ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕ | 87 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಎತ್ತಿ ಹಿಡಿದ ಮೀರಾಬಾಯಿ ಚಾನು !

ಟೋಕಿಯೋ: ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್ ಆರಂಭವಾದ ಎರಡೇ ದಿನಕ್ಕೆ ಭಾರತ ಮೊದಲ ಪದಕ ಬೇಟೆಯಾಡಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

84 ಮತ್ತು 87 ಕೆ.ಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾದ ಮೀರಾಬಾಯಿ 89 ಕೆ.ಜಿ ಭಾರ ಎತ್ತುವಲ್ಲಿ ವಿಫಲವಾದರು. ಹೀಗಾಗಿ ಅವರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರು.

ಚೀನಾದ ಹೌ ಝಿಜು 94 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಲ್ಲದೆ, ಒಲಿಂಪಿಕ್ಸ್ ದಾಖಲೆ ಸೃಷ್ಟಿಸಿದ್ದಾರೆ.

Ad Widget
Ad Widget

Ad Widget

Ad Widget

2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕದ ಸವಿ ನೀಡಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಗೌರವ ಸಂದಿದೆ.

ಮೀರಾಬಾಯಿ ಚಾನು ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಇದೊಂದು ಸಂತೋಷದಾಯಕ ಆರಂಭ. ಇದರಿಂದ ಭಾರತವು ಉಲ್ಲಾಸಗೊಂಡಿದೆ. ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಅಭಿನಂದನೆ. ಅವರ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಇಷ್ಟೇ ಅಲ್ಲದೆ, #Cheer4lndia ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಹುರಿದುಂಬಿಸಿದ್ದಾರೆ.

ಭಾರತ ಸರ್ಕಾರದಿಂದ ಹಿಡಿದು ಬಹುತೇಕ ಎಲ್ಲ ಮಾಧ್ಯಮಗಳು, ಕ್ರೀಡಾ ಫೆಡರೇಷನ್‌ಗಳು, ಕ್ರೀಡಾಭಿಮಾನಿಗಳು ಮೆಚ್ಚುಗೆ, ಹೆಮ್ಮೆಯ ಹಾಗೂ ಅಭಿಮಾನದ ಸಾಲುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಭಾರತಕ್ಕೆ ಹೆಮ್ಮೆ ತಂದ ಸಾಧಕಿ’ ಎಂದು ಚಿತ್ರ, ವಿಡಿಯೊಗಳ ಸಹಿತ ಪ್ರೀತಿಯ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪುರುಷರ 10 ಮೀ ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಮೊದಲಿಗರಾಗಿ ಆಟ ಮುಗಿಸಿದ್ದಾರೆ ಈ ಮೂಲಕ ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆ ಬಡ್ತಿ ಪಡೆದಿದ್ದಾರೆ.

Leave a Reply

error: Content is protected !!
Scroll to Top
%d bloggers like this: