ಇನ್ನು ಒಂದು ಮಿಸ್ಡ್ ಕಾಲ್ ಕೊಟ್ರೆ ಸಾಕು, ಮನೆ ಬಾಗಿಲಲ್ಲಿ ಗ್ಯಾಸ್ ಸಿಲಿಂಡರ್ ಪ್ರತ್ಯಕ್ಷ ಆಗಲಿದೆ

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ವಿಧಾನ ಈಗ ಇನ್ನಷ್ಟು ಸುಲಭವಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಕೇವಲ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶದ ಮೂಲಕವೂ ಬುಕ್ ಮಾಡಬಹುದು.

ಹೌದು, ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಾದ ಭಾರತ್ ಗ್ಯಾಸ್ (Bharat Gas), ಇಂಡೇನ್ ಗ್ಯಾಸ್ (Indane Gas) ಮತ್ತು ಎಚ್‌ಪಿ ಗ್ಯಾಸ್ (HP Gas) ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೇವೆಯನ್ನು ನೀಡುತ್ತಿದೆ.

ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ನಿಮ್ಮ ಫೋನ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಮಿಸ್ಡ್ ಕಾಲ್ ನೀಡುವ ಮೂಲಕ ಕೂಡಾ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಇದಕ್ಕಾಗಿ ಇಂಡೇನ್ ಎಲ್‌ಪಿಜಿ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555, ಬಿಪಿಸಿಎಲ್ (BPCL)ಗ್ರಾಹಕರು 7710955555 ಮತ್ತು ಎಚ್‌ಪಿ (HP) ಗ್ರಾಹಕರು 9493602222 ಗೆ ಮಿಸ್ಡ್ ಕಾಲ್ ನೀಡಬಹುದು.

ಮಿಸ್ಡ್ ಕಾಲ್ (Missed call) ನೀಡಿದ ಕೂಡಲೇ ನಿಮ್ಮ ಸಿಲಿಂಡರ್ ಸೆಕೆಂಡುಗಳಲ್ಲಿ ಬುಕ್ ಆಗುತ್ತದೆ. ಅಲ್ಲದೆ ಸಿಲಿಂಡರ್ ಬುಕ್ ಆಗಿರುವ ಸಂದೇಶ ಕೂಡಾ ನಿಮ್ಮ ಫೋನಿಗೆ ಬರುತ್ತದೆ.

ವಾಟ್ಸಪ್ ಮೂಲಕ ಬುಕ್ ಮಾಡಲಿಚ್ಛಿಸುವ ಗ್ರಾಹಕರು, ಇಂಡೇನ್ ಗ್ಯಾಸ್ (Indane Gas) ಗ್ರಾಹಕರು 7588888824 ಸಂಖ್ಯೆಯ ಮೂಲಕ ಗ್ಯಾಸ್ ಬುಕ್ ಮಾಡಬಹುದು. ಗ್ರಾಹಕರು 7588888824 ನಂಬರ್ ಅನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು. ನಂತರ ವಾಟ್ಸಾಪ್ (Whatsapp) ತೆರೆಯಿರಿ. ಈಗ ಸೇವ್ ಮಾಡಿರುವ ನಂಬರ್ ಅನ್ನು ಓಪನ್ ಮಾಡಿ. ನೋಂದಾಯಿತ ಸಂಖ್ಯೆಯಿಂದ BOOK ಅಥವಾ REFILL # ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಿ. ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲಿ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎನ್ನುವ ಮಾಹಿತಿ ಕೂಡಾ ಇರುತ್ತದೆ.

ಎಚ್‌ಪಿ (HP) ಗ್ರಾಹಕರು 9222201122 ಸಂಖ್ಯೆಗೆ BOOK ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಿ. ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲೂ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎನ್ನುವ ಮಾಹಿತಿ ಇರುತ್ತದೆ.

ಬಿಪಿಸಿಎಲ್ (BPCL) ಗ್ರಾಹಕರು ಸ್ಮಾರ್ಟ್ ಲೈನ್ ನಂಬರ್ ಆದ 1800224344 ಸಂಖ್ಯೆಗೆ 1 ಅಥವಾ BOOK ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಿ. ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲೂ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎಂಬ ಮಾಹಿತಿ ಇರುತ್ತದೆ.

Leave A Reply

Your email address will not be published.