ಉತ್ತರ ಕನ್ನಡದ ಗ್ರಾಮದಲ್ಲಿ ಜಲದಿಗ್ಬಂಧನ | ಪ್ರವಾಹದ ಮಳೆಗೆ ರಸ್ತೆ ಮಧ್ಯೆ ಸಿಲುಕಿದ 30 ಮಂದಿ ಅತಂತ್ರ

ಗ್ರಾಮವೊಂದು ಜಲದಿಗ್ಬಂಧನಕ್ಕೆ ಒಳಗಾಗಿದ್ದು, ದಾರಿಮಧ್ಯೆ 30ಕ್ಕೂ ಹೆಚ್ಚು ಜನ ಸಿಲುಕಿರುದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಖೇತಿ ಗ್ರಾಮದಲ್ಲಿ ನಡೆದಿದೆ.

ಇದೀಗ ಧಾರಾಕಾರ ಮಳೆಯಿಂದಾಗಿ ಖಾನಾಪುರ-ಲೋಂಡಾ ಮಾರ್ಗ ಸಂಪರ್ಕ ಕಡಿತಗೊಂಡಿದ್ದು, ಜೋಯಿಡಾದ ಆಖೇತಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ.

ದಾರಿ ಮಧ್ಯೆ 30ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಅತ್ತ ಮನೆಗೆ ಹೋಗಲೂ ಆಗದೆ, ಇತ್ತ ಊಟ-ಕುಡಿವ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಮಾರ್ಗ ಜಲಾವೃತಗೊಂಡಿದ್ದು, ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ.

ನಿನ್ನೆ ಸಂಜೆಯಿಂದ ಪ್ರವಾಹಕ್ಕೆ ಸಿಲುಕಿರುವ ಕನ್ನಡಿಗರ ಕುಟುಂಬ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡುತ್ತಿದೆ. 30 ಜನರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಇದ್ದಾರೆ. ಸರ್ಕಾರ ಆದಷ್ಟು ಬೇಗ ಇವರ ರಕ್ಷಣಾ ಕಾರ್ಯಾಚರಣೆ ನಡೆಸಬೇಕಿದೆ.

Leave A Reply

Your email address will not be published.