ಧರ್ಮಸ್ಥಳ | ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳ ಚಾತುರ್ಮಾಸ್ಯ ವ್ರತಾರಂಭದ ಎರಡನೆಯ ದಿನ ನಳಿನ್ ಕುಮಾರ್ ಕಟೀಲ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಆಗಮನ

ಧರ್ಮಸ್ಥಳ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶಾರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ ಶ್ರೀ ಗುರುದೇವ ಮಠದಲ್ಲಿ ನಿನ್ನೆ ನೆರವೇರಿತ್ತು.

ಇಂದು, ಚಾತುರ್ಮಾಸ್ಯ ವೃತದ 2ನೆ ದಿನಕ್ಕೆ ನಳಿನ್ ಕುಮಾರ್ ಕಟೀಲ್ ಲೋಕಸಭಾ ಸದಸ್ಯರು, ಮತ್ತು ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ ಸಚಿವರು ಆಗಮಿಸಲಿದ್ದಾರೆ. ಅವರು ಬೆಳಿಗ್ಗೆ 11.00 ಗಂಟೆಗೆ ಮಠಕ್ಕೆ ಬರಲಿದ್ದಾರೆ. ನಂತರ ಅಳದಂಗಡಿ ಗ್ರಾಮ ಮತ್ತು ಶಿಬಾಜೆ ಗ್ರಾಮದವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ.

ಚಾತುರ್ಮಾಸ್ಯ ವೃತದ ಸಮಾಪ್ತಿಯು ತಾ.12-09-2021ನೇ ಗುರುವಾರದಂದು ಮುಕ್ತಾಯಗೊಂಡು, ಅದೇ ದಿನ ಬೆಳಿಗ್ಗೆ ಶ್ರೀಗಳವರ ಸೀಮೋಲ್ಲಂಘನ ಕಾರ್ಯಕ್ರಮ, ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಲಿರುವುದು. ತದನಂತರ ತನ್ನ ಆರಾಧ್ಯ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿರುವುದು.

ದಿ.13-09-2021ನೇ ಶುಕ್ರವಾರದಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳವರ ಪಟ್ಟಾಭಿಷೇಕದ ವರ್ಧಂತಿಯು ನಡೆಯಲಿದೆ. ಪೂರ್ವಾಹ್ನ ಗಂಟೆ 11-00ರಿಂದ 11-30ರ ವರೆಗೆ ಭಜನಾ ಕಾರ್ಯಕ್ರಮ, ಪೂವಾಹ್ನ ಗಂಟೆ 11-30ರಿಂದ 12-30ರ ವರೆಗೆ ಭಕ್ತಾಧಿಗಳ ಗುರುಪಾದುಕಾ ಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ  ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.

ಕೋವಿಡ್ ತಡೆಗಟ್ಟಲು ಸರಕಾರದ ಆದೇಶ ಪಾಲನೆಗಾಗಿ ಭಕ್ತಾದಿಗಳ ಸುರಕ್ಷತೆಗೆ ಈ ಮೇಲಿನ ದಿನಗಳಂದು ಗ್ರಾಮವಾರು ಭಕ್ತರು ಬಂದು ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕಾಗಿ ವಿನಂತಿಸಲಾಗಿದೆ.

Leave A Reply

Your email address will not be published.