‌ಗೆ ಟೆಂಪೋದಿಂದ ಕೋಳಿಗಳನ್ನು ಅನ್‌ಲೋಡ್ ಮಾಡಲಾಗುತ್ತಿತ್ತು. ಆ ಸಂದರ್ಭ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಟೆಂಪೊ ವಾಹನವು ಹಿಂದೆ ನಿಂತಿದ್ದ ಮಹಿಳೆಯ ಕಾಲ ಮೇಲೆ ಚಲಿಸಿದೆ. ಈ ಘಟನೆ ಬೆಳ್ತಂಗಡಿಯ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ಎಂಬಲ್ಲಿ ನಡೆದಿದೆ. ಪಡಂಗಡಿಯ ಮುಟ್ಟಿ (65) ಎಂಬವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ.ಮಹಿಳೆಯ ಕಾಲಿನ ಮೇಲೆ ಹಾದು ಹೋದ ಪರಿಣಾಮ …

ಬೆಳ್ತಂಗಡಿ | ಮಹಿಳೆಯ ಕಾಲಿನ ಮೇಲೆ ಹರಿದ ಟೆಂಪೋ, ಎರಡೂ ಕಾಲುಗಳಿಗೆ ಗಂಭೀರ ಗಾಯ ! Read More »

ತಾಯಿಯ ಆಶೀರ್ವಾದ,ತರವಾಡು ಮನೆ ಭೇಟಿ ವಿಶೇಷ ಅರ್ಥ ಬೇಡ-ನಳಿನ್ ಕುಮಾರ್

ಸವಣೂರು: ದ.ಕ.ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತನ್ನ ಹುಟ್ಟೂರು ಕಡಬದ ಪಾಲ್ತಾಡಿ ಗ್ರಾಮದ ಕುಂಜಾಡಿಗೆ ಬಂದು ತಾಯಿಯ ಆಶೀರ್ವಾದ ಹಾಗೂ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.ಇದು ನನ್ನ ಎಂದಿನ ಸಂಪ್ರದಾಯ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವರದಿಗಳು ಬರುತ್ತಿರುವುದರಿಂದ ನಳಿನ್ ಕುಮಾರ್ ಕಟೀಲ್ ಈ ಸ್ಪಷ್ಟನೆ ನೀಡಿದ್ದಾರೆ.

ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದಿದ್ದ ಮೀರಾಬಾಯಿ ಚಾನು ಚಿನ್ನವನ್ನೇ ಎತ್ಕೊಂಡು ಬರ್ತಾರಾ ?!

ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ಚಿನ್ನದ ಪದಕವೇ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾನು ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದ ಚೀನಾದ ಜಿಹುಯಿ ಹೌ ಅವರನ್ನು ಇಂದು ಎರಡನೇ ಡೋಪಿಂಗ್ ಪರೀಕ್ಷೆಗೆ ಒಡ್ಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಜುಲೈ 24 ರಂದು ನಡೆದ ಮಹಿಳೆಯರ 49 ಕೆಜಿ ತೂಕದ ಕೆಟಗರಿಯಲ್ಲಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚೀನಾದ ಹೌ, 210 ಕೆಜಿ …

ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದಿದ್ದ ಮೀರಾಬಾಯಿ ಚಾನು ಚಿನ್ನವನ್ನೇ ಎತ್ಕೊಂಡು ಬರ್ತಾರಾ ?! Read More »

ಶಿಕಾರಿಪುರ ಸಂಪೂರ್ಣ ಸ್ತಬ್ಧ | ಯಡಿಯೂರಪ್ಪ ಪದಚ್ಯುತಿಗೆ ಅಂಗಡಿ-ಮುಂಗಟ್ಟು ಬಾಗಿಲು ಎಳೆದು ಪಕ್ಷಾತೀತ ಪ್ರತಿಭಟನೆ !

ಶಿವಮೊಗ್ಗ: ಶಿಕಾರಿಪುರ ಸಂಪೂರ್ಣ ಸ್ತಬ್ಧ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ ಬೆನ್ನಿಗೆ ಶಿಕಾರಿಪುರ ಸಂಪೂರ್ಣ ಮೌನವಾಗಿದೆ. ಪಟ್ಟಣದಾದ್ಯಂತ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಎಲ್ಲಾ ಅಂಗಡಿಗಳು ತಮ್ಮ ಶೆಟರ್ ಕೆಳಕ್ಕೆ ಎಳೆದುಕೊಂಡು ಬಾಗಿಲು ಹಾಕಿ ಕೂತಿವೆ. ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ ಪೆಟ್ರೋಲ್ ಬಂಕ್ ರಸ್ತೆ, ಶಿಶುವಿಹಾರ ರಸ್ತೆ, ಎಸ್.ಹೆಚ್.ರಸ್ತೆ, ತಾಲೂಕು ಆಫೀಸ್ ರಸ್ತೆ, ಮಾಸೂರು ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಪಟ್ಟಣದಲ್ಲಿ ವರ್ತಕರು ತಮ್ಮ ತಮ್ಮಲ್ಲೇ ನಿರ್ಧಾರ ಮಾಡಿ, …

ಶಿಕಾರಿಪುರ ಸಂಪೂರ್ಣ ಸ್ತಬ್ಧ | ಯಡಿಯೂರಪ್ಪ ಪದಚ್ಯುತಿಗೆ ಅಂಗಡಿ-ಮುಂಗಟ್ಟು ಬಾಗಿಲು ಎಳೆದು ಪಕ್ಷಾತೀತ ಪ್ರತಿಭಟನೆ ! Read More »

ಮುರ್ಡೇಶ್ವರ:ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಮರುಜೀವ |ತಪ್ಪುಮಾಡದೇ ಜೈಲು ಶಿಕ್ಷೆ ಅನುಭವಿಸಿದಾತ ನಿರಪರಾಧಿ!! | ನೈಜ ಆರೋಪಿಗಳ ಬಂಧನಕ್ಕೆ ಮರು ತನಿಖೆ

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನವಾಗಿದ್ದರೂ, ಕೋರ್ಟ್ ಆತನನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದ್ದು, ಸದ್ಯ ನೈಜ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಗೆ ಸೂಚಿಸಿದೆ.ಇತ್ತ ಯಾವ ತಪ್ಪು ಮಾಡದೆಯೂ ಸುಮಾರು ಆರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ, ತನ್ನ ಮೇಲೆ ಆರೋಪ ಹೊರಿಸಿ, ಜೈಲಿಗಟ್ಟಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಿಡಿಶಾಪ ಹಾಕುತ್ತಿರುವುದು ಮಾತ್ರ ವಿಪರ್ಯಾಸ. ಘಟನೆ ವಿವರ: ಸುಮಾರು ಹತ್ತು ವರ್ಷಗಳ ಹಿಂದೆ, ಅಂದರೆ 2010 ರ ಅಕ್ಟೋಬರ್ …

ಮುರ್ಡೇಶ್ವರ:ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಮರುಜೀವ |ತಪ್ಪುಮಾಡದೇ ಜೈಲು ಶಿಕ್ಷೆ ಅನುಭವಿಸಿದಾತ ನಿರಪರಾಧಿ!! | ನೈಜ ಆರೋಪಿಗಳ ಬಂಧನಕ್ಕೆ ಮರು ತನಿಖೆ Read More »

ಯಡಿಯೂರಪ್ಪನವರು ಮೋದಿ ಟೀಮಿನ ಹೊಸ ಬಲಿಪಶು | ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಟ್ವೀಟ್ | ಮೋದಿ ಬ್ರಿಗೇಡ್ ನಿಂದ ಮೂಲೆಗುಂಪು(!) ಆದವರ ಈ ಪಟ್ಟಿ ನೋಡಿ !!

ನವದೆಹಲಿ: ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಈಗ ವಿಪಕ್ಷ ಕಾಂಗ್ರೆಸ್ ಗೆ ಆಹಾರವಾಗಿ ಪರಿಣಮಿಸಿದೆ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ರಾಜೀನಾಮೆ ವಿಷಯವನ್ನು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪನವರಿಗೆ ಒತ್ತಡ ಹೇರಿ, ಚಿತ್ರಹಿಂಸೆ ಮೂಲಕ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ದೆಹಲಿಯ ನಿರಂಕುಶಾಧಿಕಾರಿ ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಮಾಡುತ್ತಾರೆ ಹೊರತು ಬಿಜೆಪಿ ಶಾಸಕರು ಸಿಎಂ ಆಯ್ಕೆ ಮಾಡುತ್ತಿಲ್ಲ. ಹಿರಿಯ ನಾಯಕರನ್ನು ಮೋದಿ ಕಸದ ಬುಟ್ಟಿಗೆ …

ಯಡಿಯೂರಪ್ಪನವರು ಮೋದಿ ಟೀಮಿನ ಹೊಸ ಬಲಿಪಶು | ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಟ್ವೀಟ್ | ಮೋದಿ ಬ್ರಿಗೇಡ್ ನಿಂದ ಮೂಲೆಗುಂಪು(!) ಆದವರ ಈ ಪಟ್ಟಿ ನೋಡಿ !! Read More »

ಸಿ.ಎಂ.ಗಾದಿಗೆ ನಳಿನ್ ಕುಮಾರ್ ಹೆಸರು | ದೈವ ದೇವರ, ತಾಯಿಯ ಆಶೀರ್ವಾದ ಪಡೆದು ದೆಹಲಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ

ಯಡಿಯೂರಪ್ಪ ಅವರು ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಯಾಗಬೇಕಿದೆ. ಈ ಹುದ್ದೆಗೆ ದ.ಕ.ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ನಾಡಿದ್ದು ಬುಧವಾರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಅವತ್ತೇ ನೂತನ ಮುಖ್ಯಮಂತ್ರಿಯ ಹೆಸರು ಬಹಿರಂಗ ಆಗಲಿದೆ. ಮುಂದಿನ ಮುಖ್ಯಮಂತ್ರಿ ನಳಿನ್ ಕುಮಾರ್ ಕಟೀಲ್ ಆಗಲಿದ್ದಾರೆಯಾ ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣವೂ ಇಲ್ಲದೆ ಇಲ್ಲ. ನಳಿನ್ ಕಟೀಲ್ ಅವರು ಆದಿತ್ಯವಾರ ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ …

ಸಿ.ಎಂ.ಗಾದಿಗೆ ನಳಿನ್ ಕುಮಾರ್ ಹೆಸರು | ದೈವ ದೇವರ, ತಾಯಿಯ ಆಶೀರ್ವಾದ ಪಡೆದು ದೆಹಲಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ Read More »

ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಆಯ್ಕೆ

ಪತ್ರಿಕೋದ್ಯಮದಲ್ಲಿ 33 ವರ್ಷ ಸೇವೆ ಸಲ್ಲಿಸಿರುವ ಇವರು ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಅವರನ್ನು ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಜಯಕಿರಣದಲ್ಲಿ ಕಳೆದ 16 ವರ್ಷಗಳಿಂದ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ,2018 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, 2008 ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ಮು ಪಡೆದುಕೊಂಡಿದ್ದಾರೆ. ಇವರನ್ನು ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ,ಮಂಗಳೂರು ಪ್ರೆಸ್ಸ್ ಕ್ಲಬ್ ಹಾಗು ಜಯಕಿರಣ ಪತ್ರಿಕೆ ಸಂಸ್ಥೆ ಅಭಿನಂದಿಸಿದೆ.

error: Content is protected !!
Scroll to Top