ಸುಳ್ಯ : ವಾಹನಕ್ಕೆ ಸೈಡ್ ಕೊಡಲು ಹೋಗಿ ಸೇತುವೆಯಿಂದ ಕೆಳಕ್ಕೆ ಬಿದ್ದ ಬೈಕ್, ಬೈಕ್ ಸವಾರ ಅಪಾಯದಿಂದ ಪಾರು

ಸುಳ್ಯ: ದೊಡ್ಡತೋಟ – ಮರ್ಕಂಜ ರಸ್ತೆಯ ಕುದ್ಪಾಜೆ ಎಂಬಲ್ಲಿ‌ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸೇತುವೆಯಿಂದ ಕೆಳಗುರುಳಿದ ಘಟನೆ ಜುಲೈ 23 ರ ಸಂಜೆ ವರದಿಯಾಗಿದೆ.

ಬೊಳ್ಳಾಜೆಯ ಶಿವಪ್ರಸಾದ್ ಎಂಬವರು ದೊಡ್ಡತೋಟ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಸೇತುವೆಯ ಬಳಿ‌ ಬಂದಾಗ ವಾಹನಕ್ಕೆ ಸೈಡ್ ಕೊಡುವ ಸಂದರ್ಭ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗುರುಳಿದೆ.

ಬೈಕ್ ಜಖಂಗೊಂಡಿದ್ದು, ಸವಾರ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಈ ಸೇತುವೆಯಿಂದ ಈ ಹಿಂದೆಯೂ ವಾಹನ ಗಳು ಕೆಳಗೆ ಬಿದ್ದಿದ್ದವು. ಸೇತುವೆಯನ್ನು ಅಗಲಿಗೊಳಿಸಬೇಕು ಅಥವಾ ಸೇತುವೆಯ ಎರಡು ಬದಿಗೆ ತಡೆಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದಾರೆ.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: