ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಜು.23 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆದಿಲ ಗ್ರಾಮದ ಗಡಿಯಾರ ಮನೆಯ ಮಜೀದ್‌ ( 45 ) ಎಂದು ಗುರುತಿಸಲಾಹಿದೆ. ಈತನ ವಿರುದ್ದ ಪುತ್ತೂರು ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ: 143,147,148,326,504,506 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿತ್ತು.

ಆರೋಪಿಯ ಬಗ್ಗೆ ಪೊಲೀಸರು ಸುಮಾರು 2 ವರ್ಷಗಳಿಂದ ಮಾಹಿತಿ ಸಂಗ್ರಹಿಸಿ ಬೆಂಗಳೂರು ,ಕೋಲಾರ ಮುಂತಾದ ಕಡೆ ವಾಸವಿದ್ದು, ಬಳಿಕ ಕಳೆದ ಸುಮಾರು 3 ತಿಂಗಳಿನಿಂದ ಬಂಟ್ವಾಳದ ಗೂಡಿನ ಬಳಿ ವಾಸವಿರುವ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: